ಅದೃಷ್ಟ ಅಂದ್ರೆ ಇದಪ್ಪ.. ನಾಲ್ವರನ್ನ ಮದುವೆಯಾದ ಭೂಪ – ಒಂದೇ ಮಂಟಪದಲ್ಲಿ ವಧುಗಳ ಜೊತೆ ಸಪ್ತಪದಿ!

ಮದುವೆಯಾಗೋಕೆ ಹುಡುಗಿನೆ ಸಿಗುತ್ತಿಲ್ಲ ಅಂತಾ ಗೋಳಾಡುವ ಹುಡುಗರ ನಡುವೆ ಇಲ್ಲೊಬ್ಬ ಒಂದೇ ಮಂಟಪದಲ್ಲಿ ನಾಲ್ವರನ್ನ ಮದುವೆಯಾಗಿದ್ದಾನೆ. ಎಲ್ಲಾ ಹುಡುಗಿಯರು ಖುಷಿ ಖುಷಿಯಿಂದ ಆತನ ಹಿಂದೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ : ನೀವು ಊಟದ ಮಧ್ಯೆ ನೀರು ಕುಡಿತೀರಾ? – ನೀರಿನಿಂದಲೇ ಶುರುವಾಗುತ್ತೆ ಹಲವು ಸಮಸ್ಯೆ!
ಒಳ್ಳೆ ಕೆಲಸ ಇದ್ದು, ಕೈತುಂಬಾ ಸಂಬಳ ಬಂದ್ರೂ ಕೆಲವರಿಗೆ ಮದುವೆಯಾಗೋಕೆ ಹೆಣ್ಣು ಸಿಗಲ್ಲ. ಇನ್ನೂ ಕೆಲವ್ರು ವಯಸ್ಸು 30 ದಾಟಿತು ಹುಡುಗಿಯೇ ಸಿಗುತ್ತಿಲ್ಲ ಅಂತಾ ತಲೆಕೆಡಿಸಿಕೊಳ್ತಿದ್ದಾರೆ. ಅಷ್ಟೇ ಯಾಕೆ ನಮ್ಮ ರಾಜ್ಯದಲ್ಲೇ ವಧು ಸಿಗುತ್ತಿಲ್ಲ ಅಂತಾ ಸಿಎಂಗೂ ಪತ್ರ ಬರೆದಿದ್ದರು. ಆದ್ರೆ ಈತ ಮಾತ್ರ ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾಗಿದ್ದಾನೆ. ವೈಟ್ ಌಂಡ್ ವೈಟ್ ಡ್ರೆಸ್ ನಲ್ಲಿ ಕೆಂಪು ಪೇಟ ತೊಟ್ಟು ನಾಲ್ವರು ವಧುಗಳ ಜೊತೆ ಸಪ್ತಪದಿ ತುಳಿದಿದ್ದಾನೆ. ಹುಡುಗಿಯರೆಲ್ಲಾ ಕಲರ್ ಫುಲ್ ಡ್ರೆಸ್ ತೊಟ್ಟು ಒಬ್ಬರ ಹಿಂದೆ ಒಬ್ಬರಂತೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋ ಫುಲ್ ವೈರಲ್ ಆಗಿದೆ. ಕೆಲವ್ರು ನಿಂದೇ ಅದೃಷ್ಟ, ಇದಪ್ಪ ಲಾಟರಿ ಅಂದ್ರೆ ಅಂತಾ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವ್ರು ನಿನ್ನ ಧೈರ್ಯ ಮೆಚ್ಚಲೇಬೇಕು. ಮುಂದಿನ ಭವಿಷ್ಯ ನಮಗೆ ಕಾಣ್ತಿದೆ ಅಂತಾ ಕಾಲೆಳೆದಿದ್ದಾರೆ.
ಕಳೆದ ವರ್ಷ ಕೂಡಾ ಜಾರ್ಖಂಡ್ನಲ್ಲಿ ಇಂತಹದ್ದೆ ಘಟನೆ ನಡೆಡಿತ್ತು. ಸಂದೀಪ್ ಎಂಬ ವ್ಯಕ್ತಿ ಒಂದೇ ಮದುವೆ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದರು. ಸಂದೀಪ್ ಅವರು ಇಬ್ಬರು ಮಹಿಳೆಯರನ್ನು ಪ್ರೀತಿಸುತ್ತಿದ್ದು, ತನ್ನ ಮೊದಲ ಸಂಗಾತಿ ಕುಸುಮ್ ಅವರೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅವರೊಂದಿಗೆ ಮಗುವನ್ನು ಹೊಂದಿದ್ದರು. ಸ್ವಾತಿ ಕುಮಾರಿ ಎಂಬ ಇನ್ನೊಬ್ಬ ಮಹಿಳೆಯೊಂದಿಗಿನ ಅವನ ಸಂಬಂಧವು ಬಹಿರಂಗವಾದ ನಂತರ, ಅವನು ಎರಡೂ ಮಹಿಳೆಯರನ್ನು ಮದುವೆಯಾಗಬೇಕೆಂದು ನಿರ್ಧರಿಸಿದ ಪಂಚಾಯತ್ ಅನ್ನು ಕರೆಯಲಾಯಿತು. ನಂತರ ಇಬ್ಬರನ್ನು ಮದುವೆಯಾಗಿದ್ದನು. ಇಂತಹ ನಿದರ್ಶನಗಳು ಸಾಂಪ್ರದಾಯಿಕ ರೂಢಿ, ಸಂಪ್ರದಾಯಗಳಿಗೆ ಸವಾಲು ಆಗುತ್ತವೆ.