ಸಿಲಿಕಾನ್ ಸಿಟಿ ಜನರಿಗೆ ಗುಡ್‌ನ್ಯೂಸ್ – ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ
ಹೊಸ ವರ್ಷಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಜನರು ಹೊಸ ವರ್ಷವನ್ನ ವೆಲ್‌ಕಮ್ ಮಾಡಲು ಸಜ್ಜಾಗಿದ್ದಾರೆ. ಇದೀಗ ಸಿಲಿಕಾನ್ ಸಿಟಿ ಜನರಿಗೆ ಖುಷಿ ಸುದ್ದಿಯೊಂದಿದೆ. ಡಿ.31ರ ರಾತ್ರಿ ನೇರಳೆ ಮತ್ತು ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ! – ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್ ಸಿಗುತ್ತಾ?
ಈ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಜನವರಿ-1 ರಂದು ಮುಂಜಾನೆ 2 ಗಂಟೆಗೆ ಎಲ್ಲಾ ಟರ್ಮಿನಲ್‌ನಿಂದ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ 2.40 ಗಂಟೆಗೆ ಕೊನೆಯ ರೈಲು ಹೊರಡಲಿದೆ. 31 ಡಿಸೆಂಬರ್ ರಾತ್ರಿ 11 ರಿಂದ 10 ನಿಮಿಷಕ್ಕೊಮ್ಮೆ ಟ್ರೈನ್ ಸೇವೆ ಲಭ್ಯವಿರಲಿದೆ.
ಡಿ. 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಎಲ್ಲಿ ಹತ್ತಿ ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.