RCBಗೆ ಡೆಡ್ ಲೈನ್ ಕೊಟ್ಟ BCCI – ಚಿನ್ನಸ್ವಾಮಿ ಪಂದ್ಯಗಳಿಗೂ ಕಂಡೀಷನ್ಸ್!
ಫ್ರಾಂಚೈಸಿಗೆ ಹೊಸ ಓನರ್ ಫಿಕ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಐಪಿಎಲ್‌ನ ದಿ ಮೋಸ್ಟ್ ಫ್ಯಾನ್ ಬೇಸ್ಡ್ ಫ್ರಾಂಚೈಸಿ. 2025ರ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ರು. ಆದ್ರೆ ಅಂದಿನಿಂದ ಸ್ಟಿಲ್ ಈವರೆಗೂ ಆರ್ಸಿಬಿ ವಿಚಾರವಾಗಿ ಒಂದಿಲ್ಲೊಂದು ಡವಲಪ್ಮೆಂಟ್ಸ್ ಆಗ್ತಾನೇ ಇದೆ. ಈಗ ಫ್ರಾಂಚೈಸಿ ಮಾರಾಟ, ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳ ಆಯೋಜನೆ ಬಗ್ಗೆ ಬಿಗ್ ಅಪ್ಡೇಟ್ಸ್ ಹೊರಬಿದ್ದಿದೆ.
ಇದನ್ನೂ ಓದಿ : ಡೆತ್ ಓವರ್ ಸ್ಪೆಷಲಿಸ್ಟ್ ರಿಂಕು – ಬೆಂಚ್ ಕಾಯಿಸಿದ್ದ BCCIಗೆ ಶೇಮ್
ಒಂದ್ಕಡೆ ವುಮೆನ್ಸ್ ಐಪಿಎಲ್ ನಲ್ಲಿ ಆರ್ಸಿಬಿ ಸತತವಾಗಿ 5 ಪಂದ್ಯ ಗೆದ್ದು ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಇನ್ನೊಂದ್ಕಡೆ ಹಾಲಿ ಚಾಂಪಿಯನ್ಸ್ ಬಾಯ್ಸ್ ಟೀಂ 19ನೇ ಆವೃತ್ತಿಯಲ್ಲೂ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಇದ್ರ ನಡುವೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸ್ಬೇಕಾ ಬೇಡ್ವಾ ಅನ್ನೋ ಚರ್ಚೆ ಬೇರೆ. ಇದು ಸಾಲ್ದು ಅಂತಾ ಈಗ ಫ್ರಾಂಚೈಸಿ ಖರೀದಿಗೆ ನಾವು ಸಿದ್ಧ ಅಂತಾ ಆದಾರ್ ಪೂನಾವಾಲ ಬಹಿರಂಗವಾಗೇ ಘೋಷಿಸಿದ್ದಾರೆ.
ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಆರ್ ಸಿಬಿಗೆ ಡೆಡ್ ಲೈನ್!
2026ರ ಐಪಿಎಲ್ಗೆ ಶೆಡ್ಯೂಲ್ ಫಿಕ್ಸ್ ಆಗ್ತಿದ್ದು ಇನ್ನೊಂದು ವಾರದಲ್ಲೇ ಡೇಟ್ಸ್ ಅನೌನ್ಸ್ ಆಗುತ್ತೆ. ಹೀಗಾಗಿ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನ ಆಯೋಜನೆ ಮಾಡ್ತಾರಾ ಅಥವಾ ಬೇರೆ ಹೋಂ ಗ್ರೌಂಡ್ ಸೆಲೆಕ್ಟ್ ಮಾಡಿಕೊಂಡಿದ್ದಾರಾ ಅನ್ನೋದನ್ನ ಕನ್ಫರ್ಮ್ ಮಾಡ್ಬೇಕು. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಕೂಡ ತಮ್ಮ ತವರು ಮೈದಾನವನ್ನ ಚೇಂಜ್ ಮಾಡ್ಬೇಕಿದೆ. ಚುನಾವಣೆ ವಿಚಾರವಾಗಿ ರಾಜಸ್ಥಾನ ವಿಚಾರವಾಗಿ ಗರಂ ಆಗಿದ್ದು ಅಲ್ಲಿನ ಮೈದಾನದಲ್ಲಿ ಪಂದ್ಯಗಳನ್ನ ಆಯೋಜನೆ ಮಾಡದಿರಲು ನಿರ್ಧಾರ ಮಾಡಿದೆ. ಹೀಗಾಗಿ ಆರ್ಸಿಬಿ ಮತ್ತು ಆರ್ಆರ್ ತಂಡಗಳಿಗೆ ಬಿಸಿಸಿಐ ಜ.27ರ ಡೆಡ್ಲೈನ್ ನೀಡಿದೆ.
ಸರ್ಕಾರ ಮತ್ತು ಕೆಎಸ್ ಸಿಎ ಒಪ್ಪಿದ್ರೂ ಆರ್ ಸಿಬಿ ಹಿಂದೇಟು!
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸಾಕಷ್ಟು ಶ್ರಮ ವಹಿಸಿ ರಾಜ್ಯ ಸರ್ಕಾರದಿಂದ ಷರತ್ತುಬದ್ಧ ಅನುಮತಿ ಪಡೆದಿದ್ದಾರೆ.. ಆದರೆ ಬೆಂಗಳೂರಿನಲ್ಲಿ ಆಡುವ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಮಿನಮೇಷ ಎಣಿಸ್ತಿದೆ. ಜೊತೆಗೆ ಬಿಸಿಸಿಐ ಚಿನ್ನಸ್ವಾಮಿಯನ್ನ ಪಂದ್ಯಗಳನ್ನು ನಡೆಸಬೇಕಿದ್ದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಯಾವುದೇ ಷರತ್ತುಗಳಿಲ್ಲದ ರೀತಿ ಅನುಮತಿ ಪಡೆಯಬೇಕು ಎಂದಿದೆ. ಹೀಗಾಗಿ ಆರ್ಸಿಬಿ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುತ್ವಾ ಇಲ್ವಾ ಅನ್ನೋ ಬಗ್ಗೆ ಗೊಂದಲ ಮುಂದುವರಿದಿದೆ. ಒಂದ್ಕಡೆ ಬೆಂಗಳೂರಲ್ಲಿ ಪಂದ್ಯಗಳು ನಡೆಯುತ್ತಾ ಇಲ್ವಾ ಅಂತಾ ಫ್ಯಾನ್ಸ್ ಟೆನ್ಷನ್ ನಲ್ಲಿ ಇರುವಾಗ್ಲೇ ಫ್ರಾಂಚೈಸಿ ಮಾರಾಟದ ವಿಚಾರ ಮತ್ತೆ ಸದ್ದು ಮಾಡ್ತಿದೆ.
ಆರ್ ಸಿಬಿ ತಂಡ ಖರೀದಿಸಲು ರೆಡಿ ಎಂದ ಪೂನಾವಾಲ
ಐಪಿಎಲ್ ನಲ್ಲಿ ಅತ್ಯಂತ ಜನಪ್ರಿಯ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವ ಬದಲಾಗುವ ಟೈಂ ಬಂದಂತಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾದ ‘ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ದ ಸಿಇಒ ಆದರ್ ಪೂನಾವಾಲಾ ಅವರೇ ಸ್ವತಃ ಆರ್‌ಸಿಬಿ ತಂಡ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಐಪಿಎಲ್‌ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ ತಂಡಕ್ಕಾಗಿ ಪ್ರಬಲ ಮತ್ತು ಸ್ಪರ್ಧಾತ್ಮಕ ಬಿಡ್ ಸಲ್ಲಿಸಲಿದ್ದೇನೆ ಎಂದಿದ್ದಾರೆ. ಸೋ ಅಲ್ಲಿಗೆ ಆರ್ಸಿಬಿ ಫ್ರಾಂಚೈಸಿಯ ಮಾರಾಟ ಅಧಿಕೃತವಾಗಿದೆ. ಒಟ್ನಲ್ಲಿ ಆರ್ಸಿಬಿ ವಿಚಾರವಾಗಿ ಒಂದಿಲ್ಲೊಂದು ಸುದ್ದಿಗಳು ಹೊರ ಬೀಳ್ತಾನೇ ಇವೆ. ಆದ್ರೆ ಅದೆಲ್ಲಕ್ಕಿಂತ ಮೊದ್ಲು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯಗಳನ್ನ ನಡೆಸೋಕೆ ಯಾವುದೇ ವಿಘ್ನಗಳು ಎದುರಾಗದೇ ಫ್ರಾಂಚೈಸಿ ಕೂಡ ಒಪ್ಪಿದ್ರೆ ಅದೇ ಅಭಿಮಾನಿಗಳ ಪಾಲಿಗೆ ಅತಿದೊಡ್ಡ ಗುಡ್ ನ್ಯೂಸ್.

ನೋಡಿರಿ

