ರಾಜ್ಯದ ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್!‌ –  ಸರ್ಕಾರಿ ಇಲಾಖೆಗಳಲ್ಲಿ 2% ಉದ್ಯೋಗ ಮೀಸಲಾತಿ ಘೋಷಿಸಿದ ಸಿಎಂ!  

ರಾಜ್ಯದ ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್!‌ –  ಸರ್ಕಾರಿ ಇಲಾಖೆಗಳಲ್ಲಿ 2% ಉದ್ಯೋಗ ಮೀಸಲಾತಿ ಘೋಷಿಸಿದ ಸಿಎಂ!  

ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಗೂ ವಿಲನ್‌ ಆದ ಸೋಶಿಯಲ್‌ ಮೀಡಿಯಾ! – 40 ದಿನದಲ್ಲಿ 150 ವಿವಾಹ ರದ್ದು!

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್  ‌ಸದಸ್ಯ ಐವಾನ್ ಡಿಸೋಜ ಮಾತನಾಡಿ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲು ಇಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು ಪಾಲಿಸಿ ತರಬೇಕು. ಕಬಡ್ಡಿಗೂ ಪ್ರೋತ್ಸಾಹ ಕೊಡಬೇಕು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ಈವರೆಗೂ 13 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಕೊಡಲಾಗಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌, ಏಷ್ಯನ್ ಗೇಮ್ಸ್ ಗೆದ್ದವರಿಗೆ ಹುದ್ದೆ ಕೊಡ್ತೀವಿ. ಪೊಲೀಸ್ ಇಲಾಖೆಯಲ್ಲಿ, ಅರಣ್ಯ ಇಲಾಖೆಯಲ್ಲಿ 3% ಮೀಸಲಾತಿ ಮಾಡಿದ್ದೇವೆ‌. ಉಳಿದ ಇಲಾಖೆಯಲ್ಲಿ 2% ಮೀಸಲಾತಿ ನೀಡಲು ನಿರ್ಧಾರ ಮಾಡಿದ್ದೇವೆ. ಆದಷ್ಟೂ ಬೇಗ ಆದೇಶ ಮಾಡ್ತಿವಿ.ಕಬಡ್ಡಿಗೂ ಪ್ರೋತ್ಸಾಹ ಕೊಡಲು ಪರಿಶೀಲನೆ ಮಾಡ್ತೀನಿ ಎಂದರು‌.

ರಾಜ್ಯದ ಸರ್ಕಾರಿ ಇಲಾಖೆಯಲ್ಲಿ 2.88 ಲಕ್ಷ ಹುದ್ದೆಗಳು ಖಾಲಿ!

ಇನ್ನು ಇದೇ ವೇಳೆ  ಬಿಜೆಪಿ ಸದಸ್ಯ ಹನುಮಂತ ‌ನಿರಾಣಿ ಮಾತನಾಡಿದ್ದಾರೆ. ಸರ್ಕಾರದಲ್ಲಿ ವಿವಿಧ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಆದಷ್ಟೂ ಬೇಗ ಖಾಲಿ ಹುದ್ದೆ ತುಂಬಬೇಕು. 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ನಿಗಮಗಳು, ವಿಶ್ವವಿದ್ಯಾಲಯಗಳಲ್ಲಿ ಹುದ್ದೆ ಖಾಲಿ ಇವೆ. ಧಾರವಾಡ, ವಿಜಯಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ‌. ಕಾಲ ‌ಮಿತಿಯೊಳಗೆ ಹುದ್ದೆಗಳನ್ನ ಭರ್ತಿ ಮಾಡಿ ಅಂತ ಆಗ್ರಹ‌ ಮಾಡಿದ್ರು. ಹನುಮಂತ ನಿರಾಣಿ ಅವರ ಪಶ್ನೆಗೆ ಉತ್ತರಿಸಿದ ಸಿಎಂ, ಎಲ್ಲವೂ ಒಟ್ಟಿಗೆ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಹುದ್ದೆ ಭರ್ತಿ ಮಾಡ್ತೀವಿ‌ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಮಾಡೋಕೆ ಆಗೊಲ್ಲ. ಇಲ್ಲದೇ ಹೋದ್ರೆ ಸಂಬಳ ಕೊಡಲು ಸಾಧ್ಯವಿಲ್ಲ. ನಾನೇ ಫೈನಾನ್ಸ್ ಮಿನಿಸ್ಟರ್. ಹಂತ ಹಂತವಾಗಿ ಖಾಲಿ ಹುದ್ದೆ ತುಂಬಿತ್ತೇವೆ. 2.84,881 ಹುದ್ದೆಗಳು ಖಾಲಿ ಇವೆ. 24,300 ಹುದ್ದೆ ತುಂಬಲು ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. ಹೈದರಾಬಾದ್ ಕರ್ನಾಟಕ 371 ಹುದ್ದೆಗಳು 32,132 ಭರ್ತಿ ಮಾಡ್ತೀವಿ‌. ಒಟ್ಟಾಗಿ 56,432 ಹುದ್ದೆ ಭರ್ತಿ ಮಾಡ್ತಾ ಇದ್ದೇವೆ‌. ಒಳ ಮೀಸಲಾತಿ ಇದಿದ್ದಕ್ಕೆ ವಿಳಂಬ ಆಯ್ತು. ಈಗ ಒಳ ಮೀಸಲಾತಿ ಇತ್ಯರ್ಥ ಆಗಿದೆ. ಹುದ್ದೆ ಭರ್ತಿ ಮಾಡ್ತೀವಿ.

ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ 2.7 ಲಕ್ಷ ಹುದ್ದೆ ತುಂಬೋದಾಗಿ ಸರ್ಕಾರ ಹೇಳಿತ್ತು. ಈಗ 2.5 ವರ್ಷ ಆಯ್ತು ಹುದ್ದೆ ತುಂಬಿಲ್ಲ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯಲ್ಲಿ ಜಾಸ್ತಿ ಹುದ್ದೆ ಖಾಲಿ ಇದೆ. ಈ‌ ರೀತಿ ಗುಣಮಟ್ಟದ ಎಲ್ಲಿ ಸಿಗಲಿದೆ. ಧಾರವಾಡ ಸೇರಿ ಎಲ್ಲಾ ಕಡೆ ಹೋರಾಟ ಆಗ್ತಿದೆ ಎಂದರು.

ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಉತ್ತರಿಸಿ, 2 ಲಕ್ಷ ಹುದ್ದೆ ತುಂಬೋಕೆ ನಾವು ಟೈಂ ಇಟ್ಟುಕೊಂಡಿದ್ದೇವೆ. ಅದು ನಮ್ಮ ಡ್ಯೂಟಿ ನಾವು ಮಾಡ್ತೀವಿ. ಶಿಕ್ಷಣ ಇಲಾಖೆಯಲ್ಲಿ ಹುದ್ದೆ ಭರ್ತಿ ಮಾಡ್ತಿದ್ದೇವೆ ಎಂದು ಸಿಎಂ ಪರ‌ ಮಾತಾಡಿದ್ರು‌ ಬಳಿಕ ಸಿಎಂ ಮಾತಾಡಿ, ವಿಪಕ್ಷ ನಾಯಕರು ಶಿಕ್ಷಣ, ಆರೋಗ್ಯ, ಜಾಸ್ತಿ ಖಾಲಿ ಇದೆ ಅಂತ ಹೇಳಿದ್ದಾರೆ. ಬಿಜೆಪಿ ಕಾಲದಲ್ಲಿ ಎಲ್ಲಾ ಭರ್ತಿ ಮಾಡಿದ್ರಾ? ಬಿಜೆಪಿ ಕಾಲದಲ್ಲಿ ಖಾಲಿ ಇತ್ತು. ಎಲ್ಲರ ಕಾಲದಲ್ಲಿ ಹುದ್ದೆ ಖಾಲಿ ಇದೆ. ಹಂತ ಹಂತವಾಗಿ ನಾವು ಹುದ್ದೆ ಭರ್ತಿ ಮಾಡ್ತೀವಿ ಅಂತ ತಿಳಿಸಿದರು.

Shwetha M