ಬಾಡಿಗೆ ಮನೆ ನಿವಾಸಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌! – ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಬದಲಾವಣೆ

ಬಾಡಿಗೆ ಮನೆ ನಿವಾಸಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್‌! – ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಬದಲಾವಣೆ

ಬಾಡಿಗೆ ಮನೆಯಲ್ಲಿ ವಾಸಿಸುವ ಜನರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಬಾಡಿಗೆ ಮನೆ ನಿವಾಸಿಗಳ ಅನುಕೂಲಕ್ಕಾ ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಇನ್ನುಮುಂದೆ ಕಚೇರಿಗಳಿಗೆ ಅಲೆಯೋದು ತಪ್ಪಲಿದೆ.

ಇದನ್ನೂ ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಆರಂಭ – ಇಡೀ ದೇಶಾದ್ಯಂತ ಮೊಬೈಲ್ ಸೇವೆ ಸ್ಥಗಿತ

ರಾಜ್ಯದ ಜನರ‌ ಮನೆ ಬೆಳಗುವ ಗೃಹಜ್ಯೋತಿ ಜಾರಿಯಾಗಿ, ಅದರ ಲಾಭವನ್ನ ಕೋಟ್ಯಾಂತರ ಜನ ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಸರ್ಕಾರ ಮತ್ತಷ್ಟು ಜನಸ್ನೇಹಿ‌ ಮಾಡ್ತಿದೆ.‌ ಬಾಡಿಗೆ ಮನೆಗಳಲ್ಲಿರೋರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿದೆ‌‌. ಇದ್ರಿಂದ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗೋ ತಾಪತ್ರಯ ತಪ್ಪುತ್ತೆ.

ಸದ್ಯ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಗೃಹಜ್ಯೋತಿ ಯೋಜನೆಯಡಿ ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಸುತ್ತಾರೆ. ಆದರೆ ಮನೆಯನ್ನು ಖಾಲಿ ಮಾಡುವಾಗ ಅವರು ಆನ್‌ಲೈನ್ ಮೂಲಕ ಹಳೆ ಮನೆ ನೋಂದಣಿ ರದ್ದುಗೊಳಿಸಲು ಅವಕಾಶವಿರಲಿಲ್ಲ. ಹೀಗಾಗಿ ಬಾಡಿಗೆದಾರರು ಪರದಾಡ್ತಿದ್ರು.. ಹಳೆ‌ ನೋಂದಣಿ ರದ್ದಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಿತ್ತು. ಇನ್ಮುಂದೆ ಸೇವಾಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು ಗೊಳಿಸಬಹುದು. ಈ ಪ್ರಕ್ರಿಯೆಗಾಗಿ ಇಂಧನ ಇಲಾಖೆಯಿಂದ De-Link ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್ ಮೂಲಕ ರದ್ದತಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಬೇಕು ಎಂದು ಹಲವು ತಿಂಗಳ ಬೇಡಿಕೆ ಆಗಿತ್ತು, ಅದರಂತೆ ಹೊಸ ಬಾಡಿಗೆ ಮನೆ‌ಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ಆಯ್ಕೆ ಅವಕಾಶ ಸಾಧ್ಯತೆ ಇದೆ.

Shwetha M