ಇರಲಾರದೆ ಇರುವೆ ಬಿಟ್ಟುಕೊಂಡ ಅಜ್ಜ – ಮೊಸಳೆ ಮುಂದೆ ಬೇಕಿತ್ತಾ ಸಾಹಸ?

ಇರಲಾರದೆ ಇರುವೆ ಬಿಟ್ಟುಕೊಂಡ ಅಜ್ಜ – ಮೊಸಳೆ ಮುಂದೆ ಬೇಕಿತ್ತಾ ಸಾಹಸ?

ಕೆಲವರು ಇತರರ ಮುಂದೆ ತಾನು ದೊಡ್ಡ ಜನ ಎಂದೆನಿಕೊಳ್ಳಬೇಕು ಅಂತಾ ಅಪಾಯಕಾರಿ ಸಾಹಸಗಳನ್ನು ಮಾಡುತ್ತಾರೆ. ಈ ವೇಳೆ ಕೆಲವರು ಚಾಣಾಕ್ಷತನದಿಂದ ಸ್ಟಂಟ್ ಗಳನ್ನು ಮಾಡಿ ಸೈ ಎನಿಸಿಕೊಂಡರೆ ಇನ್ನು ಕೆಲವರು ಅಪಾಯಕ್ಕೆ ಸಿಲುಕುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ.ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಕೆಲವರಿಗೆ ಸುಮ್ಮನೆ ಕುಳಿತುಕೊಳ್ಳುವುದೆಂದರೆ ಅಲರ್ಜಿ ಅನ್ನುವಂತೆ ಮಾಡುತ್ತಿರುತ್ತಾರೆ. ಹೀಗಾಗಿ ಅವರು ತಮ್ಮ ಅಕ್ಕ ಪಕ್ಕ ಇದ್ದವರಿಗೆ ಕೀಟಲೆ ಮಾಡುತ್ತಾ ಇರುತ್ತಾರೆ. ಇನ್ನೂ ಕೆಲವರು ಕೆಲವೊಂದು ಪ್ರಾಣಿಗಳಿಗೆ ತೊಂದರೆ ನೀಡುತ್ತಿರುತ್ತಾರೆ. ಇಲ್ಲೊಬ್ಬ ಅಜ್ಜ ಮೊಸಳೆಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ್ದಾನೆ.

ಇದನ್ನೂ ಓದಿ: ಇವತ್ತೇನಾದ್ರೂ ಸ್ಪೆಷಲ್ ನ್ಯೂಸ್ ಇದ್ಯಾ? – ದಿನ ಪತ್ರಿಕೆ ತಿರುವುತ್ತಾ ‘ಮಂಗ’ನಾಟ

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವೃದ್ದನೊಬ್ಬ ಹೊಲದಲ್ಲಿ ಮೊಸಳೆಯನ್ನು ಹಿಡಿಯಲು ಯತ್ನಿಸಿದ್ದಾನೆ. ಮೊಸಳೆಯನ್ನು ಹಿಡಿಯಲು ಮೊದಲೇ ಕೆಲವೊಂದು ಉಪಾಯಗಳನ್ನು ಹೂಡಿದ್ದಾನೆ. ಬಳಿಕ ಮೊಸಳೆಯ ಕಣ್ಣು ಹಾಗೂ ಬಾಯಿಯ ಮೇಲೆ ಬಟ್ಟೆಯನ್ನು ಬಿಸಾಡಿದ್ದಾನೆ. ನಂತರ ಮೊಸಳೆ ಬಳಿ ಹೋಗಿ ಹಿಡಿಯಲು ಯತ್ನಿಸಿದ್ದಾನೆ. ಈ ವೇಳೆ ಮೊಸಳೆ ಕೋಪಗೊಂಡಿದೆ. ಆದರೂ ಸುಮ್ಮನಾಗದ ವೃದ್ಧ ಮೊಸಳೆಯನ್ನು ಬಿಗಿಯಾಗಿ ಹಿಡಿದುಕೊಳ್ಳಲು ಪಯತ್ನಿಸುತ್ತಾನೆ. ಮತ್ತಷ್ಟು ಕೋಪಗೊಂಡ ಮೊಸಳೆ ಆತನ ಮೇಲೆಯೇ ದಾಳಿ ಮಾಡಿದೆ. ವೃದ್ದನ ಕೈ, ಕಾಲಿಗೆ ಕಚ್ಚಿದೆ. ಆಗ  ವೃದ್ಧ ಕೂಡ ಮೊಸಳೆಯ ಮುಖಕ್ಕೆ ಒದ್ದಿದ್ದಾನೆ. ಬಳಿಕ ಮೊಸಳೆಯಿಂದ ಅಂತರ ಕಾಯ್ದುಕೊಂಡು ತಪ್ಪಿಸಿಕೊಂಡಿದ್ದಾನೆ.

ಅಜ್ಜನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ಏಕೆಂದರೆ ಮೊಸಳೆಗಳು ಪ್ರಾಣಿ ಅಥವಾ ಮನುಷ್ಯರನ್ನುಕಂಡಾಗ ಅವರ ಮೇಲೆ ದಾಳಿ ಮಾಡಿ ಒಂದೇ ಕ್ಷಣಕ್ಕೆ ತಿಂದು ಬಿಡುತ್ತದೆ. ಆದರೆ ಈ ಮೊಸಳೆ ತನಗೆ ತೊಂದರೆ ಕೊಟ್ಟವನನ್ನು ಏನೂ ಮಾಡದೆ ಸುಮ್ಮನಾಗಿದೆ.  ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

suddiyaana