ಬರಗಾಲ ಘೋಷಣೆ ಮಾಡಲು ಸರ್ಕಾರದ ಸಿದ್ಧತೆ – ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ

ಬರಗಾಲ ಘೋಷಣೆ ಮಾಡಲು ಸರ್ಕಾರದ ಸಿದ್ಧತೆ – ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ

ಜೂನ್ ಒಂದರಿಂದ ಮುಂಗಾರು ಬರುತ್ತದೆ ಅಂತಾ ರೈತರು ಕಾಯುತ್ತಿದ್ದರು. ಈಗ ಜುಲೈ 1 ಬಂದರೂ ಮಳೆರಾಯ ಪತ್ತೆಯೇ ಇಲ್ಲ. ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟರೆ, ತುಮಕೂರು, ಕೋಲಾರ, ಚಿತ್ರದುರ್ಗ ಸೇರಿದಂತೆ ಉತ್ತರಕರ್ನಾಟಕದ ಹಲವೆಡೆ ಮಳೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ ಜೂನ್‌ನಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ. ಜುಲೈನಲ್ಲೂ ನಿಗದಿತ ಪ್ರಮಾಣದ ಮಳೆ ಬರದೇ ಇದ್ದಲ್ಲಿ, ಈ ಬಾರಿ ಬರಗಾಲ ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ ಬರಗಾಲ ಎಂದು ಘೋಷಣೆ ಮಾಡುವ ಸಿದ್ಧತೆಯಲ್ಲಿ ಸರ್ಕಾರವಿದೆ ಎಂದು ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯದ ಹಣ ಜು. 1 ರಿಂದಲೇ  ಕೊಡುತ್ತೇವೆ ಎಂದು ಹೇಳಿಲ್ಲ! – ಸಿಎಂ ಸಿದ್ದರಾಮಯ್ಯ

ಸರಕಾರ ಬರಗಾಲ ಘೋಷಣೆ ಮಾಡುವ ವಿಚಾರವಾಗಿ ಚಿಂತನೆ ನಡೆಸುತ್ತಿದೆ. ಈ ಬಾರಿ ಅಧಿವೇಶನದಲ್ಲಿ ಘೋಷಣೆ ಆಗುವ ಸಾದ್ಯತೆ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಬಾರಿ ಸರ್ಕಾರ ಬರಗಾಲ ಘೋಷಣೆ ಮಾಡಬಹುದು. ಆ ನಿಟ್ಟಿನಲ್ಲಿ ಸರ್ಕಾರ ಯೋಚನೆ ಮಾಡುತ್ತಿರಬಹುದು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಈಗಾಗಲೇ ವಿಜಯಪುರ ಸೇರಿದಂತೆ ಕೆಲ ಜಿಲ್ಲೆಗಳ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಬರಗಾಲ ಪೀಡಿತ ಜಿಲ್ಲೆಗಳು ಎಂದು ಘೋಷಣೆ ಮಾಡಿ ಎಂದು ರೈತರು ಕೂಡಾ ಮನವಿ ಮಾಡುತ್ತಿದ್ದಾರೆ. ಈಗ ಜುಲೈ ತಿಂಗಳು ಕೂಡಾ ಆರಂಭವಾಗಿದೆ. ಇನ್ನೂ ಮಳೆ ಬಂದಿಲ್ಲ ಎಂದರೆ ಬರಗಾಲ ಘೋಷಣೆ ಮಾಡಲು ಸರ್ಕಾರ ಕೂಡಾ ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ.

suddiyaana