ಕೆಕೆಆರ್‌ Vs ಗುಜರಾತ್ ಬಿಗ್‌ ಫೈಟ್‌ – ಗೆಲುವಿನ ಖಾತೆ ತೆರೆಯುತ್ತಾ ಅಜಿಂಕ್ಯ ರಹಾನೆ ಪಡೆ

ಕೆಕೆಆರ್‌ Vs ಗುಜರಾತ್ ಬಿಗ್‌ ಫೈಟ್‌ – ಗೆಲುವಿನ ಖಾತೆ ತೆರೆಯುತ್ತಾ ಅಜಿಂಕ್ಯ ರಹಾನೆ ಪಡೆ

ಐಪಿಎಲ್ 2026ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಕೆಕೆಆರ್ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಸತತ ಮೂರನೇ ಜಯದ ಗುರಿ ಹೊಂದಿದೆ.  ಬ್ಯಾಟಿಂಗ್ ಸ್ನೇಹಿ ಅಹಮದಾಬಾದ್ ಪಿಚ್‌ನಲ್ಲಿ ಬೌಂಡರಿಗಳು ದೊಡ್ಡದಾಗಿರುವುದರಿಂದ ಬ್ಯಾಟರ್‌ಗಳಿಗೆ ಸವಾಲು ಕಾದಿದೆ .

ಈ ಪಂದ್ಯವೂ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಸೋತ ನಂತರ ಗೆಲುವಿನ ಹಾದಿಗೆ ಮರಳಿರುವ ಜಿಟಿ, ಇಂದು ಕೋಲ್ಕತ್ತಾ ವಿರುದ್ಧ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಏತನ್ಮಧ್ಯೆ, ರಹಾನೆ ನೇತೃತ್ವದ ಕೆಕೆಆರ್ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದ ನಂತರ ತಮ್ಮ ಗೆಲುವಿನ ಖಾತೆಯನ್ನು ತೆರೆಯಲು ಎದುರು ನೋಡುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಅಕಾಲಿಕ ಮಳೆ ಎಫೆಕ್ಟ್ – ಗಂಗಾವತಿಯಲ್ಲಿ ಸಿಡಿಲು ಬಡಿದು ರೈತ ಸಾವು

  ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಎರಡನೇ ಪಂದ್ಯವಾಗಿದೆ. ಈ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಿತು. ಆ ಪಂದ್ಯದಲ್ಲಿ ಒಟ್ಟು 414 ರನ್‌ಗಳು ದಾಖಲಾಗಿದ್ದು, ಅಂತಿಮವಾಗಿ ಗುಜರಾತ್ 6 ರನ್‌ಗಳಿಂದ ಸೋತಿತು. ಎರಡೂ ತಂಡಗಳು 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾದವು. ಇಂದಿನ ಪಂದ್ಯದಲ್ಲೂ ಹೆಚ್ಚಿನ ಸ್ಕೋರ್​ ದಾಖಲಾಗುವ ನಿರೀಕ್ಷೆಯಿದೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ.​

ಐಪಿಎಲ್‌ನಲ್ಲಿ ಗುಜರಾತ್ ಮತ್ತು ಕೋಲ್ಕತ್ತಾ ತಂಡಗಳು ಇದುವರೆಗೆ ಐದು ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಪೈಕಿ ಗುಜರಾತ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಕಳೆದ ವರ್ಷ ಎರಡೂ ತಂಡಗಳು ಮುಖಾಮುಖಿಯಾದಾಗ, ಗುಜರಾತ್ ತಂಡ 39 ರನ್‌ಗಳಿಂದ ಗೆಲುವು ಸಾಧಿಸಿತು.

Kishor KV