ರಾಜ್ಯದ ಗೃಹಲಕ್ಷ್ಮೀಯರಿಗೆ ಗುಡ್‌ನ್ಯೂಸ್! – ಈ ವಾರವೇ ಬರಲಿದೆ ಗೃಹಲಕ್ಷ್ಮಿ 2000 ಹಣ!

ರಾಜ್ಯದ ಗೃಹಲಕ್ಷ್ಮೀಯರಿಗೆ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಬಾಕಿ ಇರುವ ಮೂರು ತಿಂಗಳ ಗೃಹಲಕ್ಷ್ಮೀ ಹಣವನ್ನ ಈ ವಾರ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಳಿತಾಯ ಅಂದರೆ ಇದಪ್ಪಾ..! – 5 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಫುಡ್ ಡೆಲಿವರಿ ಬಾಯ್
ಮೂರು ತಿಂಗಳಿಂದ ಗಹಲಕ್ಷ್ಮೀ ಹಣ ಬಂದಿಲ್ಲ ಎಂದು ರಾಜ್ಯದ ಮಹಿಳೆಯರು ದೂರುತ್ತಾ ಬಂದಿದ್ರು. ಈ ವಿಚಾರ ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವಾರ ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸತ್ತವರ ಅಕೌಂಟ್ಗೂ ಗೃಹಲಕ್ಷ್ಮೀ ಹಣ ಸಂದಾಯವಾಗಿರುವ ಕುರಿತು ಮಾತಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈ ಬಗ್ಗೆ ಚರ್ಚಿಸಲೆಂದೇ, ಸಿಎಸ್ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಿದೆ. ಸತ್ತವರ ಅಕೌಂಟ್ಗೆ ಹಣ ಸಂದಾಯವಾದ ತಕ್ಷಣ ಗೊತ್ತಾಗಲ್ಲ. ಹೀಗಾಗಿ ಸಾಫ್ಟವೇರ್ ಅಭಿವೃದ್ಧಿ ಅಳವಡಿಕೆ ಮಾಡಿದ್ದೇವೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡ್ತಾರೆ. ಹೀಗಾಗಿ ಅದನ್ನ ಸದ್ಯಕ್ಕೆ ತಡೆದಿದ್ದು, ರಿಕವರಿ ಮಾಡೋ ಹೊಣೆಗಾರಿಕೆಯನ್ನ ಕೆಲ ಬ್ಯಾಂಕ್ಗಳಿಗೆ ನೀಡಿರೋದಾಗಿ ಸಚಿವೆ ಹೇಳಿದ್ದಾರೆ.

ನೋಡಿರಿ

