ವಧುವಿನ ಕೆನ್ನೆ ಹಿಂಡಿದ ವರನ ಗೆಳೆಯ – ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ಮದುಮಗ..!

ವಧುವಿನ ಕೆನ್ನೆ ಹಿಂಡಿದ ವರನ ಗೆಳೆಯ – ಮಂಟಪದಲ್ಲೇ ಕಪಾಳಮೋಕ್ಷ ಮಾಡಿದ ಮದುಮಗ..!

ಮದುವೆ ಅಂದ್ರೆ ಕೇಳ್ಬೇಕಾ. ಹತ್ತು, ಹಲವು ಸಂಪ್ರದಾಯಗಳಿರುತ್ತವೆ. ನೆಂಟರಿಷ್ಟರೆಲ್ಲಾ ಸೇರಿ ಮೆಹೆಂದಿ ಶಾಸ್ತ್ರ, ಅರಿಶಿನ ಶಾಸ್ತ್ರ, ಚಪ್ಪರ ಶಾಸ್ತ್ರ ಅಂತಾ ವಾರಗಟ್ಟಲೆ ಸಂಭ್ರಮಿಸುತ್ತಾರೆ. ಇಲ್ಲೂ ಅಷ್ಟೇ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗೆ ಸಂಬಂಧಿಗಳೆಲ್ಲಾ ಸಾಕ್ಷಿಯಾಗಿದ್ರು. ಆದ್ರೆ ವರನ ಗೆಳೆಯ ಮಾಡಿದ ಕಿತಾಪಡಿ ಇಡೀ ಮದುವೆ ಮಂಟಪವೇ ಶಾಕ್ ಆಗುವಂತೆ ಮಾಡಿದೆ.

ಮದುವೆ ಅಂದ ಮೇಲೆ ಸಂಬಂಧಿಗಳು, ಗೆಳೆಯರು ತಮಾಷೆ ಮಾಡೋದು ಸಾಮಾನ್ಯ. ಅದ್ರಲ್ಲೂ ವಧು ವರರನ್ನ ಸಾಕಪ್ಪಾ ಸಾಕು ಅನ್ನುವಂತೆ ಮಾಡಿಬಿಡ್ತಾರೆ. ಅತಿರೇಖ ಅನ್ನಿಸುವಂಥ ಗಿಫ್ಟ್ ಕೊಡೋದು, ವಧು, ವರನನ್ನ ಕಿಚಾಯಿಸೋದು ಮಾಡ್ತಾರೆ. ಆದ್ರೆ ಇಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕುಚೇಷ್ಟೆ ಮಾಡಿದ್ದಾರೆ. ಇಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮದುವೆಯ ವೇದಿಕೆಯಲ್ಲಿ ವರನನ್ನು ಕೆಣಕಲು ವಧುವಿನ ಕೆನ್ನೆ ಹಿಂಡಿದ ಗೆಳೆಯ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾನೆ.

ಇದನ್ನೂ ಓದಿ : ಬೆನ್ನ ಮೇಲೆ ಬಾಲಕನ ಶವ ಹೊತ್ತು ತಂದು ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದ ಮೊಸಳೆ – ಅಬ್ಬಬ್ಬಾ.. ಇಲ್ಲಿದೆ ಅಚ್ಚರಿಯ ವಿಡಿಯೋ!

ವೈರಲ್ ಆಗಿರುವ ವೀಡಿಯೋದಲ್ಲಿ ವಧು ಮತ್ತು ವರ ವೇದಿಕೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಒಬ್ಬ ಹುಡುಗ ಹಿಂಬದಿಯಿಂದ ಬಂದು ವಧುವಿನ ಕೆನ್ನೆಯನ್ನು ಎಳೆಯಲು ಪ್ರಾರಂಭಿಸುತ್ತಾನೆ. ಯುವಕರ ಕುಚೇಷ್ಟೆಯಿಂದ ವಧು ಅಸಮಾಧಾನಗೊಳ್ಳುತ್ತಾಳೆ. ನಂತರ ಇದನ್ನು ಕಂಡ ವರ ತನ್ನ ವಧುವನ್ನು ಚುಡಾಯಿಸಿದ್ದಕ್ಕಾಗಿ ಯುವಕನನ್ನು ಎಳೆದೊಯ್ದು ಕೆನ್ನೆಗೆ ರಪ್ ಅಂತಾ ಬಾರಿಸಿದ್ದಾನೆ.

ಇನ್ಸ್​ಟಾಗ್ರಾಂ ಖಾತೆಯೊಂದರಲ್ಲಿ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ವಿಡಿಯೋ ವೀಕ್ಷಿಸಿರೋ ಸಾವಿರಾರು ಜನ ಮದುಮಗನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಏಕಾಏಕಿ ಹೀಗೆ ಮಾಡೋದು ಬೇಡವಾಗಿತ್ತು ಎಂದು ಕಮೆಂಟ್ ಮಾಡಿದ್ದಾರೆ.

suddiyaana