CSKಗೆ ಇಂದು ಮಾಡು ಇಲ್ಲವೇ ಮಡಿ – ಚೆನ್ನೈ ಗೆಲುವಿಗಾಗಿ ಕಾದು ಕುಳಿತ RCB

CSKಗೆ ಇಂದು ಮಾಡು ಇಲ್ಲವೇ ಮಡಿ – ಚೆನ್ನೈ ಗೆಲುವಿಗಾಗಿ ಕಾದು ಕುಳಿತ RCB

ಇಂದು CSK VS GT ಮುಖಾಮುಖಿಯಾಗಲಿವೆ. ಈ ಮ್ಯಾಚ್​ನಲ್ಲಿ ಗೆದ್ದರೆ ಗುಜರಾತ್ ಟೈಟಾನ್ಸ್ 18 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಆಡುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು. ಅತ್ತ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ತಂಡ ಗೆಲ್ಲಲೇಬೇಕು. GT ವಿರುದ್ಧ ಚೆನ್ನೈ ಗೆದ್ದರೆ RCB ತಂಡವು ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಆರ್​ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ. ಏಕೆಂದರೆ ಇಂದಿನ ಪಂದ್ಯದಲ್ಲಿ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಸೋತರೆ,  18 ಅಂಕಗಳನ್ನು ಹೊಂದಿರುವ ಆರ್​ಸಿಬಿ ಮೊದಲ ಕ್ವಾಲಿಫೈಯರ್​ಗೆ ನೇರ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: ಕೆಕೆಆರ್ ಪ್ಲೇಆಫ್ ಕನಸು ಚಿಗುರಿಸಿದ ಕನ್ನಡಿಗ – ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೋಲಿನ ಮುಖಭಂಗ

ಸದ್ಯಕ್ಕೆ  18 ಅಂಕಗಳನ್ನು ಪಡೆಯಲು ಅವಕಾಶ ಇರುವುದು ಸನ್​ರೈಸರ್ಸ್ ಹೈದರಾಬಾದ್ ಹಾಗು ಗುಜರಾತ್ ಟೈಟಾನ್ಸ್ ತಂಡಗಳಿಗೆ ಮಾತ್ರ. ಇಲ್ಲಿ ಗುಜರಾತ್ ಟೈಟಾನ್ಸ್ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅತ್ತ ಆರ್​ಸಿಬಿ ತಂಡವು ಕೊನೆಯ ಮ್ಯಾಚ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೂ 18 ಅಂಕಗಳೊಂದಿಗೆ ಟಾಪ್-2 ನಲ್ಲೇ ಕಾಣಿಸಿಕೊಳ್ಳಲಿದೆ.

ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಈ ಮೂಲಕ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪಡೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದನ್ನು ಖಚಿತಪಡಿಸಿಕೊಳ್ಳಬಹುದು

Kishor KV

Leave a Reply

Your email address will not be published. Required fields are marked *