ದೇಶದ 92 ಕೋಟಿ ಜನರಿಗೆ ಸಾಮಾಜಿಕೆ ಭದ್ರತಾ ಸೌಲಭ್ಯ- ಕೇಂದ್ರ ಸರ್ಕಾರ

ದೇಶದ 92 ಕೋಟಿ ಜನರಿಗೆ ಸಾಮಾಜಿಕೆ ಭದ್ರತಾ ಸೌಲಭ್ಯ-  ಕೇಂದ್ರ ಸರ್ಕಾರ

ದೇಶದ ಜನಸಂಖ್ಯೆಯ ಶೇ. 65ರಷ್ಟು ಅಂದರೆ 92 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಸರ್ಕಾರ ಕಲ್ಪಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ.  ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ ಸಚಿವರು, ದಶಕದ ಹಿಂದೆ ಪಿಂಚಣಿ ಪಡೆಯುತ್ತಿದ್ದ ಶೇ. 18 ರಷ್ಟು ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೇ. 48 ರಷ್ಟು ಜನರಿಗೆ ಸಾಮಾಜಿಕ ಭದ್ರತೆ ಒದಗಿಸಿದೆ ಎಂದರು.

“ಇದು ರಾಜ್ಯಗಳ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳನ್ನು ಹೊರತುಪಡಿಸಿದೆ. ಇದರಲ್ಲಿ ಆಹಾರ ಭದ್ರತೆಯನ್ನು ಸೇರಿಸಿದರೆ ಶೇ. 65 ರಷ್ಟು ಜನರು ಸಾಮಾಜಿಕ ಭದ್ರತೆಯನ್ನು ಪಡೆಯುತ್ತಿದ್ದಾರೆ. ಭಾರತವು ದೇಶದ 92 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದೆ” ಎಂದು ಅಂತ ಹೇಳಿದ್ರು.

ಸರ್ಕಾರ 80 ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 60 ಕೋಟಿ ಜನರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತಿದೆ. 70 ವರ್ಷ ಮೇಲ್ಪಟ್ಟವರು ಮತ್ತು ಗಿಗ್ ವರ್ಕರ್‌ಗಳನ್ನು ಸಹ ಆಯುಷ್ಮಾನ್ ಭಾರತ್ ಯೋಜನೆಯಡಿ ತರಲಾಗಿದೆ. ಈ ಯೋಜನೆಯಡಿ ಸುಮಾರು 65 ಕೋಟಿ ಜನರು ಆರೋಗ್ಯ ಭದ್ರತೆಯನ್ನು ಪಡೆಯುತ್ತಿದ್ದಾರೆ.

ಸರ್ಕಾರವು ವಿಧವಾ, ಪಿಂಚಣಿ ಯೋಜನೆ ಮತ್ತು ವೃದ್ಧಾಪ್ಯ ವೇತನ ಯೋಜನೆಗಳನ್ನು ಸಹ ನಡೆಸುತ್ತಿದೆ. ಇಂದು 92 ಕೋಟಿ ಜನರು ಅಥವಾ ದೇಶದ ಜನಸಂಖ್ಯೆಯ ಶೇ. 65 ರಷ್ಟು ಜನರು ಒಂದಕ್ಕಿಂತ ಹೆಚ್ಚು ಸಾಮಾಜಿಕ ಭದ್ರತೆಯ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರ 80 ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 60 ಕೋಟಿ ಜನರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತಿದೆ. 70 ವರ್ಷ ಮೇಲ್ಪಟ್ಟವರು ಮತ್ತು ಗಿಗ್ ವರ್ಕರ್‌ಗಳನ್ನು ಸಹ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ತರಲಾಗುತ್ತದೆ. ಈ ಯೋಜನೆಯಡಿ ಸುಮಾರು 65 ಕೋಟಿ ಜನರು ಆರೋಗ್ಯ ಭದ್ರತೆಯನ್ನು ಪಡೆಯುತ್ತಿದ್ದಾರೆ. ಸರ್ಕಾರವು ವಿಧವಾ, ಪಿಂಚಣಿ ಯೋಜನೆ ಮತ್ತು ವೃದ್ಧಾಪ್ಯ ವೇತನ ಯೋಜನೆಗಳನ್ನು ಸಹ ನಡೆಸುತ್ತಿದೆ. ಇಂದು 92 ಕೋಟಿ ಜನರು ಅಥವಾ ದೇಶದ ಜನಸಂಖ್ಯೆಯ ಶೇ. 65 ರಷ್ಟು ಜನರು ಒಂದಕ್ಕಿಂತ ಹೆಚ್ಚು ಸಾಮಾಜಿಕ ಭದ್ರತೆಯ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

Kishor KV