ವೈದ್ಯರ ಔಷಧಿ ಚೀಟಿ ಅರ್ಥೈಸಲು ಹೊಸ ಆ್ಯಪ್ – ಏನಿದರ ವೈಶಿಷ್ಯ?

ವೈದ್ಯರ ಔಷಧಿ ಚೀಟಿ ಅರ್ಥೈಸಲು ಹೊಸ ಆ್ಯಪ್ – ಏನಿದರ ವೈಶಿಷ್ಯ?

ವೈದ್ಯರು ಬರೆದು ಕೊಡುವ ಪ್ರಿಸ್ಕ್ರಿಪ್ಷನ್ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅದನ್ನು ಅರ್ಥೈಸಿಕೊಳ್ಳಲು ಡಾಕ್ಟರ್ ಅಥವಾ ಮೆಡಿಕಲ್ ಸಿಬ್ಬಂದಿಗಳಿಗೆ ಮಾತ್ರ ಸಾಧ್ಯ. ಇನ್ನೂ ಮುಂದೆ ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಷನ್ ಅನ್ನು ಜನಸಾಮಾನ್ಯರು ಕೂಡ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಅದಕ್ಕಾಗಿ ಗೂಗಲ್ ಹೊಸದೊಂದು ಆ್ಯಪ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರಿನಲ್ಲಿ ಕಿಡ್ನಿ ರವಾನಿಸಿದ ಪೊಲೀಸರು  

ದೆಹಲಿಯಲ್ಲಿ ನಡೆದ ಗೂಗಲ್ ಇನ್ ಇಂಡಿಯಾ ಈವೆಂಟ್​ನಲ್ಲಿ  ವಿಶೇಷ ಎಐ ಅನ್ನು ಘೋಷಿಸಿದ್ದು ಇದರ ಮೂಲಕ ಪ್ರಿಸ್ಕ್ರಿಪ್ಷನ್​​ ಅನ್ನು ಡಿಕೋಡ್ ಮಾಡಿ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಗೂಗಲ್ ಲೆನ್ಸ್​ನಲ್ಲಿ ಪ್ರಾರಂಭವಾಗುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಿಸ್ಕ್ರಿಪ್ಷನ್ ಚಿತ್ರವನ್ನು ತೆಗೆದುಕೊಳ್ಳಲು ಅಥವಾ ಫೋಟೋ ಲೈಬ್ರರಿಯಿಂದ ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಈ ಆ್ಯಪ್ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಗೂಗಲ್ ಹೇಳಿದೆ.

ಈ ಅಪ್ಲಿಕೇಶನ್ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. ಬೀಟಾ ವರ್ಷನ್​ನಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರ ಹೆಚ್ಚಿನ ನವೀಕರಣಗಳನ್ನು ಮಾಡಿ ಬಿಡುಗಡೆಗೊಳಿಸುವುದು ಗೂಗಲ್​ನ ಯೋಜನೆಯಾಗಿದೆ.

ಗೂಗಲ್ ಇಂಡಿಯಾ ಸಂಶೋಧನಾ ನಿರ್ದೇಶಕ ಡಾ.ಮನೀಶ್ ಗುಪ್ತಾ ಅವರು, ಈ ಎಐ ಅನ್ನ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ನಲ್ಲಿನ ಕೈಬರಹದ ವಿಷಯವನ್ನು  ಸರಿಯಾಗಿ ಅರ್ಥಮಾಡಿಕೊಂಡಿರುವ ಉದಾಹರಣೆಯೊಂದಿಗೆ ಮಾಹಿತಿ ನೀಡಿದ್ದಾರೆ.

suddiyaana