ಡೆಂಗ್ಯೂ ‘ಸಾಂಕ್ರಾಮಿಕ ಕಾಯಿಲೆ’- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ!
ಕರ್ನಾಟಕದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಪಣತೊಟ್ಟಿದೆ. ಈ ಹಿನ್ನಲೆ ಡೆಂಗ್ಯೂ ವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಸರ್ಕಾರ ಘೋಷಿಸಿದೆ. ಇನ್ನು ಮುಂದೆ ಸ್ವಚ್ಚತೆ ಕಾಪಾಡದವರಿಗೆ ದಂಡ ಬೀಳಲಿದೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್ ಸಂಕಷ್ಟ! – 23 ದಿನಗಳಲ್ಲಿ ಎರಡನೇ ಬಾರಿಗೆ ನಾಡದೇವತೆ ದರ್ಶನ ಪಡೆದ ಸಿಎಂ
ಹೌದು, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡಿ ಆಗಸ್ಟ್ 31ರ ಕರ್ನಾಟಕ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಮನೆ, ಖಾಲಿ ಜಾಗ, ಕಟ್ಟಡದ ಬಳಿ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮವಹಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
- ನಿಯಮಗಳು ಹೀಗಿವೆ
- ಸೊಳ್ಳೆಗಳ ಸಂತಾನೋತ್ಪತ್ತಿ ಹರಡಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು.
- ಆಯಾ ಜಾಗದ ಮಾಲೀಕರು ಸೊಳ್ಳೆ ಬಾರದಂತೆ ಕ್ರಮ ವಹಿಸಬೇಕು.
- ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು.
- ನಿವೇಶನ ಅಥವಾ ಖಾಲಿ ಜಾಗದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಆ ರೀತಿ ಕಂಡು ಬಂದರೆ ನೋಟೀಸ್ ನೀಡಬೇಕು.
- 24 ಗಂಟೆಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ.
- ಸ್ವತ್ತಿನ ಮಾಲೀಕರು ನಿಗಾ ವಹಿಸಿದೆ ಇದ್ದರೆ, ಸಂಬಂಧ ಪಟ್ಟ ಅಧಿಕಾರಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು.
- ರಾಸಾಯನಿಕವನ್ನು ಸಿಂಪಡಿಸಬೇಕು. ಇದಕ್ಕೆ ಖರ್ಚಾದ ವೆಚ್ಚವನ್ನು ಸಂಬಂಧ ಪಟ್ಟವರು ನೀಡುವಂತೆ ಕ್ರಮ ವಹಿಸಬೇಕು.
- ಬಿಬಿಎಂಪಿ ಹಾಗೂ ಮಂಗಳೂರಿನಲ್ಲಿ ತೆರೆದ ಸ್ಥಳದಲಿ ನಿಂತ ನೀರನ್ನ ತೆರವುಗೊಳಿಲು ಆಯಾ ಮಾಲೀಕರೇ ಹೊಣೆ ಸೊಳ್ಳೆ ಉತ್ಪತ್ತಿಯಾಗುವ ಸ್ಥಳವನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.
ಸ್ವಚ್ಛತೆ ಕಾಪಾಡದವರಿಗೆ ಬೀಳಲಿದೆ ದಂಡ
- ಮನೆಗಳಿಗೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ನಿಯಮ ಉಲ್ಲಂಘಿಸಿದರೆ – 400 ರೂಪಾಯಿ ದಂಡ – ನಗರ ಪ್ರದೇಶ ಗ್ರಾಮಾಂತರದಲ್ಲಿ ಓಳಾಂಗಣ ಹಾಗೂ ಹೊರಾಂಗಣಕ್ಕೆ 200 ರೂಪಾಯಿ ದಂಡ.
- ರೆಸ್ಟೋರಂಟ್ , ಹೋಟೆಲ್, ತಿನಿಸುಗಳು, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ, ಮಾರ್ಕೆಟ್, ಪಾರ್ಕ್, ಮಾಲ್, ಸೂಪರ್ ಮಾರ್ಕೆಟ್ , ತೆಂಗಿನಕಾಯಿ ಮಾರಾಟಗಾರರು, ಕಾರ್ಖಾನೆ, ಕೈಗಾರಿಕೆ, ಥಿಯೇಟರ್, ಶಾಲೆಗಳು, ವಾಣಿಜ್ಯ ಸಂಸ್ಥೆಗಳು, ಕನ್ವೆಷನ್ ಹಾಲ್, ಇವುಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ ನಗರ ಪ್ರದೇಶದಲ್ಲಿ 1 ಸಾವಿರ ರೂ ದಂಡ. ಗ್ರಾಮಾಂತರ ಭಾಗದಲ್ಲಿ 500 ರೂಪಾಯಿ ದಂಡ.
- ತೆರೆದ ಸ್ಥಳಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ – ನಗರದ ಪ್ರದೇಶದಲ್ಲಿ 2 ಸಾವಿರ ರೂಪಾಯಿ ದಂಡ, ಗ್ರಾಮಾಂತರದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.