ʼಮೋದಿ ಈಸ್ ಟೆರರಿಸ್ಟ್, ಪಂಜಾಬ್ ಈಸ್ ನಾಟ್ ಇಂಡಿಯಾʼ!- ಕೆನಡಾ ದೇಗುಲದ ಮೇಲೆ ಮತ್ತೆ ಖಲಿಸ್ತಾನ ಉಗ್ರರ ಬರಹ!
ಟೊರಂಟೋ: ಕೆನಡಾದ ಹಿಂದೂ ದೇಗುಲವೊಂದರ ಗೋಡೆ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳು ದೇಶ ವಿರೋಧಿ ಹಾಗೂ ಪ್ರಧಾನಿ ಮೋದಿ ವಿರುದ್ದ ದ್ವೇಷದ ಹೇಳಿಕೆಗಳನ್ನು ಬರೆದಿದ್ದಾರೆ.
ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. ದೇಗುಲದ ಗೋಡೆ ಮೇಲೆ ಕಪ್ಪು ಬಣ್ಣದ ಸ್ಪ್ರೇ ಇಂದ ‘ಮೋದಿ ಈಸ್ ಟೆರರಿಸ್ಟ್, ಪಂಜಾಬ್ ಈಸ್ ನಾಟ್ ಇಂಡಿಯಾ’ (ಮೋದಿ ಓರ್ವ ಭಯೋತ್ಪಾದಕ, ಪಂಜಾಬ್ ಭಾರತದ ಭಾಗವಲ್ಲ) ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ – 300ಕ್ಕೂ ಹೆಚ್ಚು ಮಂದಿ ಸಾವು
ಕಳೆದ ತಿಂಗಳು ಆಗಸ್ಟ್‌ನಲ್ಲಿ ಇದೇ ಪ್ರಾಂತ್ಯದ ಶ್ರೀ ಲಕ್ಷ್ಮೀ ನಾರಾಯಣ ಮಂದಿರವನ್ನು ಖಲಿಸ್ತಾನಿ ಉಗ್ರರು ಧ್ವಂಸಗೊಳಿಸಿದ್ದರು. ಇದರಲ್ಲಿ ಇಬ್ಬರು ಖಲಿಸ್ತಾನಿ ಉಗ್ರರು ಭಾಗಿಯಾಗಿರುವುದು ಕಂಡುಬಂದಿತ್ತು. ಹಿಂದೆ ನಡೆದ ಘಟನೆಯಲ್ಲೂ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಗೀಚು ಬರಹವನ್ನು ಉಗ್ರರು ಬರೆದಿದ್ದರು. ಇದೀಗ ಜಿ20 ಶೃಂಗಸಭೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ವಿರುದ್ಧ ಬರೆದಿದ್ದು, ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.