‘ನಮ್ಮ ಮೆಟ್ರೋ’ 3ನೇ ಹಂತದ ಯೋಜನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

‘ನಮ್ಮ ಮೆಟ್ರೋ’ 3ನೇ ಹಂತದ ಯೋಜನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಸಿಲಿಕಾನ್‌ ಸಿಟಿಯ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಎಂದೇ ಹೇಳಬಹುದು. ಆಫೀಸ್‌ಗೆ ಹೋಗಲು, ಕಾಲೇಜ್‌ಗೆ ಹೋಗಲು ಸಾವಿರಾರು ಮಂದಿ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಮೂರು ಹಂತಗಳಲ್ಲಿ ನಿರ್ಮಾಣಕ್ಕೆ ಸಿದ್ಧವಾಗಿರುವ ನಮ್ಮ ಮೆಟ್ರೊ 3ನೇ ಹಂತದ ಕಾಮಗಾರಿ ಯೋಜನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಾಮರ್ಥ್ಯದ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಆರಂಭಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ: 10 ಟೀಮ್‌ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗಿದೆ? – ಎಷ್ಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ?

ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಾರಿಗೆ ಅಗತ್ಯತೆ ಹೆಚ್ಚಾಗುತ್ತಿದೆ. ಇದರೊಂದಿಗೆ ಸಂಚಾರ ದಟ್ಟಣೆಯು ಏರಿಕೆ ಆಗುತ್ತಿದೆ. ಟ್ರಾಫಿಕ್ ಎಂಬುದು ದೊಡ್ಡ ಸಮಸ್ಯೆ ಆಗಿದ್ದು, ಇದರ ನಿಯಂತ್ರಣಕ್ಕೆ ನಮ್ಮ ಮೆಟ್ರೋ ಯೋಜನೆ, ಮೆಟ್ರೋ ಬಳಕೆ ಒಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಹೊಸ ಮಾರ್ಗಗಳಲ್ಲಿ ಫೀಡರ್ ಬಸ್ ಸೇವೆ ಯೋಜನೆಯ ಅಂದಾಜು ವೆಚ್ಚದ ಮಾಹಿತಿ ಬೆಂಗೂರಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಸರ್ಕಾರ ಸರ್ವಾನುಮತದಿಂದ ನೀಡಿದೆ. ಎರಡು ಮಾರ್ಗಗಳ ನಿರ್ಮಾಣ ಕಾರ್ಯ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 15,611 ಕೋಟಿ‌ ರೂ. ವೆಚ್ಚ ವ್ಯಯಿಸಲು ತಿರ್ಮಾನಿಸಿದೆ.  ಜೆಪಿ ನಗರ, ಸಿಲ್ಕ್ ಬೋರ್ಡ್​​ನಿಂದ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್​​ನಿಂದ ಹೆಬ್ಬಾಳ ಮೇಲ್ಸೇತುವವರೆಗೆ ಬಂದಿದೆ. ಸುಮಾರು 35.5 ಕಿ.ಲೋ ಮೀಟರ್​ವರೆಗೆ ಮೆಟ್ರೋ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋದ ಮೂರನೇ ಹಂತದ ಕಾಮಗಾರಿ ಒಟ್ಟು 81.12 ಕಿಲೋ ಮೀಟರ್ ಉದ್ದವಿದೆ. ಈ ಯೋಜನೆಯು 03 ಕಾರಿಡಾರ್ ವಿಭಾಗಗಳಾಗಿ ನಿರ್ಮಾಣವಾಗುತ್ತಿದೆ. ಅದರಲ್ಲಿ ಜೆಪಿನಗರದಿಂದ ಕೆಂಪಾಪುರವರೆಗೆ ಒಟ್ಟು 32 ಕಿಮೀ ಮೊದಲ ಕಾರಿಡಾರ್ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಒಟ್ಟು 22 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಇನ್ನೂ ಇದೇ ಯೋಜನೆಯಲ್ಲಿ ಎರಡನೇ ಕಾರಿಡಾರ್ ಹೊಸಹಳ್ಳಿ ಮಾಗಡಿರಸ್ತೆಯಿಂದ ಕಡುಬಗೆರೆ ವರೆಗೆ ಇದ್ದು, ಇದರಡಿ ಒಟ್ಟು 09 ನಿಲ್ದಾಣಗಳನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದೆ. ಸರ್ಜಾರಪುರದಿಂದ-ಹೆಬ್ಬಾಳವರೆಗಿನ 37 ಕಿಲೋ ಮೀಟರ್ ವ್ಯಾಪ್ತಿಯ ಮಾರ್ಗವು ಮೂರನೇ ಕಾರಿಡಾರ್ ಆಗಿದೆ.

Shwetha M