ಮನೆ ಮತ್ತು ಕುಟುಂಬದಲ್ಲಿ ನೆಮ್ಮದಿ ಬೇಕಾ – ಮನೆಯಲ್ಲಿ ಈ ಗಿಡಗಳನ್ನ ಬೆಳಸಿ

ಮನೆ ಮತ್ತು ಕುಟುಂಬದಲ್ಲಿ ನೆಮ್ಮದಿ ಬೇಕಾ – ಮನೆಯಲ್ಲಿ ಈ ಗಿಡಗಳನ್ನ ಬೆಳಸಿ

ಹಿಂದೂ ಧರ್ಮಗ್ರಂಥಗಳು ತಿಳಿಸುವ ಪ್ರಕಾರ, ನಮ್ಮ ಸುತ್ತಲಿನ ಪ್ರಕೃತಿ ಹಾಗೂ ನಮ್ಮ ಜೀವನಶೈಲಿಯ ನಡುವೆ ಆಳವಾದ ಸಂಬಂಧವಿದೆ.  ಹಾಗೇ ಮನಿ ಪ್ಲಾಂಟ್ ಇದು ಆರ್ಥಿಕ ಸಮೃದ್ಧಿಯ ಸಂಕೇತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯವು ಸಂಪತ್ತನ್ನು ಆಕರ್ಷಿಸುವುದಲ್ಲದೇ ಗಂಡ ಹಾಗೂ ಹೆಂಡತಿಯ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. ಮನಿ ಪ್ಲಾಂಟ್​ ಶುಕ್ರ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯದ ಬಳ್ಳಿಗಳು ಹಸಿರು ಮತ್ತು ದಟ್ಟವಾಗಿ ಬೆಳೆದರೆ ಸಂಪತ್ತು ಮನೆಗೆ ಹರಿದು ಬರುವುದು ಸುಲಭವಾಗುತ್ತದೆ. ಈ ಸಸ್ಯವು ಸಮೃದ್ಧಿಯನ್ನು ಆಕರ್ಷಿಸುತ್ತದೆ, ಮನೆ ಮತ್ತು ಕುಟುಂಬವನ್ನು ಸ್ಥಿರಗೊಳಿಸುತ್ತದೆ, ಸಂತೋಷ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ. ಮನಿ ಪ್ಲಾಂಟ್​ ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದನ್ನು ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಎಂದು ತಜ್ಞರು ಹೇಳುತ್ತಾರೆ.

ತುಳಸಿ ಸಸಿ: ಸನಾತನ ಧರ್ಮದಲ್ಲಿ ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ‘ವಿಷ್ಣು ಪ್ರಿಯ’ ಎಂದು ಕರೆಯಲಾಗುತ್ತದೆ. ಅಂದರೆ, ವಿಷ್ಣುವಿಗೆ ಪ್ರಿಯವಾದದ್ದು, ಮನೆ ಬಾಗಿಲಲ್ಲಿ ತುಳಸಿ ಸಸ್ಯವಿರುವ ಮನೆ ವಾಸ್ತು ದೋಷಗಳಿಂದ ಮುಕ್ತವಾಗಿರುತ್ತದೆ. ಇದು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಗಾಳಿಯನ್ನು ಶುದ್ಧೀಕರಿಸುತ್ತದೆ, ರೋಗಗಳನ್ನು ದೂರವಿಡುತ್ತದೆ. ತುಳಸಿ ನಂಬಿಕೆಯ ಕೇಂದ್ರ ಮಾತ್ರವಲ್ಲದೆ ಸಕಾರಾತ್ಮಕ ಶಕ್ತಿಯ ಮೂಲವಾಗಿದೆ. ತುಳಸಿ ಸಸ್ಯವನ್ನು ನೆಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಬರುತ್ತದೆ. ತುಳಸಿ ಸಸ್ಯವನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.

ಬಿದಿರಿನ ಸಸಿ: ಬಿದಿರನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಐದು ಅಂಶಗಳನ್ನು ಸಮತೋಲನಗೊಳಿಸುತ್ತದೆ. ಭೂಮಿ, ನೀರು, ಬೆಂಕಿ, ಲೋಹ ಮತ್ತು ಮರ. ಇದು ದೀರ್ಘಾಯುಷ್ಯ ಹಾಗೂ ಅಪಾರ ಅದೃಷ್ಟವನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ, ಇದನ್ನು ಪೂರ್ವ ದಿಕ್ಕಿನಲ್ಲಿರಸಬೇಕು. ಆರ್ಥಿಕ ಲಾಭಕ್ಕಾಗಿ ಇದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು.

ಶಂಖಪುಷ್ಪ: ಅಪರಾಜಿತಾ ಸಸ್ಯ ಅಥವಾ ಶಂಖಪುಷ್ಪ ಎಂದರೆ ‘ಸೋಲಿಸಲು ಸಾಧ್ಯವಾಗದವನು’. ಈ ನೀಲಿ ಹೂವುಳ್ಳ ಬಳ್ಳಿ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಎಂಬ ಪ್ರತೀತಿ ಇದೆ. ಆದ್ದರಿಂದ ಇದನ್ನು ‘ವಿಷ್ಣು ಕಾಂತ’ ಎಂದೂ ಕರೆಯುತ್ತಾರೆ. ಈ ಬಳ್ಳಿ ಬೆಳೆಯುವ ಮನೆ ಆರ್ಥಿಕ ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ. ಕುಟುಂಬ ಸದಸ್ಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬೇಕು.

Kishor KV