ಉಡುಗೊರೆ, ಸರಕು ಪ್ಯಾಕೆಟ್ ಗಳ ಮೇಲೆ ಮಾಹಿತಿ ಕಡ್ಡಾಯ! – ಏನಿದು ಹೊಸ ರೂಲ್ಸ್?  

ಉಡುಗೊರೆ, ಸರಕು ಪ್ಯಾಕೆಟ್ ಗಳ ಮೇಲೆ ಮಾಹಿತಿ ಕಡ್ಡಾಯ! – ಏನಿದು ಹೊಸ ರೂಲ್ಸ್?  

ನವದೆಹಲಿ: ಗ್ರಾಹಕ ಸಚಿವಾಲಯವೊಂದು ಹೊಸ ರೂಲ್ಸ್ ಬಿಡುಗಡೆ ಮಾಡಿದೆ. ಇನ್ನುಮುಂದೆ ಉಡುಗೊರೆ, ಫ್ಯಾಮಿಲಿ ಪ್ಯಾಕ್‌ ಸೇರಿದಂತೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ಯಾಕ್‌ಗಳನ್ನು ಒಳಗೊಂಡಿರುವ ರಿಟೇಲ್‌ ಸರಕು ಪ್ಯಾಕೆಟ್‌ಗಳ ಹೊರ ಕವರ್‌(ಪ್ಯಾಕ್‌)ಗಳ ಮೇಲೆ ಎಲ್ಲಾ ಕಡ್ಡಾಯ ಮಾಹಿತಿಗಳನ್ನು ನಮೂದಿಸಬೇಕು ಎಂದು ತಿಳಿಸಿದೆ.

ಇದನ್ನೂ ಓದಿ:ಭಾರತದ ಆರ್ಥಿಕ ಬೆಳವಣಿಗೆ ಕುಂಠಿತ! – ಎಕನಾಮಿಕ್ ಸರ್ವೆ ಏನ್ ಹೇಳುತ್ತೆ?

ಇತ್ತೀಚಿನ ದಿನಗಳಲ್ಲಿ ರಿಟೇಲ್ ಪ್ಯಾಕೆಟ್ ಗಳ ಮೇಲೆ ಅಗತ್ಯ ಮಾಹಿತಿಗಳನ್ನು ನಮೂದಿಸುತ್ತಿಲ್ಲ. ಇದರಿಂದಾಗಿ ಭದ್ರತೆಗೆ ತೊಡಕು ಉಂಟಾಗುತ್ತಿದೆ. ಹಾಗಾಗಿ ಒಂದಕ್ಕಿಂತ ಹೆಚ್ಚಿನ ಪ್ಯಾಕ್‌ಗಳನ್ನು ಒಳಗೊಂಡಿರುವ ರಿಟೇಲ್‌ ಪ್ಯಾಕೆಟ್‌ಗಳ ಮೇಲೆ ಕಡ್ಡಾಯ ಮಾಹಿತಿ ಪ್ರಕಟಿಸಬೇಕು ಎಂದು ಸಚಿವಾಲಯ ಹೇಳಿದೆ.

ರಿಟೇಲ್ ಪ್ಯಾಕೆಟ್‌ಗಳ ಮೇಲೆ ತಯಾರಕರು, ಪ್ಯಾಕರ್‌ ಮತ್ತು ಆಮದುದಾರರ ಹೆಸರು ಮತ್ತು ವಿಳಾಸ, ಆಮದಾಗಿರುವ ವಸ್ತುಗಳಿಗೆ ದೇಶದ ಹೆಸರು, ನೆಟ್‌ ಕ್ವಾಂಟಿಟಿ, ತಯಾರು/ಪ್ಯಾಕ್‌ ಆದ ತಿಂಗಳು ಮತ್ತು ವರ್ಷ, ಬೆಸ್ಟ್‌ ಬಿಫೋರ್‌ ಯ್ಯೂಸ್‌ ಡೇಟ್‌ ಮತ್ತು ಕನ್ಸೂಮರ್‌ ಕೇರ್‌ ಈ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಪ್ಯಾಕ್‌ನ ಹೊರ ಭಾಗದ ಮೇಲೆ ನಮೂದಿಸಬೇಕು ಎಂದು ಸಚಿವಾಲಯ ಸೂಚಿಸಿದೆ.

suddiyaana