ಗೃಹ ಲಕ್ಷ್ಮಿ ದುಡ್ಡು ಯಾವಾಗ?- ಕಂತು ಹಣ ಯಾವ ಹಬ್ಬಕ್ಕೆ?
ಸರ್ಕಾರದಲ್ಲಿ ಏನಾಗ್ತಿದೆ ಗೊತ್ತಾ?

ಗೃಹ ಲಕ್ಷ್ಮಿ ದುಡ್ಡು ಯಾವಾಗ?- ಕಂತು ಹಣ ಯಾವ ಹಬ್ಬಕ್ಕೆ?ಸರ್ಕಾರದಲ್ಲಿ ಏನಾಗ್ತಿದೆ ಗೊತ್ತಾ?

ಗೃಹಲಕ್ಷ್ಮಿ.. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ..  ತಿಂಗಳಿಗೆ 2000 ಹಣ ನೀಡುವ ಗೃಹಲಕ್ಷ್ಮೀ ಯೋಜನೆ ರಾಜ್ಯದ ಮಹಿಳೆಯರಿಗೆ ಖುಷಿ ತಂದಿತ್ತು. ಲೋಕಸಭಾ ಚುನಾವಣೆ ತನಕ ಅಚ್ಚುಕಟ್ಟಾಗಿ ಹಣ ಹಾಕಿದ್ದ ರಾಜ್ಯ ಸರ್ಕಾರ ಈಗ ತನ್ನ ವರಸೆ ಬಲಿಸಿದೆ.. ಎಲೆಕ್ಷನ್ ಮುಗಿದ ಮೇಲೆ ಹಣ ಹೋಕೋದನ್ನೇ ರಾಜ್ಯ ಸರ್ಕಾರ ಮರೆತು ಬಿಟ್ಟಿದೆ.. ಹಾಗಿದ್ರೆ ಗೃಹಲಕ್ಷ್ಮೀ ಹಣ ಇನ್ನು ಮುಂದೆ ಬರುತ್ತಾ..? ಬರಲ್ವಾ..? ಬಂದ್ರೆ ಯಾವಾಗ ಬರುತ್ತೆ..? ಯಾಕೆ ಇಷ್ಟು ತಡ ಆಗುತ್ತಿದೆ ಬನ್ನಿ ನೋಡೋಣ..

ಇದನ್ನೂ ಓದಿ :  ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಬಿಎಂಆರ್‌ಸಿಎಲ್‌ –  ನಮ್ಮ ಮೆಟ್ರೋ ದರ ಏರಿಕೆ?

ರಾಜ್ಯ ಸರ್ಕಾರ ಮಹಿಳೆಯರ ಅಕೌಂಟ್‌ಗೆ ಪ್ರತಿ ತಿಂಗಳು 2000 ಸಾವಿರ ಹಣವನ್ನ ಹಾಕುತಿತ್ತು.. ಹೀಗಾಗಿ ಆ ಹಣಕ್ಕಾಗಿ ರಾಜ್ಯದ ಮಹಿಳೆಯರು ಕಾದು ಕುಳಿತ್ತಿದ್ದಾರೆ.. ಎಲೆಕ್ಷನ್‌ ತನಕ ಫಾಟಾಫಟ್ ಅಂತಾ ಅಂಕೌಂಟ್‌ಗೆ ಹಣ ಬಂದು ಬೀಳುತಿತ್ತು.. ಆದ್ರೆ ಎಲೆಕ್ಷನ್ ಆಗುತ್ತಿದ್ದಂತೆ ಸರ್ಕಾರ ಹಣ ಸರಿಯಾಗಿ ಹಾಕುತ್ತಿಲ್ಲ.. ಕಳೆದ 5 ತಿಂಗಳಲ್ಲಿ ಕೇವಲ ಒಂದು ತಿಂಗಳ ಹಣವನ್ನ ಮಾತ್ರ ಸರ್ಕಾರ ಹಾಕಿದೆ.. ಸುಮಾರು 4 ತಿಂಗಳ ಹಣ ಸರ್ಕಾರ ಹಾಕಬೇಕಿದೆ. . ಹೀಗಾಗಿ ದಿನ ಮಹಿಳೆಯರು ಅಕೌಂಟ್‌ಗೆ ಹಣ ಬಂದಿದ್ಯಾ ಅನ್ನೋದನ್ನ ಚೆಕ್ ಮಾಡೋಕೆ ಪಾಸ್ ಬುಕ್‌ ಹಿಡ್ಕೊಂಡು ಬ್ಯಾಂಕ್‌ಗೆ ಅಲೆಯುವಂತಾಗಿದೆ.

ಅಲ್ಲದೇ ದಸರಾ, ದೀಪಾವಳಿ ಹಬ್ಬಗಳು ಬರುತ್ತಿವೆ.  ಸಾಲು ಸಾಲು ಹಬ್ಬಗಳು ಇರೋವಾಗ ವಿಶೇಷವಾಗಿ ಮಹಿಳೆಯರು ಒಂದಷ್ಟು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಬಂದ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರದ ಹಣವನ್ನು ನೆಚ್ಚಿಕೊಂಡಿದ್ದರು. ಆದ್ರೆ ಹಣ ಹಾಕದೇ ಇರೋದು ಅವರಿಗೆ ಬೇಸರ ತರಿಸಿದೆ. ಹಣ ಬರುತ್ತಾ ಇಲ್ವಾ ಅನ್ನೋ ಅನುಮಾನ ಮೂಡಿದೆ..

ದಸರಾ, ದೀಪಾವಳಿಗೆ ಸಿಗುತ್ತಾ ಗುಡ್‌ನ್ಯೂಸ್‌..?

ಇದೀಗ ಹಬ್ಬದ ಸಮಯದಲ್ಲೇ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರ ಮುಖದಲ್ಲಿ ಸಂತಸ ತರಲು ತೀರ್ಮಾನಿಸಿದೆ.  ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ  ಆಗಸ್ಟ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಹಣ ನಿಲ್ಲೊದಿಲ್ಲ ಅಂತಾ ರಾಜ್ಯ ಸರ್ಕಾರ ಹೇಳುತ್ತಿದೆ.. ಆದ್ರೆ ಸರ್ಕಾರದ ಕೈಯಲ್ಲಿ ಹಾಕೋಕೆ ಹಣ ಇಲ್ಲದೇ ಪರದಾಡುತ್ತಿದೆ.. ಒಬ್ಬ ಯಜಮಾನ ಮಗಳ ಮದುವೆಗೆ ಅಲ್ಲಿ ಇಲ್ಲಿ ಹಣ ತಂದು ಹಾಕುವಂತೆ ಸರ್ಕಾರ ಕೂಡ ಆ ಇಲಾಖೆ ಈ ಇಲಾಖೆ ಬಳಿ ಇರೋ ಹಣವನ್ನ ತಂದು ಗ್ಯಾರಂಟಿ ಯೋಜನೆೆಗೆ ಸುರಿಯುತ್ತಿದೆ.. ಇಲ್ಲಿ ತನಕ ರಾಜ್ಯದ ಗೃಹಿಣಿಯರಿಗೆ ಈವರೆಗೂ ಬರೋಬ್ಬರಿ 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಜಮೆ ಮಾಡಲಾಗಿದೆ. ಒಂದು ತಿಂಗಳು ಗೃಹಲಕ್ಷ್ಮೀ ಯೋಜನೆಗೆ 2200 ಕೋಟಿಯಿಂದ 2500 ಕೋಟಿ ಹಣ ಬೇಕು. ಈ ಒಂದೇ ಯೋಜನೆ ಸರ್ಕಾರಕ್ಕೆ ದೊಡ್ಡ ಸವಲಾಗಿ ಪರಿಣಮಿಸಿದೆ.. ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಅನ್ನೋ ಹಾಗಾಗಿದೆ.. ಹೀಗಾಗಿ ಸರ್ಕಾರ ತಾಂತ್ರಿಕ ಕಾರಣ ಹೇಳಿ ಹಣ ಹಾಕದೇ ಸುಮ್ಮನೆ ಇದ್ಯಾ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.. ಸರ್ಕಾರ ಬಂದು ಒಂದೂವರೆ ವರ್ಷಕ್ಕೆ ಹಣ ಹೊಂದಿಸೋಕೆ ಸರ್ಕಾರ ಸರ್ಕಸ್ ಮಾಡುತ್ತಿದ್ದು, ಇನ್ನೂ ಮೂರವರೆ ವರ್ಷ ಹೇಗೆ ಇದನ್ನೇಲ್ಲಾ ನಿಭಾಯಿಸುತ್ತೋ ಗೊತ್ತಿಲ್ಲ.  ಗ್ಯಾರಂಟಿ ಯೋಜನೆಗೆ ಹಣ ಸುರಿದು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಸರಿಯಾಗಿ ಆಗುತ್ತಿಲ್ಲ..  ಏನೇ ಇದ್ರೂ ಗ್ಯಾರಂಟಿ ಯೋಜನೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಣ ಹೊಂದಿಸಲೇ ಬೇಕು..

Kishor KV

Leave a Reply

Your email address will not be published. Required fields are marked *