ಜುಲೈ 1 ರಿಂದ 200 ಯುನಿಟ್‌ ವಿದ್ಯುತ್‌ ಉಚಿತ – ಬಾಡಿಗೆ ಮನೆಯಲ್ಲಿ ಇರುವವರಿಗೆ ಫ್ರೀ ಇದೆಯೇ?

ಜುಲೈ 1 ರಿಂದ 200 ಯುನಿಟ್‌ ವಿದ್ಯುತ್‌ ಉಚಿತ – ಬಾಡಿಗೆ ಮನೆಯಲ್ಲಿ ಇರುವವರಿಗೆ ಫ್ರೀ ಇದೆಯೇ?

ಬೆಂಗಳೂರು: 5 ಗ್ಯಾರಂಟಿಗಳನ್ನ ಪ್ರಸ್ತುತ ಆರ್ಥಿಕ ವರ್ಷದಲ್ಲೇ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿದೆ. ಮೊದಲ ಗ್ಯಾರಂಟಿಯಾಗಿರುವ ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದೆ. ಜುಲೈ 1 ರಿಂದ ಬಳಕೆ ಮಾಡುವ 200 ವಿದ್ಯುತ್‌ ಉಚಿತವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ಪುರುಷರಿಗೆ ಶೇ. 50 ರಷ್ಟು ಸೀಟ್‌ ಮೀಸಲು!  

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಗದಿತ ಪ್ರಮಾಣದಷ್ಟು ವಿದ್ಯುತ್ ಬಳಸಿದರೆ ಬಿಲ್ಲ ಕಟ್ಟುವಂತಿಲ್ಲ. 12 ತಿಂಗಳ ಆವರೇಜ್​ ವಿದ್ಯುತ್ ಬಳಕೆ ಮೇಲೆ ಶೇ. 10 ರಷ್ಟು ಸೇರಿಸಿ ಹೆಚ್ಚುವರಿ ವಿದ್ಯುತ್​ ನೀಡುತ್ತೇವೆ. 50 ಯುನಿಟ್ ಬಳಸುತ್ತಿದ್ದವರು 199 ಯುನಿಟ್ ಬಳಸಿದರೆ ಅಂತಹ ಗ್ರಾಹಕರನ್ನು ಗೃಹಜ್ಯೋತಿ ಯೋಜನೆಗೆ ಪರಿಗಣಿಸಲಾಗುವುದಿಲ್ಲ. ಹಿಂದಿನ ತಿಂಗಳಲ್ಲಿ ಬಾಕಿ ಇರಿಸಿರುವ ವಿದ್ಯುತ್ ಬಿಲ್ ಅನ್ನು ಗ್ರಾಹಕರು ಕಟ್ಟಬೇಕು ಎಂದರು.

ಗೃಹ ಜ್ಯೋತಿ ಯಲ್ಲಿ ಕಳೆದ ವರ್ಷದ 12 ತಿಂಗಳ ಸರಾಸರಿ ಪಡೆದುಕೊಳ್ಳುತ್ತೇವೆ. ಕಮರ್ಷಿಯಲ್ ವಿದ್ಯುತ್​ಗೆ ಈ ಯೋಜನೆ ಅನ್ವಯ ಆಗುವುದಿಲ್ಲ. ಬಾಡಿಗೆದಾರರು ಬಿಲ್ ಕಟ್ಟುತ್ತಾ ಇದ್ದರೆ ಅವರಿಗೆ ಉಚಿತ ವಿದ್ಯುತ್ ಕೊಡುತ್ತೇವೆ. ಒಂದು ಮನೆಯಲ್ಲಿ ಒಂದಕ್ಕಿಂತ ಜಾಸ್ತಿ ಆರ್ ಆರ್ ನಂಬರ್ ಇದ್ದರೆ ಅದು ಕಮರ್ಷಿಯಲ್ ಆಗುತ್ತದೆ. ಹಾಗಾಗಿ ಬಾಡಿಗೆದಾರರಿಗೆ ಉಚಿತ ಅನ್ವಯ ಇಲ್ಲ. ಸಿಂಗಲ್ ಬಿಲ್ಡಿಂಗ್​ನಲ್ಲಿ ಬಾಡಿಗೆದಾರರಾಗಿದ್ದು ಆರ್ ಆರ್ ನಂಬರ್ ಮಾತ್ರ ಇದ್ದರೆ ಉಚಿತ ವಿದ್ಯುತ್ ನೀಡಲಾಗುವುದು. ಒಂದು ಬಿಲ್ಡಿಂಗ್​ನಲ್ಲಿ ಒಂದು ಮನೆಯ ಆರ್ ಆರ್ ನಂಬರ್ ಮಾತ್ರ ಪರಿಗಣನೆ ಮಾಡಲಾಗುವುದು. ಗೃಹ ಜ್ಯೋತಿ ಅಡಿಯಲ್ಲಿ ಒಂದು ಬಿಲ್ಡಿಂಗ್​ನಲ್ಲಿ ಒಂದಕ್ಕಿಂತ ಹೆಚ್ಚು ಆರ್ ಆರ್ ನಂಬರ್ ಇದ್ದಾಗ ಅದು ಬಿಲ್ಡಿಂಗ್ ಮಾಲೀಕರಿಗೆ ಮಾತ್ರ ಅನುಕೂಲವಾಗಲಿದೆ. ಒಂದು ಬಿಲ್ಡಿಂಗ್​ನಲ್ಲಿ ಒಂದು ಆರ್ ಆರ್ ನಂಬರ್ ಮಾತ್ರ ಪರಿಗಣನೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

suddiyaana