ಮಹೀಂದ್ರ ಸ್ಕಾರ್ಪಿಯೋ ಕಾರಿನಿಂದ ಮದುವೆಯೇ ಕ್ಯಾನ್ಸಲ್! – ಅಯ್ಯೋ.. ಈತರನೂ ಡಿಮ್ಯಾಂಡ್ ಇರುತ್ತಾ?

ಈಗಿನ ಕಾಲದಲ್ಲಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಅನ್ನೋದೇ ದೊಡ್ಡ ಚಿಂತೆ. ಹೀಗಾಗಿ ಹೆಣ್ಣು ಸಿಕ್ಕಿದ್ರೆ ವರದಕ್ಷಿಣೆ ಕೇಳಲ್ಲ.. ಒಂದು ಸಲ ಮದುವೆ ಆದ್ರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಆದ್ರೀಗ ಇಲ್ಲೊಂದು ಕಡೆ ಮದುವೆ ದಿನ ಮಹೀಂದ್ರ ಸ್ಕಾರ್ಪಿಯೋ ಕಾರು ನೀಡುವಂತೆ ವರ ಡಿಮ್ಯಾಂಡ್ ಮಾಡಿದ್ದು, ಮದುವೆಯೇ ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ TOSSದೇ ಚಿಂತೆ – ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋದಾ?
ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೌದು, ಒಂದು ಸ್ಕಾರ್ಪಿಯೋ ಕಾರಿನಿಂದ ಮದುವೆ ನಿಂತಿದೆ. ಅಷ್ಟಕ್ಕೂ ಸ್ಕಾರ್ಪಿಯೋ ಕಾರು ಮಂಟಪಕ್ಕೆ ನುಗ್ಗಿ ಬಂದಿಲ್ಲ. ಅಥವಾ ವರ ಮಂಟಪಕ್ಕೆ ಬರುವಾಗ ಸ್ಕಾರ್ಪಿಯೋ ಕಾರು ಅಡ್ಡಿಯಾಗಿಲ್ಲ. ಬದಲಾಗಿ ಎದುರಿಗೆ ಸ್ಕಾರ್ಪಿಯೋ ಕಾರಿಲ್ಲ ಅನ್ನೋ ಕಾರಣಕ್ಕೆ ಮದುವೆ ರದ್ದಾಗಿದೆ.
ಹುಡುಗಿ ಪೋಷಕರು ವರದಕ್ಷಿಣೆ ರೂಪದಲ್ಲಿ ಸ್ಕಾರ್ಪಿಯೋ ಕಾರು ನೀಡಬೇಕು ಎಂದು ವರನ ಬೇಡಿಕೆಯಾಗಿತ್ತು. ಸಾಲ ಮಾಡಿ ಮದುವೆ ಮಾಡುತ್ತಿದ್ದ ವಧುವಿನ ಪೋಷಕರಿಗೆ ಇದು ಅಸಾಧ್ಯವಾಗಿತ್ತು. ಆದರೂ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಮದುವೆ ನಡೆದ ಬಳಿಕ ಸ್ಕಾರ್ಪಿಯೋ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ ತಾಳಿಕಟ್ಟುವಾಗ ಸ್ಕಾರ್ಪಿಯೋ ಕಾರಿನ ಕೀ ನನಗೆ ನೀಡಬೇಕು ಎಂದು ಷರತ್ತು ವಿಧಿಸಿತ್ತು. ತನ್ನ ಎದುರಿಗೆ ಸ್ಕಾರ್ಪಿಯೋ ಕಾರು ಇರಲಿಲ್ಲ, ಕಿ ಸಿಗಲಿಲ್ಲ ಎಂದು ವರ ಮದುವೆಗೆ ನಿರಾಕರಿಸಿದ ಘಟನೆ ಇದು.
ಹುಡುಗಿ ಪೋಷಕರು ವರ ಹಾಗೂ ಆತನ ಕುಟುಂಬಸ್ಥರ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಮದುವೆ ಮುಗಿಯಲು ಬಳಿಕ ಹೇಗಾದರು ಮಾಡಿ ಸ್ಕಾರ್ಪಿಯೋ ಕಾರು ಖರೀದಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ವರ ಹಾಗೂ ಆತನ ಮನೆಯವರು ಒಪ್ಪಲೇ ಇಲ್ಲ. ಈಗ ಕೊಟ್ಟರೆ ಮದುವೆ ಎಂದಿದ್ದಾರೆ. ಯಾವ ಮಾತುಕತೆಯೂ ಫಲಪ್ರದವಾಗಲಿಲ್ಲ. ಕೊನೆಗೆ ಮದುವೆ ರದ್ದಾಗಿತ್ತು. ವಧುವಿನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಮದುವೆ ಮಂಟಪದಲ್ಲೇ ಮಾತಿನ ಚಕಮಕಿ ನಡೆದಿತ್ತು.
ಸಾಲ ಮಾಡಿ ಮದುವೆ ಆಯೋಜಿಸಲಾಗಿತ್ತು. ಮಗಳ ಭವಿಷ್ಯವನ್ನು ವರದಕ್ಷಿಣೆ ವಿಚಾರದಲ್ಲಿ ಕತ್ತಲಲ್ಲಿ ಇಟ್ಟ ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವೇಳೆ ಎಂಗೇಜ್ಮೆಂಟ್ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಹಣ ನೀಡಿರುವುದಾಗಿ ಹೇಳಿದ್ದಾರೆ.

ನೋಡಿರಿ

