5ನೇ ದಿನಕ್ಕೂ ನಿಲ್ಲದ ಇಂಡಿಗೋ ವಿಮಾನ ಪ್ರಯಾಣಿಕರ ಪರದಾಟ – ಆದೇಶ ರದ್ದು, ಪ್ರಯಾಣಿಕರ ಕ್ಷಮೆ ಕೇಳಿದೆ ಇಂಡಿಗೋ CEO

ಇಂಡಿಗೋ ವಿಮಾನದ ಪ್ರಯಾಣಿಕರು ಪರದಾಟ ಮುಂದುವರಿದಿದೆ. ಕಳೆದ 5 ದಿನಗಳಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ಸಾಕಷ್ಟು ಪರದಾಡುತ್ತಿದ್ದಾರೆ. ವ್ಯಾಪಕವಾಗಿ ವಿಮಾನ ಸೇವೆ ಅಡಚಣೆ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ. ಹಾಗೇ ಇಂಡಿಗೋ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ, ವಿಮಾನಯಾನ ಮಹಾನಿರ್ದೇಶನಾಲಯ ಹೊರಡಿಸಿದ್ದ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿತು.
ವಿಮಾನ ನಿಲ್ದಾಣಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳಿಗೆ ಕಾರಣವಾದ ಸಂದರ್ಭಗಳ ಸಮಗ್ರ ಪರಿಶೀಲನೆ ಮತ್ತು ಮೌಲ್ಯಮಾಪನವನ್ನು ಡಿಜಿಸಿಎ ಜಂಟಿ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಣೆ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯು ಕೈಗೊಳ್ಳುತ್ತದೆ. ಇತರ ಸದಸ್ಯರಲ್ಲಿ ಉಪ ಮಹಾನಿರ್ದೇಶಕ ಅಮಿತ್ ಗುಪ್ತಾ; ಹಿರಿಯ ವಿಮಾನ ಕಾರ್ಯಾಚರಣೆ ನಿರೀಕ್ಷಕ (ಎಸ್ಎಫ್ಒಐ) ಕ್ಯಾಪ್ಟನ್ ಕಪಿಲ್ ಮಾಂಗ್ಲಿಕ್ ಮತ್ತು ಎಫ್ಒಐ ಕ್ಯಾಪ್ಟನ್ ಲೋಕೇಶ್ ರಾಂಪಾಲ್ ಸೇರಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 8ಕ್ಕೆ ರಾಜ್ಯ ವಾಲಿಬಾಲ್ ತಂಡದ ಆಯ್ಕೆ – ರಾಜ್ಯವನ್ನು ಪ್ರತಿನಿಧಿಸುವ ಅವಕಾಶ್ ಮಿಸ್ ಮಾಡಿಕೊಳ್ಳಬೇಡಿ…!
ತನಿಖೆಯು, ಇಂಡಿಗೋ ವಿಮಾನ ಸೇವೆಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸುತ್ತದೆ, ಅಗತ್ಯವಿರುವಲ್ಲಿ ಜವಾಬ್ದಾರಿಯನ್ನು ವಹಿಸುತ್ತದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಪ್ರಯಾಣಿಕರು ಮತ್ತೆ ಅಂತಹ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುತ್ತದೆ ಎಂದು ಸರ್ಕಾರ ಹೇಳಿದೆ.
ಡಿಜಿಸಿಎ ಹೊರಡಿಸಿದ ಎಫ್ಡಿಟಿಎಲ್ ಆದೇಶ ಸ್ಥಗಿತ
ಪೈಲಟ್ಗಳ ಕೊರತೆಯಿಂದಾಗಿ ಇಂಡಿಗೋ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ, ವಿಮಾನಯಾನ ಮಹಾನಿರ್ದೇಶನಾಲಯ ಹೊರಡಿಸಿದ್ದ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿತು. ಶುಕ್ರವಾರ ಈ ಕುರಿತು ಮಹತ್ವದ ಆದೇಶ ಹೊರಡಿಸಿ, ‘ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಮತ್ತು ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರಕ್ಕೆ ಆದ್ಯತೆ ನೀಡಲು ಡಿಜಿಸಿಎ ಹೊರಡಿಸಿದ ಎಫ್ಡಿಟಿಎಲ್ ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ರದ್ದಾದ ವಿಮಾನಗಳ ಟಿಕೆಟ್ ಮೊತ್ತ ಮರುಪಾವತಿ, ಹೋಟೆಲ್ ವಸತಿ ವ್ಯವಸ್ಥೆ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಸಹ ಪ್ರಾರಂಭಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಅತ್ಯುನ್ನತ ಆದ್ಯತೆ’ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.

ನೋಡಿರಿ

