ಗೂಗಲ್​ ಪೇ ಬಳಸ್ತಾ ಇದ್ದೀರಾ? – ಜೂನ್​ 4ರಿಂದ ಈ ಆ್ಯಪ್​ ಸ್ಥಗಿತ?

ಗೂಗಲ್​ ಪೇ ಬಳಸ್ತಾ ಇದ್ದೀರಾ? – ಜೂನ್​ 4ರಿಂದ ಈ ಆ್ಯಪ್​ ಸ್ಥಗಿತ?

ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲಿ ಫೋನ್‌ ಇದ್ರೆ ಸಾಕು.. ಈಗೀಗ ಕೈಯಲ್ಲಿ ಕ್ಯಾಶ್‌ ಬೇಕಂತ ಇಲ್ಲ.. ಎಲ್ಲವೂ ಡಿಜಿಟಲ್‌ ಆಗಿದೆ. ಹೋದಲೆಲ್ಲಾ ಸ್ಕ್ಯಾನ್‌ ಮಾಡಿ ಪೇಮೆಂಟ್‌ ಮಾಡಿ ಬರುತ್ತೇವೆ. ಗೂಗಲ್​ ಪೇ, ಪೇಟಿಯಂ, ಫೋನ್​ ಪೇ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಇದೀಗ ಗೂಗಲ್‌ ಪೇ ಬಳಸುವವರಿಗೆ ಶಾಕಿಂಗ್‌ ಸುದ್ದಿಯಿದೆ. ಜೂನ್‌ 4 ರಿಂದ ಗೂಗಲ್‌ ಪೇ ವರ್ಕ್‌ ಆಗಲ್ಲ.

ಇದನ್ನೂ ಓದಿ: RCBಗೆ ಎದುರಾಳಿ ಯಾರು? – ಫೈನಲ್‌ನಲ್ಲಿ KKR ಟೀಮ್‌ನ ಸೋಲಿಸಬಹುದಾ?

ಹೌದು ಅಚ್ಚರಿಯಾದ್ರೂ ಸತ್ಯ. ಗೂಗಲ್​ ಪೇ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಅಂದ ಹಾಗೆ ಗೂಗಲ್‌ ಪೇ ಭಾರತ ಹಾಗೂ ಸಿಂಗಾಪುರದಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಆದರೆ ಕೆಲವು ದೇಶಗಳಲ್ಲಿ ಗೂಗಲ್​ ಪೇ ಯನ್ನು ಸ್ಥಗಿತಗೊಳಿಸಲಾಗಿದೆ. ಗೂಗಲ್​ ತನ್ನ ಎಲ್ಲಾ ಬಳಕೆದಾರರನ್ನು ಗೂಗಲ್​ ವಾಲೆಟ್​ಗೆ ತೆರಳುವಂತೆ ಕೇಳಿಕೊಂಡಿದೆ. ಹಾಗಾಗಿ ಅದರ ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕೆ ಗೂಗಲ್​ ಪೇ ಕೆಲವು ದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಹಿಡಿದಿದೆ.

ಇತ್ತೀಚೆಗೆ ಗೂಗಲ್​ ವಾಲೆಟ್​ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಸದ್ಯ ಇದರ ಪ್ರಚಾರ ಕಾರ್ಯ ನಡೆಸುತ್ತಿದೆ. ಜೊತೆಗೆ ಬಳಕೆದಾರರನ್ನು ಸೆಳೆಯಲು ಕೆಲವು ಆಫರ್​ ನೀಡುತ್ತಿದೆ. ಅದರಲ್ಲಿ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​​, ಲಾಯಲ್ಟಿ ಕಾರ್ಡ್​, ಉಡುಗೊರೆಗಳನ್ನು ನೀಡುತ್ತಿದೆ. ಇನ್ನು ಗೂಗಲ್​ ವಾಲೆಟ್​ ಹಲವು ಫೀಚರ್ಸ್​ ಹೊಂದಿದೆ. ಈ ಅಪ್ಲಿಕೇಶನ್​ ಪಿನ್​ ರಕ್ಷಣೆ, ಕಳೆದು ಹೋದ ಸಾಧನದಲ್ಲಿರುವ ಅಕೌಂಟ್​ ಅನ್ನು ನಿಷ್ಟ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಸ್ನೇಹಿತರಿಗೆ ಸುಲಭವಾಗಿ ಹಣ ಕಳುಹಿಸಲು ಸಾಧ್ಯವಾಗುತ್ತದೆ.

Shwetha M