ಜನೌಷಧಿ ಕೇಂದ್ರಗಳ ಉತ್ತೇಜನಕ್ಕೆ ಕೇಂದ್ರದಿಂದ SIDBI ಕ್ರೆಡಿಟ್ ಸ್ಕೀಮ್! – ಈ ಯೋಜನೆಯಿಂದ ಯಾರಿಗೆಲ್ಲಾ ಲಾಭ?

ಜನೌಷಧಿ ಕೇಂದ್ರಗಳ ಉತ್ತೇಜನಕ್ಕೆ ಕೇಂದ್ರದಿಂದ SIDBI ಕ್ರೆಡಿಟ್ ಸ್ಕೀಮ್! – ಈ ಯೋಜನೆಯಿಂದ ಯಾರಿಗೆಲ್ಲಾ ಲಾಭ?

ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ನೀವು ಕೂಡ ಜನೌಷಧ ಮಳಿಗೆ ತೆರೆಯಲು ಯೋಚಿಸುತ್ತಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ.. ಜನೌಷಧಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಸಾಲ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ: ರಾತ್ರಿಯಿಡಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ಲು.. ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ!

ಹೌದು, ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳಿಗೆ ಉತ್ತೇಜನ ಕೊಡಲು ಮತ್ತು ಹೆಚ್ಚೆಚ್ಚು ಕೇಂದ್ರಗಳನ್ನು ಸ್ಥಾಪಿಸಲು ಸಹಾಯವಾಗುವ ನಿಟ್ಟಿನಲ್ಲಿ ಸಿಡ್ಬಿ ಸಾಲ ಸೌಲಭ್ಯ ಯೋಜನೆಯನ್ನು (SIDBI credit assistance programme) ಸರ್ಕಾರ ಆರಂಭಸಿದೆ. ಈ ಯೋಜನೆಯ ಅಡಿಯಲ್ಲಿ ಜನೌಷಧಿ ಕೇಂದ್ರಗಳ ಆಪರೇಟರ್​ಗಳಿಗೆ ಅಡಮಾನ ರಹಿತ ಸಾಲಗಳನ್ನು ಎಸ್​ಐಡಿಬಿಐ ಸಂಸ್ಥೆಯಿಂದ ಸಾಲ ಸಿಗುತ್ತದೆ. ಹೊಸ ಜನೌಷಧಿ ಕೇಂದ್ರದ ಸ್ಥಾಪನೆಗೆ ಮತ್ತು ಜನೌಷಧಿ ಕೇಂದ್ರದ ವಿಸ್ತರಣೆಗೆ ಈ ಸ್ಕೀಮ್ ಸಹಾಯವಾಗಲಿದೆ.

ಭಾರತದಾದ್ಯಂತ 2024ರ ಜನವರಿ 31ರವರೆಗೆ 10,624 ಜನೌಷಧಿ ಕೇಂದ್ರಗಳು ನಿರ್ವಹಣೆ ಆಗುತ್ತಿವೆ. 2026ರ ಮಾರ್ಚ್ 31ರೊಳಗೆ ಒಟ್ಟು ಜನೌಷಧಿ ಕೇಂದ್ರಗಳ ಸಂಖ್ಯೆ 25,000 ಆಗಬೇಕು ಎಂಬುದು ಸರ್ಕಾರ ನಿಗದಿ ಮಾಡಿಕೊಂಡಿರುವ ಗುರಿ. ಈ ನಿಟ್ಟಿನಲ್ಲಿ ಸಿಡ್ಬಿ ಸಾಲ ಉಪಯೋಗಕ್ಕೆ ಬರಲಿದೆ. ಅಡಮಾನ ರಹಿತವಾಗಿರುವ ಈ ಸಾಲಕ್ಕೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಆಗಿರುವ ಸಿಜಿಟಿಎಂಎಸ್​ಇ ಸಂಸ್ಥೆ ಗ್ಯಾರಂಟಿ ಒದಗಿಸುತ್ತದೆ.

Shwetha M