ರಿವೇಜ್ನಲ್ಲಿ ಎಡವಿದ್ದೇಲ್ಲಿ RCB! – ಲೋ ಸ್ಕೋರ್ ಡಿಫೆಂಡ್ ಕಷ್ಟನಾ?
ಬೆಥಲ್ ನಿರೀಕ್ಷೆ ಹುಸಿಯಾಯ್ತಾ?

ರಿವೇಂಜ್ ಮ್ಯಾಚ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಗೆದ್ದೇ ಗೆಲ್ಲುತ್ತೆ ಅಂತ ಎಲ್ಲರು ಅಂದ್ಕೊಂಡಿದ್ರು. ಆದ್ರೆ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಆರ್ಸಿಬಿ ಸ್ಕೋರ್ ಕಲೆಹಾಕೋದ್ರಲ್ಲಿ ಎಡವಿದ್ರು.. ವಿಕೆಟ್ಗಳು ಒಂದರ ಹಿಂದೆ ಒಂದಂತೆ ಬಿದ್ವು.. ಆರ್ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್ಗಳು ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಜಾಕೊಬ್ ಬೆಥೆಲ್ 5 ರನ್ಗಳಿಸಿದ್ರೆ, ವಿರಾಟ್ ಕೊಹ್ಲಿ 28, ದೇವದತ್ ಪಡಿಕ್ಕಲ್ 40 ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ಫೆಲ್ಯೂರ್ ಆದ್ರು. ಹಾಗೇ ಹೀಗೆ ಅಂತ 158 ರನ್ಗಳ ಟಾರ್ಗೆಟ್ನನ್ನ ಆರ್ಸಿಬಿ GTಗೆ ನೀಡ್ತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ 15.5 ಓವರ್ಗಳಲ್ಲಿ 6 ವಿಕೆಟ್ಗೆ 158 ರನ್ ಸೇರಿಸಿ ಜಯ ಸಾಧಿಸಿದೆ.
ರಿವೇಜ್ನಲ್ಲಿ ಎಡವಿದ್ದೇಲ್ಲಿ RCB!
ಈ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಕಾರಣ ಏನು ಅಂತ ನೋಡುದಾದ್ರೆ, ನಿಜಕ್ಕೂ ಟಾಪ್ ಆರ್ಡರ್ ಬ್ಯಾಟರ್ಗಳ ವೈಫಲ್ಯ ಎದ್ದು ಕಾಣುತ್ತದೆ. ಆರ್ಸಿಬಿ ಬ್ಯಾಟರ್ಗಳು ರನ್ ರೇಟ್ ಹೆಚ್ಚಿಸೋ ಭರದಲ್ಲೇ ಔಟ್ ಆಗಿರುವುದು ತಂಡಕ್ಕೆ ಎಫೆಕ್ಟ್ ಆಯ್ತು. ಎಲ್ಲ ಆಟಗಾರರು ದೊಡ್ಡ ಹಿಟ್ ಬಾರಿಸಲು ಹೋದರೆ ಹೊರತು ನಿಂತು ಆಡುವ ಗೋಜಿಗೆ ಹೋಗಲಿಲ್ಲ. ಅಲ್ಲದೆ ಈ ಪಂದ್ಯದಲ್ಲಿ ಜೊತೆಯಾಟಗಳು ಬಾರದೆ ಇರುವುದು ಸಹ ದೊಡ್ಡ ಮೊತ್ತದ ಆಸೆಗೆ ಪೆಟ್ಟು ನೀಡಿತು.
ಹಾಗೇ ಸೋಲಿನ ರಿವೇಂಜ್ ತಗೋಬೇಕು ಅಂತ ಕಣ್ಣಕ್ಕಿಳಿದಿದ್ದ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳು ಆರ್ಸಿಬಿ ಬ್ಯಾಟರ್ಗಳ ವಿರುದ್ಧ ಪಕ್ಕಾ ಪ್ಲ್ಯಾನ್ ಮಾಡಿದ್ರು. ಅದ್ದನ್ನ ಮೈದಾನದಲ್ಲಿ ಕಾರ್ಯರೂಪಕ್ಕೂ ಸಹ ತಂದರು. ಆರ್ಸಿಬಿ ಈ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಟಾಪ್ ಆರ್ಡರ್ ಬ್ಯಾಟ್ಸಮನ್ ಹೇಗೆ ಕೈ ಕೊಟ್ರೋ ಹಾಗೇ ಮಿಡಲ್ ಆರ್ಡರ್ ಬ್ಯಾಟ್ಸಮನ್ಗಳು ಕೈ ಕೊಟ್ಟು ಆರ್ಸಿಬಿ ಸೋಲಿಗೆ ಕಾರಣರಾದ್ರು. . ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಶೆಫರ್ಡ್, ಇಂಪ್ಯಾಕ್ಟ್ ಪ್ಲೇಯರ್ ಆದ ವೆಂಕಟೇಶ್ ಅಯ್ಯರ್ ಟೈಟಾನ್ಸ್ ಬೌಲರ್ಗಳು ಹೇರಿದ್ದ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಪರಿಣಾಮ ಆರ್ಸಿಬಿ ಮೂರನೇ ಸೋಲು ಕಾಣಲು ಕಾರಣರಾದರು.
ಬೆಥಲ್ ನಿರೀಕ್ಷೆ ಹುಸಿಯಾಯ್ತಾ?
ಬೆಂಗಳೂರಿನಲ್ಲಿ ನಡೆದ ಅಭ್ಯಾಸದ ವೇಳೆ ಗಾಯಗೊಂಡಿದ್ದ ಆರ್ಸಿಬಿ ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ 3 ಪಂದ್ಯದಿಂದ ಆಡಿಲ್ಲ. ಸಾಲ್ಟ್ ಬದಲು ಬೆಥಲ್ರನ್ನ ಕಣಕ್ಕಿಳಿಸಲಾಗಿತ್ತು. ಆದ್ರೆ ಬೆಥಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ಪಂದ್ಯ ಮತ್ತು GT ವಿರುದ್ಧ ಎರಡು ಮ್ಯಾಚ್ ಆಡಿದ್ದಾರೆ. ಆದ್ರೆ 3 ಪಂದ್ಯದಿಂದಲೂ ಬೆಥಲ್ ಬ್ಯಾಟ್ನಿಂದ ರನ್ ಬಂದಿಲ್ಲ.. ಸಾಕಷ್ಟು ನಿರೀಕ್ಷೆ ಇತ್ತು . ಇವರು ಮೇಲೆ ಓಪನರ್ ಆಗಿ, ತಂಡಕ್ಕೆ ಪ್ಲಸ್ ಆಗ್ತಾರೆ ಅಂತ. ಆದ್ರೆ ಅದು ಹುಸಿಯಾಗಿದೆ. ಇನ್ನು ಇವರನ್ನ ನ್ನ ಯಾಕೆ ಹೊರಗೆ ಕುರಿಸಿದ್ದೀರಾ? ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡಿ ಅಂತ ಸಾಕಷ್ಟು ಜನ ಒತ್ತಾಯ ಮಾಡಿದ್ರು. ಚಾನ್ಸ್ ಕೊಟ್ರೂ ಕೂಡ, ಬೆಥಲ್ ಪೆಲ್ಯೂರ್ ಆಗಿದ್ದಾರೆ.
ಹ್ಯಾಜಲ್ವುಡ್ ದುಬಾರಿ ಬೌಲಿಂಗ್
GT ವಿರುದ್ಧದ ಪಂದ್ಯದಲ್ಲಿ ಜೋಶ್ ಹ್ಯಾಜಲ್ವುಡ್ ದುಬಾರಿಯಾದರು. ಹ್ಯಾಜಲ್ವುಡ್ ತಮ್ಮ ನಾಲ್ಕು ಓವರ್ಗಳಲ್ಲಿ ಬರೋಬ್ಬರಿ 56 ರನ್ ನೀಡಿ ಒಂದು ವಿಕೆಟ್ ಪಡೆಯಲಿಲ್ಲ. ಒಂದು ಹ್ಯಾಜಲ್ವುಡ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ವಿಕೆಟ್ ಪಡೆದಿದ್ದರೆ, ಆರ್ಸಿಬಿ ಗೆಲುವಿನ ಸನಿಹ ಹೋಗುತ್ತಿತ್ತು.
ಇಂಪ್ಯಾಕ್ಟ್ ಮಾಡದ ಇಂಪ್ಯಾಕ್ಟ್ ಪ್ಲೇಯರ್
ಆರ್ಸಿಬಿ ಬ್ಯಾಟಿಂಗ್ ಕ್ರಮಾಂಕ ಬೇಗ ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೆಂಕಟೇಶ್ ಅಯ್ಯರ್ ಕಣಕ್ಕೀಳಿದರು. ಆದರೆ, ವೆಂಕಟೇಶ್ ಅಯ್ಯರ್ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಅಯ್ಯರ್ 15 ಎಸೆತಗಳನ್ನು ಎದುರಿಸಿ 1 ಬೌಂಡರಿ ನೆರವಿನಿಂದ ಕೇವಲ 12 ರನ್ ಗಳಿಸಿ ಔಟಾದರು. ವೆಂಕಟೇಶ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ಮಾಡಲಬಲ್ಲರು. ಆದರೆ, ಗುಜರಾತ್ ವಿರುದ್ಧ ಅವರ ಬ್ಯಾಟಿಂಗ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವರ ನಿಧಾನಗತಿ ಬ್ಯಾಟಿಂಗ್ ಕೂಡ ತಂಡದ ಸೋಲಿಗೆ ಕಾರಣ.
ಲೋ ಸ್ಕೋರ್ ಡಿಫೆಂಡ್ ಕಷ್ಟನಾ?
ಲೋ ಸ್ಕೋರ್ ಡಿಫೆಂಡ್ ಕಷ್ಟನಾ ಅನ್ನೋ ಪ್ರಶ್ನೆ ಬರುತ್ತೆ. ಯಾಕಂದ್ರೆ ಈ ಸಲದ ಐಪಿಎಲ್ ಪಂದ್ಯ ನೋಡಿದ್ರೆ ಲೋ ಸ್ಕೋರ್ ಮ್ಯಾಚ್ ತುಂಬಾ ಕಮ್ಮಿ.. ಎಲ್ಲಾ ಹೈ ಸ್ಕೋರ್ ಮ್ಯಾಚ್ಗಳೇ.. 200 ಪ್ಲೇಸ್ ರನ್ಗಳ ಟಾರ್ಗೆಟ್ನನ್ನ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕೊಡ್ತಿವೆ. 264 ರನ್ನನ್ನೇ ಈ ಸಲ ಪಂಜಾಬ್ ಚೇಸ್ ಮಾಡಿದೆ.. ಹೀಗಾಗಿ ಹೈಸ್ಕೋರ್ ಮ್ಯಾಚ್ಗಳನ್ನೇ ಡಿಫೆಂಡ್ ಮಾಡಿಕೊಳ್ಳುವುದ್ದಕ್ಕೆ ಆಗ್ತಿಲ್ಲ.. ಹಾಗೇ ಲೋ ಸ್ಕೋರ್ನನ್ನ ಡಿಫೆಂಡ್ ಮಾಡುವುದು ಎಲ್ಲಾ ತಂಡಗಳಿಗೂ ಕಷ್ಟನಾ ಆಗ್ತಿದೆ. ಬೌಲರ್ಗಳು ಹೇಗೆ ಬೌಲಿಂಗ್ ಮಾಡಿದ್ರೂ ಕೂಡ ಬ್ಯಾಟರ್ಗಳು ಸಿಕ್ಸ್ ಫೋರ್ಗಳನ್ನ ಹೊಡೆಯುತ್ತಿದ್ದಾರೆ.. ಈ ಹಿಂದಿನ ಸೀಸನ್ಗಳಲ್ಲಿ ಸಾಕಷ್ಟು ಲೋ ಸ್ಕೋರ್ ಟಾರ್ಗೆಟ್ ಕೊಟ್ಟು ಡಿಫೆಂಡ್ ಮಾಡಿಕೊಂಡಿವೆ. ಆದ್ರೆ ಆ ಸೀಸನ್ನಲ್ಲಿ ಅರ್ಧಕ್ಕೆ ಅರ್ಧಕ್ಕೆ ಐಪಿಎಲ್ ಮುಗಿದ್ರು ಲೋ ಸ್ಕೋರ್ ಪಂದ್ಯನಾ ಯಾವ ತಂಡ ಕೂಡ ಡಿಫೆಂಡ್ ಮಾಡಿಕೊಂಡು ಗೆದ್ದಿಲ್ಲ.. ಆದ್ರೆ ನಿನ್ನೆ ಆರ್ಸಿಬಿ ಬೌಲರ್ಗಳು ಮನಸ್ಸು ಮಾಡಿದ್ರೆ ನಿನ್ನೆ ಪಂದ್ಯವನ್ನ ಗೆಲ್ಲಬಹುದಿತ್ತು ಅನ್ಸುತ್ತೆ..

ನೋಡಿರಿ

