SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಪರೀಕ್ಷೆಯಲ್ಲಿ 30 ಅಂಕ ಗಳಿಸಿದ್ರೆ ಪಾಸ್!‌

SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಪರೀಕ್ಷೆಯಲ್ಲಿ 30 ಅಂಕ ಗಳಿಸಿದ್ರೆ ಪಾಸ್!‌

ಇಷ್ಟು ದಿನ ಪರೀಕ್ಷೆಯಲ್ಲಿ ಪಾಸ್‌ (Pass) ಆಗಲು ಪ್ರತಿ ಸಬ್ಜೆಕ್ಟ್‌ನಲ್ಲಿ 35 ಅಂಕ ಗಳಿಸಲೇ ಬೇಕಿತ್ತು. 1 ಅಂಕ ಕಡಿಮೆ ಬಂದ್ರೂ ಅನುತ್ತೀರ್ಣ ಅನುತ್ತೀರ್ಣ ಅಂತ ಹೇಳಲಾಗ್ತಿತ್ತು. ಆದ್ರೀಗ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ವೊಂದಿದೆ. ಇನ್ನುಮುಂದೆ 30 ಅಂಕ ಗಳಿಸಿದ್ರೂ ಪಾಸ್‌.

ಇದನ್ನೂ ಓದಿ: ನಾಡಹಬ್ಬಕ್ಕೆ ಗಜಪಡೆ ಲಿಸ್ಟ್ ರೆಡಿ – ಆಗಸ್ಟ್ 4 ರಂದು ದಸರಾ ಗಜಪಯಣ ಆರಂಭ

ರಾಜ್ಯ ಸರ್ಕಾರ ಉತ್ತೀರ್ಣ ನಿಯಮ ಬದಲಾವಣೆ ಮಾಡಿದೆ. ಇನ್ಮುಂದೆ ಎಸ್‌ಎಸ್‌ಎಲ್‌ಸಿ(SSLC) ಯಲ್ಲಿ 33% ಅಂಕ ಪಡೆದರೆ ಉತ್ತೀರ್ಣ (Pass) ಎಂದು ಘೋಷಿಸಲಾಗುವುದು ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣ ನಿಯಮ ಬದಲಾವಣೆ ಸಂಬಂಧ ಸರ್ಕಾರ ಕರಡು ಆದೇಶ ಹೊರಡಿಸಿದೆ.

ಹೊಸ ನಿಯಮದ ಪ್ರಕಾರ ಆಂತರಿಕ ಮೌಲ್ಯಮಾಪನ, ಬಾಹ್ಯ ಪರೀಕ್ಷೆ ಸೇರಿ 33% ಅಂಕ ಗಳಿಸಿದ್ರೆ ವಿದ್ಯಾರ್ಥಿಗಳು ಪಾಸ್ ಎಂದು ಪರಿಗಣಿಸಲಾಗುವುದು. 625 ಅಂಕಗಳಿಗೆ ಕನಿಷ್ಠ 206 ಅಂಕ ಗಳಿಸಬೇಕು. ಜೊತೆಗೆ ಆಯಾ ವಿಷಯದಲ್ಲಿ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳು ಪಡೆದರೆ ಅಂತಹ ವಿದ್ಯಾರ್ಥಿಯೂ ಪಾಸ್ ಅಂತ ಘೋಷಣೆ ಮಾಡಲಾಗುತ್ತದೆ ಎಂದು ರಾಜ್ಯ ಪತ್ರದಲ್ಲಿ ತಿಳಿಸಿದೆ. ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆಕ್ಷೇಪಣೆ ಸಲ್ಲಿಕೆ ಬಳಿಕ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

Shwetha M