50,000 ವರ್ಷಗಳ ಬಳಿಕ ಭೂಮಿ ಸಮೀಪ ಬರಲಿದೆ ಹಸಿರು ಧೂಮಕೇತು – ಭಾರತದಲ್ಲಿ ಯಾವಾಗ ಕಾಣಿಸಿಕೊಳ್ಳಲಿದೆ?

50,000 ವರ್ಷಗಳ ಬಳಿಕ ಭೂಮಿ ಸಮೀಪ ಬರಲಿದೆ ಹಸಿರು ಧೂಮಕೇತು – ಭಾರತದಲ್ಲಿ ಯಾವಾಗ ಕಾಣಿಸಿಕೊಳ್ಳಲಿದೆ?

ನವದೆಹಲಿ: ಕಳೆದ 50,000 ವರ್ಷಗಳ ಹಿಂದೆ  ಸೌರ ವ್ಯೂಹ ಸಮೀಪದ ಹೂರ್ಟ್‌ ಕ್ಲೌಡ್‌ ಕಡೆಯಿಂದ ಬಂದಿದೆ ಎನ್ನಲಾದ ಹಸಿರು ಧೂಮಕೇತು ಫೆ. 1 ಹಾಗೂ 2ರಂದು  ರಾತ್ರಿ 3 ಗಂಟೆಗೆ ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬರಲಿದೆ. ಈ ಬಾರಿ ಧೂಮಕೇತು ಭಾರತದಲ್ಲೂ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಾತಾವರಣ ತಿಳಿಯಾದ ಪ್ರದೇಶದಲ್ಲಿ, ಯಾವುದೇ ಮಾಲಿನ್ಯ ಇಲ್ಲದ ಪ್ರದೇಶದಲ್ಲಿ ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಧೂಮಕೇತು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣಿಸಲಿದೆ. ಬೈನಾಕ್ಯುಲರ್‌ ಸಹಾಯದಿಂದಲೂ ಇದನ್ನು ವೀಕ್ಷಿಸಬಹುದು. ಭೂಮಿ ಸಮೀಪ ಬಂದಾಗ ಈ ಧೂಮಕೇತು ಮತ್ತಷ್ಟು ಪ್ರಕರವಾಗಿ ಕಾಣಲಿದೆ. ಆದರೆ ಚಂದ್ರನ ಬೆಳಕಿನಿಂದ ಧೂಮಕೇತು ಸರಿಯಾಗಿ ಕಾಣಿಸದೇ ಇರಬಹುದು. ಹಾಗಾಗಿ ಚಂದ್ರಮರೆಯಾದ ಬಳಿಕ ಸೂರ್ಯೋದಯಕ್ಕೂ ಮೊದಲು ನೋಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?

ಈಗಾಗಲೇ ಹಲವು ದೂರದರ್ಶಕಗಳ ಮೂಲಕ ಈ ಧೂಮಕೇತುವಿನ ಚಿತ್ರವನ್ನು ಸೆರೆಹಿಡಿದಿದ್ದು, ಹಸಿರು ಬಾಲದೊಂದಿಗೆ ಪ್ರಕಾಶಮಾನವಾಗಿ ಈ ಧೂಮಕೇತು ಚಲಿಸುತ್ತಿರುವುದು ಕಂಡುಬಂದಿದೆ. ಉತ್ತರಾರ್ಧಗೋಳದಲ್ಲಿ ಈ ಧೂಮಕೇತು ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರಸ್ತುತ ಇದು ಪೋಲ್‌ ಸ್ಟಾರ್‌ (ಪೊಲಾರಿಸ್‌) ಮತ್ತು ದ ಗ್ರೇಟ್‌ ಬೀರ್‌ (ಸಪ್ತರ್ಷಿ ಮಂಡಲ) ತಾರಾಪುಂಜದ ನಡುವೆ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಧೂಮಕೇತುವನ್ನು 2022ರ ಮಾ.2ರಂದು ಖಗೋಳ ವಿಜ್ಞಾನಿಗಳಾದ ಬ್ರೈಸ್‌ ಬೋಲಿನ್‌ ಮತ್ತು ಫ್ರಾಂಕ್‌ ಮಾಸ್ಕಿ ಕಂಡುಹಿಡಿದರು. ಈ ಮಾದರಿಯ ಧೂಮಕೇತುಗಳು ನಮ್ಮ ಸೌರಮಂಡಲದಾಚೆ ಇರುವ ಊರ್ಚ್‌ ಕ್ಲೌಡ್‌ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಿ ಅಲ್ಲಿಂದ ಚಲಿಸಲು ಆರಂಭಿಸುತ್ತವೆ. ಇದೊಂದು ಪ್ರಕಾಶಮಾನವಾದ ಬಾಲ ಹೊಂದಿರುವ ಧೂಮಕೇತುವಾಗಿದ್ದು, ಇಂತಹುದನ್ನು ಮತ್ತೆ 50 ಸಾವಿರ ವರ್ಷಗಳವರೆಗೆ ನೋಡಲಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

suddiyaana