ಮಟನ್‌ ಸಾಂಬರ್‌ನಲ್ಲಿ ಮೂಳೆ ಇಲ್ಲ ಅಂತಾ ಮದುವೆ ಕ್ಯಾನ್ಸಲ್‌ ಮಾಡಿದ ವರ!

ಮಟನ್‌ ಸಾಂಬರ್‌ನಲ್ಲಿ ಮೂಳೆ ಇಲ್ಲ ಅಂತಾ ಮದುವೆ ಕ್ಯಾನ್ಸಲ್‌ ಮಾಡಿದ ವರ!

ಮದುವೆ ಮನೆ ಅಂದಾಗ ಅಲ್ಲಿ ಸಣ್ಣಪುಟ್ಟ ಮನಸ್ತಾಪ ಕಾಮನ್‌. ಊಟ, ತಿಂಡಿ ಚೆನ್ನಾಗಿಲ್ಲ ಅಂತಾ ಸಂಬಂಧಿಕರು ದೂರುವುದು ಕೂಡ ಸಹಜ ಅಂತಾ ಹೇಳಬಹುದು. ಇನ್ನೂ ಕೆಲವೊಮ್ಮೆ ಮದುವೆ ಸಮಾರಂಭದಲ್ಲಿ ಈ ವಿಚಾರಕ್ಕೆ ಜಗಳ ಕೂಡ ಉಂಟಾಗುತ್ತದೆ. ಇದೀಗ ಮಟನ್‌ ಸಾಂಬಾರಿನಲ್ಲಿ ಮೂಳೆ ಸಿಕ್ಕಿಲ್ಲ ಅಂತಾ ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ.

ಹೌದು, ಈ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಮಟನ್​ ಸಾಂಬರ್‌ನಲ್ಲಿ ಮೂಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಇದೀಗ ಮದುವೆ ರದ್ದಾಗುವುದರೊಂದಿಗೆ ಜಗಳ ಅಂತ್ಯಗೊಂಡಿದೆ.

ಇದನ್ನೂ ಓದಿ: ನೂಕುನುಗ್ಗಲಿನ ನಡುವೆ ಅಯ್ಯಪ್ಪನ ಭಕ್ತರಿಗೆ ಸಾಲು ಸಾಲು ಸಮಸ್ಯೆ! – ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ!

ಇತ್ತೀಚೆಗೆ ನಿಜಾಮಾಬಾದ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ವಧು – ವರರ ಒಪ್ಪಿಗೆ ಸೂಚಿಸಿದ ಬಳಿಕ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಮದುವೆಯ ದಿನವೂ ನಿಶ್ಚಯವಾಗಿತ್ತು. ಆ ಖುಷಿಯಲ್ಲಿ ಮಾಂಸದೂಟವನ್ನು ಏರ್ಪಡಿಸಿದ್ದರು, ಮಧುಮಗನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಖಾದ್ಯ ಮಟನ್​ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಗಲಾಟೆ ಶುರು ಮಾಡಿದ್ದರು. ಇದು ಅಂತಿಮವಾಗಿ ಎರಡೂ ಕುಟುಂಬದ ನಡುವೆ ಜಗಳಕ್ಕೆ ಕಾರಣವಾಯಿತು.

ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.  ಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ವರನ ಕಡೆಯವರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ, ವಧುವಿನ ಮನೆಯವರು ಮಾಂಸಾಹಾರದಲ್ಲಿ ಮೂಳೆಯನ್ನು ನೀಡದೆ ಅವಮಾನ ಮಾಡಿದ್ದಾರೆ ಎಂದು ವಾದಿಸಿದರು. ವಧುವಿನ ಮನೆಯವರು ಈ ಬಗ್ಗೆ ಮೊದಲೇ ತಿಳಿಸಿರಲಿಲ್ಲ, ಮೂಳೆಯನ್ನು ಊಟದಲ್ಲಿ ಸೇರಿಸಲಿಲ್ಲ ಎಂದು ವಾದಿಸಿದರು. ಕೊನೆಗೆ ಎರಡೂ ಕಡೆಯವರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.

Shwetha M