ಮಂಚದ ವಿಷ್ಯ ಬೇಡವೋ ಶಿಷ್ಯ – ಹಳೇ ಮಂಚ ಕೊಟ್ಟಿದ್ದಕ್ಕೆ ಮದುವೆಯೇ ಕ್ಯಾನ್ಸಲ್..!  

ಮಂಚದ ವಿಷ್ಯ ಬೇಡವೋ ಶಿಷ್ಯ – ಹಳೇ ಮಂಚ ಕೊಟ್ಟಿದ್ದಕ್ಕೆ ಮದುವೆಯೇ ಕ್ಯಾನ್ಸಲ್..!  

ಮದುವೆ ಅಂದ ಮೇಲೆ ಕೇಳಬೇಕಾ. ವರನ ಕಡೆಯವರ ಡಿಮ್ಯಾಂಡ್ ಗೆ ವಧುವಿನ ಮನೆಯವರ ತಲೆ ಗಿರ್ಽ ಅನ್ನುವಂತಾಗುತ್ತೆ. ಚಿನ್ನ, ವಾಹನ, ಫರ್ನೀಚರ್ಸ್ ಅಂತಾ ಕೇಳಿದ್ದನ್ನೆಲ್ಲಾ ಕೊಟ್ಟರೂ ಅವರ ದಾಹ ಕಡಿಮೆ ಆಗೋದಿಲ್ಲ. ಆದ್ರೆ ಇಲ್ಲಿ ವರಮಹಾಶಯ ಕೇಳಿದ್ದನ್ನೆಲ್ಲಾ ಕೊಟ್ರೂ ಕೂಡ ಕೊನೇ ಗಳಿಗೆಯಲ್ಲಿ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ. ಅದೂ ಕೂಡ ಮಂಚಕ್ಕಾಗಿ ಅನ್ನೋದು ವಿಶೇಷ.

ಇದನ್ನೂ ಓದಿ : ಶಾಲಾ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ಇಲ್ಲದಿದ್ದಕ್ಕೆ ಶಿಕ್ಷಕರನ್ನೇ ಕೂಡಿ ಹಾಕಿದ ಪೋಷಕರು..!

ಮದುವೆಗೆ ಮಾವನ ಮನೆಯವರು ಹಳೇ ಮಂಚ ಕೊಟ್ಟರೆಂದು ವರ ಮದುವೆ ವೇಳೆ ಕೈಕೊಟ್ಟಿದ್ದಾನೆ. ವಿಷಯ ಏನಂದ್ರೆ ಮದುವೆ ಸಂದರ್ಭದಲ್ಲಿ ವಧುವಿನ ಕುಟುಂಬಸ್ಥರು ವರನಿಗೆ ಸಂಪ್ರದಾಯದ ಪ್ರಕಾರ ಕೆಲ ಫರ್ನೀಚರ್​ಗಳನ್ನು ನೀಡಬೇಕಾಗಿತ್ತು. ಇದರಂತೆ ಯುವತಿ ಕುಟುಂಬಸ್ಥರು ವರನ ಮನೆಗೆ ಹಾಸಿಗೆ, ಬೀರುವ ಸೇರಿದಂತೆ ಕೆಲವು ವಸ್ತುಗಳನ್ನು ಕಳುಹಿಸಿದ್ದರು. ವರನಿಗೆ ನೀಡುವ ವಸ್ತುಗಳಲ್ಲಿ ಹಳೆಯ ಮಂಚ ನೀಡಿದ್ದಾರೆ ಎಂದು ವರ ಅಸಮಾಧಾನ ವ್ಯಕ್ತಪಡಿಸಿ, ಮದುವೆಗೆ ಕೆಲವೇ ನಿಮಿಷಗಳು ಬಾಕಿ ಇರುವ ಸಂದರ್ಭದಲ್ಲಿ ಕಲ್ಯಾಣ ಮಂಟಪಕ್ಕೆ ಬಾರದೆ ತನ್ನದೇ ಮದುವೆಗೆ ಗೈರಾಗಿದ್ದಾನೆ.

ಹೈದರಾಬಾದ್​ನ ಮೌಲಾಲಿ ಪ್ರದೇಶದ ನಿವಾಸಿಯಾಗಿದ್ದ ಯುವಕನಿಗೆ ಹಾಗೂ ಬಂಡ್ಲಗೂಡ ನಿವಾಸಿಯಾಗಿದ್ದ ಯುವತಿಗೆ ಹಿರಿಯರು ಮದುವೆ ನಿಶ್ಚಯ ಮಾಡಿದ್ದರು. ಮೂರು ದಿನಗಳ ಹಿಂದಷ್ಟೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಬ್ಬರಿಗೂ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ಮಾಡಲಾಗಿತ್ತು. ಅಲ್ಲದೆ, ಮೂರು ದಿನಗಳ ಅಂತರದಲ್ಲಿ ಅಂದರೆ ಭಾನುವಾರ ಮದುವೆಗೆ ಮುಹೂರ್ತ ಫಿಕ್ಸ್ ಮಾಡಿ ಎಲ್ಲಾ ತಯಾರಿ ಮಾಡಿಕೊಂಡಿದ್ದರು.

ಮದುವೆ ಸಂದರ್ಭದಲ್ಲಿ ವಧುವಿನ ಕುಟುಂಬಸ್ಥರು ವರನಿಗೆ ಸಂಪ್ರದಾಯದ ಅನ್ವಯ ಕೆಲ ಫರ್ನೀಚರ್​ಗಳನ್ನು ನೀಡಬೇಕಾಗಿತ್ತು. ಇದರಂತೆ ಯುವತಿ ಕುಟುಂಬಸ್ಥರು ವರನ ಮನೆಗೆ ಹಾಸಿಗೆ, ಬೀರುವ ಸೇರಿದಂತೆ ಕೆಲವು ವಸ್ತುಗಳನ್ನು ಕಳುಹಿಸಿದ್ದರು.ಯುವತಿಯ ಕುಟುಂಸ್ಥರು ವರನ ಮನೆಗೆ ಕಳುಹಿಸಿದ್ದ ಮಂಚವನ್ನು ಸೆಟಪ್​ ಮಾಡುತ್ತಿದ್ದಾಗ ಮಂಚದ ಒಂದು ಭಾಗ ಮುರಿದು ಹೋಗಿತ್ತು ಎನ್ನಲಾಗಿದೆ. ಇದರಿಂದ ವರ, ವಧುವಿನ ಕುಟುಂಬಸ್ಥರ ವಿರುದ್ಧ ಕೋಪಗೊಂಡಿದ್ದನಂತೆ. ಅಲ್ಲದೆ, ಹಳೆಯ ಮಂಚಕ್ಕೆ ಹೊಸದಾಗಿ ಬಣ್ಣ ಹಾಕಿ ಕಳುಹಿಸಿದ್ದಾರೆ ಅಂತ ಅಸಮಾಧಾನ ಹೊರ ಹಾಕಿದ್ದನಂತೆ.

ಇತ್ತ ಭಾನುವಾರ ಮದುವೆಗೆ ವಧುವಿನ ಕಡೆಯವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರಂತೆ. ಮದುವೆ ಕಾರ್ಯಕ್ರಮಕ್ಕೆ ವಧುವಿನ ಕಡೆಯವರು ಆಗಮಿಸಿದ್ದರಂತೆ. ಆದರೆ ಎಷ್ಟೇ ಸಮಯವಾದರೂ ಕಲ್ಯಾಣ ಮಂಟಪಕ್ಕೆ ವರನ ಕಡೆಯವರು ಬಾರದ ಹಿನ್ನೆಲೆಯಲ್ಲಿ ವಧುವಿನ ಕುಟುಂಬಸ್ಥರು ಯುವಕನ ಮನೆ ಬಳಿಯೇ ತೆರಳಿ ಏನಾಯ್ತು ಎಂದು ತಿಳಿದುಕೊಳ್ಳಲು ಮುಂದಾಗಿದ್ದರಂತೆ.

ಮನೆಯ ಬಳಿ ಬಂದ ಯುವತಿಯ ತಂದೆ ಮದುವೆಗೆ ಯಾಕೆ ಬರಲಿಲ್ಲ ಎಂದು ವರನನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವರ, ತನಗೆ ಹಳೆ ಮಂಚ ಕೊಟ್ಟಿದ್ದೀರಿ, ಅದು ಫಿಕ್ಸ್ ಮಾಡುವಾಗಲೇ ಮುರಿದು ಹೋಗಿದೆ ಎಂದು ಹೇಳಿ ಅಸಮಾಧಾನ ಹೊರ ಹಾಕಿದ್ದನಂತೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ನಡುವೆ ಜಗಳ ಕೂಡ ಆಗಿದೆ. ಇದರೊಂದಿಗೆ ವರ ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದನಂತೆ.

ಇದರೊಂದಿಗೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಪೊಲೀಸರು ಕೂಡ ವರನಿಗೆ ಬುದ್ಧಿ ಮಾತು ಹೇಳಿ ಮದುವೆಗೆ ಒಪ್ಪಿಸಿದ್ದರಂತೆ. ಆದರೆ ಯುವತಿಯ ತಂದೆ ಮದುವೆಗೆ ನಿರಾಕರಿಸಿದ ಕಾರಣ ಮದುವೆ ಮಧ್ಯದಲ್ಲೇ ನಿಂತು ಹೋಗಿದೆ.

suddiyaana