ಕ್ಯಾನ್ಸರ್ ಗೆದ್ದ ನಟಿಗೆ ಮತ್ತೊಂದು ಕಾಯಿಲೆ – ಚರ್ಮದ ಬಣ್ಣ ಬದಲಾಗುತ್ತಿರೋದೇಕೆ?

ಕ್ಯಾನ್ಸರ್ ಗೆದ್ದ ನಟಿಗೆ ಮತ್ತೊಂದು ಕಾಯಿಲೆ – ಚರ್ಮದ ಬಣ್ಣ ಬದಲಾಗುತ್ತಿರೋದೇಕೆ?

ಟಾಲಿವುಡ್ ನಟಿ ಸಮಂತಾ ಆರೋಗ್ಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಕಿಚ್ಚ ಸುದೀಪ್ ಜೊತೆ ನಟಿಸಿದ್ದ ನಟಿ ಕೂಡ ಕಾಯಿಲೆಯಿಂದ ಬಳಲುತ್ತಿದ್ದು ಫೋಟೋಗಳನ್ನ ಶೇರ್ ಮಾಡಿದ್ದಾರೆ.

ಇದನ್ನೂ ಓದಿ:‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದ ಆದಿಲ್ ಖಾನ್ – ರಾಖಿ ಸಾವಂತ್ ಮದುವೆ ಪ್ರಹಸನ ಸುಖಾಂತ್ಯ

ಕಿಚ್ಚ ಸುದೀಪ್ ಜೊತೆ ‘ಗೂಳಿ’ ಚಿತ್ರದಲ್ಲಿ ನಟಿ ಮಮತಾ ಮೋಹನ್ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ರು. ಮಲಯಾಳಂ ಮೂಲದ ಈ ನಟಿ ಈಗಾಗಲೇ ಕ್ಯಾನ್ಸರ್​ ಗೆದ್ದು ಬಂದಿದ್ರು. ಆದ್ರೆ ಈಗ ವಿಟಲೈಗೋ ಅನ್ನೋ ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆ ಬಂದ ಬಳಿಕ ಮಮತಾ ಚರ್ಮ ಅಲ್ಲಲ್ಲಿ ಕಾಂತಿ ಕಳೆದುಕೊಳ್ಳುತ್ತಿದೆ. ಈ ಸುದ್ದಿಯನ್ನ ಸ್ವತಃ ಮಮತಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಮಮತಾ ಇನ್ಸ್​​ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಮತಾ ದೇಹದ ಕೆಲ ಭಾಗಗಳಲ್ಲಿ ಬಣ್ಣ ಕಳೆದುಕೊಂಡಂತೆ ಕಾಣುತ್ತದೆ. ‘ಸೂರ್ಯನೇ ನಾನು ನಿನ್ನನ್ನ ಅಪ್ಪಿಕೊಳ್ಳುತ್ತಿದ್ದೇನೆ. ನಾನು ಕಾಂತಿಯನ್ನ ಕಳೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಮುಂಜಾನೆ ನಿನ್ನ ಕಿರಣಗಳನ್ನ ನೋಡಬೇಕೆಂದು ನಿನಗಿಂತ ಮೊದಲು ನಾನು ಏಳುತ್ತೇನೆ. ನಿನ್ನ ಕೃಪೆಗೆ ನಾನು ಸದಾ ಋಣಿ’ ಎಂದು ಬರೆದುಕೊಂಡಿದ್ದಾರೆ. ಮಮತಾರ ಈ ಪೋಸ್ಟ್​ಗೆ ಸಾಕಷ್ಟು ಕಮೆಂಟ್ಸ್ ಬಂದಿವೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಂತೆ ಪ್ರಾರ್ಥಿಸಿದ್ದಾರೆ. ವಿಟಲೈಗೋ ಕಾಯಿಲೆ ಬಂದ್ರೆ ಚರ್ಮದ ಮೇಲೆ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಬಣ್ಣಕ್ಕೆ ಕಾರಣವಾದ ಮೆಲನಿನ್ ಕೊರತೆಯಿಂದ ಈ ರೀತಿ ಆಗುತ್ತದೆ. ವಿಷ್ಯ ಅಂದ್ರೆ 2010ರಲ್ಲಿ ನಟಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆಗ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಗುಣಮುಖವಾಗಿ ಬಂದಿದ್ರು.

 

suddiyaana