ಉದ್ಯೋಗಿಗಳು ಮಾತ್ರವಲ್ಲದೇ ರೋಬೋಟ್ ಗಳನ್ನೂ ಕೆಲಸದಿಂದ ತೆಗೆದುಹಾಕಿದ ಗೂಗಲ್!

ಉದ್ಯೋಗಿಗಳು ಮಾತ್ರವಲ್ಲದೇ ರೋಬೋಟ್ ಗಳನ್ನೂ ಕೆಲಸದಿಂದ ತೆಗೆದುಹಾಕಿದ ಗೂಗಲ್!

ವಾಷಿಂಗ್ಟನ್:  ಕೊವಿಡ್ ಬಳಿಕ ಅನೇಕ ಕಂಪನಿಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಹಲವು ಕಂಪನಿಗಳು ತಮ್ಮ ಸಾವಿರಾರು ಕೆಲಸಗಾರರನ್ನು ಉದ್ಯೋಗದಿಂದ ವಜಾಗೊಳಿಸಿವೆ. ಇದೀಗ ಉದ್ಯೋಗಿಗಳ ವಜಾ ಕೇವಲ ಮನುಷ್ಯರ ಮೇಲೆ ಮಾತ್ರವಲ್ಲದೇ ರೋಬೋಟ್‌ಗಳ ಮೇಲೂ ಈ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಆಲ್ಫಾಬೆಟ್‌ನ ಹೊಸ ಅಂಗಸಂಸ್ಥೆಯಾದ ಎವರಿಡೇ ರೋಬೋಟ್ ಕೆಫೆಟೇರಿಯಾ ಟೇಬಲ್‌ಗಳು, ಪ್ರತ್ಯೇಕ ಕಸ ಮತ್ತು ಬಾಗಿಲುಗಳನ್ನು ಸ್ವಚ್ಛಗೊಳಿಸಲು 100 ರೋಬೋಟ್ ಗಳಿಗೆ ತರಬೇತಿ ನೀಡಿತ್ತು. ಪ್ರತಿ ರೋಬೋಟ್ ಗಳ ನಿರ್ವಹಣೆಗೆ ಕಂಪನಿ ಹತ್ತು ಸಾವಿರ ಡಾಲರ್ ಗೂ ಅಧಿಕ ವೆಚ್ಚ ಭರಿಸುತ್ತಿತ್ತು. ಇದೀಗ ಬಜೆಟ್ ಕಡಿತದ ಭಾಗವಾಗಿ ಗೂಗಲ್ ಈ ತಂಡವನ್ನು ಮುಚ್ಚಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಔರಂಗಾಬಾದ್ & ಉಸ್ಮಾನಾಬಾದ್ ಹೆಸರು ಬದಲಾವಣೆ – ಹೊಸ ಹೆಸರುಗಳೇನು ಗೊತ್ತಾ..!?

ಆಲ್ಫಾಬೆಟ್‌ಗೆ ಈ ವೆಚ್ಚಗಳು ಅತ್ಯಂತ ದುಬಾರಿಯಾಗಿದೆ. ಎವರಿಡೇ ರೋಬೋಟ್ ಮತ್ತು ವೇಮೊ ಕಳೆದ ವರ್ಷ 6.1 ಬಿಲಿಯನ್ ಡಾಲರ್ ವೆಚ್ಚ ರೋಬೋಟ್ ನಿರ್ವಹಣೆಗೆ ಭರಿಸಿತ್ತು. ಅಲ್ಲದೇ ಗೂಗಲ್ ಜಾಹೀರಾತು ವೆಚ್ಚವು ನಿಧಾನಗೊಂಡಿದ್ದರಿಂದ ಆಲ್ಫಾಬೆಟ್‌ನ ಒಟ್ಟಾರೆ ಲಾಭವು ಕಳೆದ ವರ್ಷ 60 ಶತಕೋಟಿ ಡಾಲರ್‌ಗೆ 21 ಶೇಕಡಾ ಕುಸಿದಿದೆ. ಹೀಗಾಗಿ ಜನವರಿಯಲ್ಲಿ ಆಲ್ಫಾಬೆಟ್‌ ಇಂಕ್ ಸುಮಾರು 12,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದೆ ಎಂದು ಘೋಷಿಸಿತ್ತು.

suddiyaana