ಗೂಗಲ್ ಪೇ ಸಂಪೂರ್ಣ ಸ್ಥಗಿತ? – ಕಾರಣವೇನು? ಕಂಪನಿ ಹೇಳಿದ್ದೇನು?

ಗೂಗಲ್ ಪೇ ಸಂಪೂರ್ಣ ಸ್ಥಗಿತ? – ಕಾರಣವೇನು? ಕಂಪನಿ ಹೇಳಿದ್ದೇನು?

ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆಗಳು ಲಭ್ಯವಿದೆ. ಈ ಆಪ್ ಮೂಲಕವೇ ಅನೇಕರು ಹಣ ವರ್ಗಾವಣೆ ಮಾಡ್ತಾರೆ.. ಭಾರತದಲ್ಲಂತೂ ಗೂಗಲ್ ಪೇ ಯ‌ನ್ನು ದಿಲ್ಲಿಯಿಂದ ಹಿಡಿದು ಹಳ್ಳಿಗಳವರೆಗೂ ಬಳಸ್ತಾರೆ. ಆದ್ರೀಗ ಗೂಗಲ್ ಪೇಗೆ ಸಂಬಂಧಿಸಿದಂತೆ ಗೂಗಲ್ ಮಹತ್ವದ ನಿರ್ಧಾರ ಕೈಗೊಂಡಿದೆ..  ಈ ಆ್ಯಪ್ ಅಮೇರಿಕಾದಲ್ಲಿ ಜೂನ್ 4 ರಿಂದ ಸ್ಥಗಿತಗೊಳ್ಳಲಿದೆ..  ಗೂಗಲ್ ಪೇ ಆಪ್‌ನ ಯುಎಸ್ ಆವೃತ್ತಿಯನ್ನು ಜೂನ್ 4 ರಿಂದ ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ಬ್ಲಾಗ್ ಮೂಲಕ ಈ ಮಾಹಿತಿ ನೀಡಿದೆ.

ಇದನ್ನೂ ಓದಿ: ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! – ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ಇನ್ನು ಅಮೆರಿಕದಲ್ಲಿ ಗೂಗಲ್ ಪೇ ಆ್ಯಪ್‌ ಅನ್ನು ಸ್ಥಗಿತಗೊಳಿಸಿದ ಬಳಿಕ ಇಲ್ಲಿ ಗೂಗಲ್ ಪಿಯರ್-ಟು-ಪಿಯರ್ ಪಾವತಿಗಳ ಕಾರ್ಯಾಚರಣೆ ಕೂಡ ಸ್ಥಗಿತಗೊಳ್ಳಲಿದೆ. ಅಂದರೆ ಯುಎಸ್ ಆವೃತ್ತಿಯ ಗೂಗಲ್ ಪೇಯಲ್ಲಿ  ಬೇರೆಯವರಿಗೆ ಹಣ ಕಳುಹಿಸುವುದಾಗಲಿ, ಇಲ್ಲವೇ, ಇತರರಿಂದ ಹಣ ಸ್ವೀಕರಿಸುವುದಾಗಲಿ ಮಾಡಲು ಸಾಧ್ಯವಾಗುವುದಿಲ್ಲ. ಗೂಗಲ್‌ಪೇ ಬದಲು ಅಮೆರಿಕದಲ್ಲಿ ಗೂಗಲ್  ಪೇ ಬಳಕೆದಾರರು Google Wallet ಅಪ್ಲಿಕೇಶನ್‌ಗೆ ಬದಲಾಗುವಂತೆ ‌ಕಂಪನಿ ಸಲಹೆ ನೀಡಿದೆ. ಅಂದರೆ ಗೂಗಲ್‌ವ್ಯಾಲೆಟ್ ಎಂಬ ಹೊಸ ಅಪ್ಲಿಕೇಶನ್ ಬಳಕೆಗೆ ಬರಲಿದೆ.

ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಅಂತ ಗೂಗಲ್ ಮಾಹಿತಿ ನೀಡಿಲ್ಲ.. ಹಾಗಿದ್ದರೂ ಗೂಗಲ್ ಪೇ ಭಾರತದಲ್ಲಿ ಜನಪ್ರಿಯತೆ ಹೊಂದಿರುವಷ್ಟು ಅಮೆರಿಕಾದಲ್ಲಿ ಹೊಂದಿಲ್ಲ. ಅಲ್ಲಿ ಜನರು ಆ್ಯಪಲ್ ಕಂಪನಿಯ ಆ್ಯಪಲ್ ಪೇ ಯನ್ನು ಹೆಚ್ಚಾಗಿ ಬಳಸ್ತಾರೆ. ಇದೇ ಕಾರಣಕ್ಕಾಗಿ ಗೂಗಲ್ ಪೇ ಆ್ಯಪ್ ನ ಯುಎಸ್ ವರ್ಷನ್ ನಿರ್ವಹಣೆ ಕಂಪನಿಗೆ ಹೊರೆಯಾಗುತ್ತಿದೆ. ಇದರಿಂದಾಗಿ ಆ್ಯಪ್ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಗೂಗಲ್ ಬಂದಿದೆ ಅಂತ ಬ್ಯಾಂಕಿಂಗ್ ತಜ್ಞರು ವಿಶ್ಲೇಷಿಸಿದ್ದಾರೆ. 

ಇನ್ನು ಭಾರತದಲ್ಲಿ ಗೂಗಲ್ ಪೇ ವರ್ಕ್ ಆಗುತ್ತಾ ಇಲ್ವಾ ಅಂತಾ ಅನೇಕರಿಗೆ ಗೊಂದಲ ಇದೆ.. ಇದಕ್ಕೆ ಗೂಗಲ್ ಕಂಪನಿಯು ಸ್ಪಷ್ಟನೆ ನೀಡಿದೆ..  ಭಾರತ ಮತ್ತು ಸಿಂಗಾಪುರದಲ್ಲಿರುವ GPay ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ಈ ರಾಷ್ಟ್ರಗಳಲ್ಲಿ ಗೂಗಲ್ ಪೇ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.

Shwetha M