ದಸರಾ ಹಬ್ಬಕ್ಕೆ ನಂದಿನಿ ಗ್ರಾಹಕರಿಗೆ ಸಿಹಿಸುದ್ದಿ! – ಹಾಲು, ಮೊಸರು ದರ ಇಳಿಕೆ!

ದಸರಾ ಹಬ್ಬಕ್ಕೆ ನಂದಿನಿ ಗ್ರಾಹಕರಿಗೆ ಸಿಹಿಸುದ್ದಿ! – ಹಾಲು, ಮೊಸರು ದರ ಇಳಿಕೆ!

ಕರ್ನಾಟಕದ ಸ್ಟಾರ್ ಬ್ರ್ಯಾಂಡ್ ಕೆಎಂಎಫ್​​ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ನಂದಿನಿ ಉತ್ಪನ್ನಗಳಿಗೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಇದೀಗ ಕೆಎಂಎಫ್‌ ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ನಂದಿನಿ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.

ಇದನ್ನೂ ಓದಿ: ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ? – ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್‌ ಕಿಡಿ!

ಕೇಂದ್ರ ಸರ್ಕಾರ 2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​​ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್​ಟಿಯನ್ನ ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ ಕೆಎಂಎಫ್‌ ನಂದಿನಿ ಉತ್ಪನ್ನಗಳ ದರ ಏರಿಕೆ ಮಾಡಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿತ್ತು. ಈ  ಬೆನ್ನಲ್ಲೇ ನಂದಿನಿ ಉತ್ಪನ್ನಗಳ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್​​ ಈ ಬಗ್ಗೆ ಶುಕ್ರವಾರ ಕೆಎಂಎಫ್​​ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧಾರ ಮಾಡಲಾಗಿದೆ. ಇದೀಗ ಕೆಎಂಎಫ್‌  ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಮಾಡಿದೆ. ಇದೇ  ಸೋಮವಾರದಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಮೊಸರಿನ ದರ ಲೀಟರ್​ಗೆ 4 ರೂ. ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಿದೆ. ಇನ್ನು ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್​ ದರ ಪ್ರತಿ ಲೀಟರ್​ಗೆ 4 ರೂ. ಏರಿಕೆ ಮಾಡಲಾಗಿತ್ತು. ಅದೇ ರೀತಿಯಾಗಿ ಮೊಸರಿನ ದರ ಕೂಡ ಪ್ರತಿ ಲೀಟರ್​​ಗೆ 4 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಈ ನಾಲ್ಕು ರೂ. ಅನ್ನು ಕೆಎಂಎಫ್​ ಕಡಿತಕ್ಕೆ ನಿರ್ಧರಿಸಿದೆ. ಹೊಸ ದರ ಸೆ. 22ರಿಂದ ಜಾರಿಗೆ ಬರಲಿದೆ. ಆ ಮೂಲಕ ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Shwetha M