ರಸ್ತೆಯಲ್ಲಿ ಹೊರಟ ಕೆಂಪು ಅತಿಥಿಗಳ ಮೆರವಣಿಗೆ ನೋಡುವುದೇ ಚೆಂದ..!
ಸಂತಾನೋತ್ಪತ್ತಿಗಾಗಿ ಏಡಿಗಳ ಮಹಾವಲಸೆ..!

ರಸ್ತೆಯಲ್ಲಿ ಹೊರಟ ಕೆಂಪು ಅತಿಥಿಗಳ ಮೆರವಣಿಗೆ ನೋಡುವುದೇ ಚೆಂದ..!ಸಂತಾನೋತ್ಪತ್ತಿಗಾಗಿ ಏಡಿಗಳ ಮಹಾವಲಸೆ..!

ಆಸ್ಟ್ರೇಲಿಯಾ : ಸಂತಾನೋತ್ಪತ್ತಿಗಾಗಿ ಹಕ್ಕಿಗಳು ಸಾಗರ ದಾಟಿ ಹೋಗುತ್ತವೆ ಅನ್ನೋ ಮಾತಿದೆ. ಪಕ್ಷಿಗಳು ಸಂತಾನೋತ್ಪತ್ತಿಗಾಗಿ ವಲಸೆ ಹೋಗುವುದು ಸಾಮಾನ್ಯ. ಆದರೆ, ಏಡಿಗಳು ಕೂಡಾ ಹೀಗೆ ಮಾಡುತ್ತವೆ. ಸಂತಾನೋತ್ಪತ್ತಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ರಸ್ತೆ ಮೇಲೆ ಏಡಿಗಳು ಮೆರವಣೆಗೆ ಹೊರಟಂತೆ ಕಾಣುವುದು ಕಂಡು ಬಂದಿದ್ದು ಆಸ್ಟ್ರೇಲಿಯಾದ ಕ್ರಿಸ್‌ಮಸ್ ಐಸ್‌ಲ್ಯಾಂಡ್‌ನಲ್ಲಿ.

ಇದನ್ನೂ ಓದಿ:  ಕತಾರ್ ಫುಟ್​ಬಾಲ್ ವಿಶ್ವಕಪ್: ‘ಬೇಕೇ ಬೇಕು.. ಬೀಯರ್ ಬೇಕು’

ಆಸ್ಟ್ರೇಲಿಯಾದ ಕ್ರಿಸ್‌ಮಸ್ ಐಸ್‌ಲ್ಯಾಂಡ್‌ನಲ್ಲಿ ಅಂದಾಜು 65 ಸಾವಿರಕ್ಕೂ ಹೆಚ್ಚು ಏಡಿಗಳು ವಲಸೆ ಹೋಗುತ್ತಿವೆ. ಸಂತಾನೋತ್ಪತ್ತಿಯ ಸಲುವಾಗಿ ಈ ಕೆಂಪು ಏಡಿಗಳು ಮಳೆ ಕಾಡುಗಳಿಂದ ದ್ವೀಪದತ್ತ ಪ್ರತಿವರ್ಷವೂ ವಲಸೆ ಹೋಗುತ್ತವೆ. ಅಲ್ಲಿ ಮೊಟ್ಟೆಗಳನ್ನು ಇಟ್ಟು ಮರಳಿ ಬರುತ್ತವೆ. ಕಳೆದ ಕೆಲ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಮಹಾವಲಸೆ ಆರಂಭವಾಗಿದೆ. ರಸ್ತೆಗಳಲ್ಲಿ ಏಡಿಗಳು ತೆವಳುತ್ತಾ ಸಾಗುತ್ತಿರುವುದನ್ನ ನೋಡಿ ಅವುಗಳ ಸುರಕ್ಷಿತ ವಲಸೆಗೆ ಸಹಾಯವಾಗುವಂತೆ ಅನೇಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಏಡಿಗಳ ಈ ಮಹಾವಲಸೆಯಿಂದ ರಸ್ತೆಗಳು ಕೆಂಪು ಕೆಂಪಾಗಿ ಕಾಣಿಸುತ್ತಿವೆ.

ಕ್ರಿಸ್‌ಮಸ್ ಐಸ್‌ಲ್ಯಾಂಡ್ ಹಿಂದೂ ಮಹಾಸಾಗರದಲ್ಲಿರುವ ಸಣ್ಣದಾದ ಒಂದು ದ್ವೀಪವಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಭೂಪ್ರದೇಶದಿಂದ 1,600 ಮೈಲು ದೂರದಲ್ಲಿದೆ. ಪ್ರತಿವರ್ಷವೂ ಏಡಿಗಳ ವಲಸೆಯ ಕಾರಣಕ್ಕೆ ಇದು ಬಹಳ ಖ್ಯಾತಿ ಪಡೆದಿದೆ. ಮೊದಲ ಮಳೆ ಬಿದ್ದ ನಂತರ ಏಡಿಗಳು ವಲಸೆ ಹೊರಡುತ್ತವೆ. ಸಾಮಾನ್ಯವಾಗಿ ಆಕ್ಟೋಬರ್ ಅಥವಾ ನವಂಬರ್‌ನಲ್ಲಿ ಇಲ್ಲಿ ಮಾನ್ಸೂನ್ ಶುರುವಾಗುತ್ತೆ. ಈ ಏಡಿಗಳ ಮಹಾವಲಸೆಯಲ್ಲಿ ಆಸಕ್ತಿದಾಯಕ ವಿಚಾರ ಏನೆಂದರೆ, ಈ ಏಡಿಗಳ ಮಹಾವಲಸೆಯ ನೇತೃತ್ವವನ್ನು ಗಂಡು ಏಡಿಗಳು ವಹಿಸಿಕೊಳ್ಳುತ್ತವೆ. ಹೆಣ್ಣು ಏಡಿಗಳು ಜೊತೆಯಲ್ಲಿಯೇ ಸಾಗುತ್ತವೆ..

suddiyaana