IPL ರೀ ಸ್ಟಾರ್ಟ್.. RCBಗೆ ಬೂಸ್ಟ್ – ರೆಡ್ ಆರ್ಮಿಗೆ ಫಾರಿನರ್ಸ್ POWER
ಲುಂಗಿ, ಶೆಫರ್ಡ್, ಬೆಥೆಲ್ ಬ್ರಹ್ಮಾಸ್ತ್ರ!

ಶನಿವಾರದಿಂದ ಐಪಿಎಲ್ ಟೂರ್ನಿ ರೀ ಸ್ಟಾರ್ಟ್ ಆಗ್ತಿದೆ. ಫಸ್ಟ್ ಮ್ಯಾಚಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಳಿಯಲಿವೆ. ವಿಷ್ಯ ಅಂದ್ರೆ ಬೆಂಗಳೂರಲ್ಲೇ ಮ್ಯಾಚ್ ನಡೀತಾ ಇರೋದು ಕನ್ನಡಿಗರಿಗೆ ಮತ್ತಷ್ಟು ಜೋಶ್ ನೀಡಲಿದೆ. ಈಗಾಗ್ಲೇ 11 ಪಂದ್ಯಗಳನ್ನ ಆಡಿ 8 ಮ್ಯಾಚ್ ಗೆದ್ದು 16 ಅಂಕಗಳನ್ನ ಪಡೆದಿರೋ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೂ ಮೂರು ಮ್ಯಾಚ್ಗಳು ಇರೋದ್ರಿಂದ ಒಂದು ಪಂದ್ಯ ಗೆದ್ಕೊಂಡ್ರೂ ಪ್ಲೇಆಫ್ ಟಿಕೆಟ್ ಕನ್ಫರ್ಮ್ ಆಗುತ್ತೆ. ಸೋ ಈಗ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಆರ್ಸಿಬಿ ಪರ ಯಾರೆಲ್ಲಾ ಕಣಕ್ಕಿಳಿಬೋದು ಅನ್ನೋದಕ್ಕೆ ಒಂದು ಕ್ಲಾರಿಟಿ ಸಿಕ್ತಿದೆ.
ಇದನ್ನೂ ಓದಿ : ಭಾರತದ ಮುಂದೆ ಮಂಡಿಯೂರಿದ ಪಾಕ್ – ಜಲ ಒಪ್ಪಂದದ ರದ್ದತಿ ಮರುಪರಿಶೀಲಿಸಲು ಮನವಿ
ಭಾರತ ಮತ್ತು ಪಾಕ್ ನಡುವಿನ ಯುದ್ಧ ಸನ್ನಿವೇಶದಿಂದಾಗಿ ಸ್ವದೇಶಕ್ಕೆ ವಾಪಸ್ ಆಗಿದ್ದ ಮೂವರು ವಿದೇಶಿ ಪ್ಲೇಯರ್ಸ್ ಆರ್ಸಿಬಿ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟರ್ ರೊಮಾರಿಯೊ ಶೆಫರ್ಡ್ ಬುಧವಾರ ಭಾರತಕ್ಕೆ ಹಿಂತಿರುಗಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಮುಂದಿನ ಪಂದ್ಯದಲ್ಲಿ ಕೆರಿಬಿಯನ್ ದೈತ್ಯ ಆಟಗಾರ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇನ್ನು ಇಂಗ್ಲೆಂಡ್ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಜೇಕಬ್ ಬೆಥೆಲ್ ಕೂಡ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಲಭ್ಯರಿರಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧ ಆರ್ಸಿಬಿ ಪರ ಬೆಥೆಲ್ ಇನಿಂಗ್ಸ್ ಆರಂಭಿಸಬಹುದು.
ಸದ್ಯಕ್ಕೇನೋ ಫಾರಿನ್ ಆಟಗಾರರು ತಂಡವನ್ನ ಸೇರ್ಕೊಂಡಿದ್ದಾರೆ ನಿಜ. ಬಟ್ ಟೂರ್ನಿ ಮುಗಿಯೋವರೆಗೂ ಇರ್ತಾರಾ ಅಂದ್ರೆ ಇಲ್ಲ. ಮುಂದಿನ ಎರಡು ಪಂದ್ಯಗಳ ಬಳಿಕ ಜೇಕಬ್ ಬೆಥೆಲ್ ಹಾಗೂ ರೊಮಾರಿಯೊ ಶೆಫರ್ಡ್ ತವರಿಗೆ ಹಿಂತಿರುವ ಸಾಧ್ಯತೆಯಿದೆ. ಏಕೆಂದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಬೆಥೆಲ್ ಹಾಗೂ ಶೆಫರ್ಡ್ ಮೇ 25ರ ಬಳಿಕ ಇಂಗ್ಲೆಂಡ್ಗೆ ತೆರಳುವ ಸಾಧ್ಯತೆಯಿದೆ. ಇನ್ನು ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ತಂಡದಲ್ಲೇ ಉಳಿಯಲಿದ್ದಾರೆ. ಏಕೆಂದರೆ ಲಿವಿಂಗ್ಸ್ಟೋನ್ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಆರ್ಸಿಬಿ ತಂಡದ ಜೊತೆ ಟೂರ್ನಿ ಮುಕ್ತಾಯದವರೆಗೂ ಇರ್ತಾರೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಫಿಲ್ ಸಾಲ್ಟ್ ಆಯ್ಕೆಯಾಗಿಲ್ಲ. ಮತ್ತೊಂದೆಡೆ ಲುಂಗಿ ಎಂಗಿಡಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ದಕ್ಷಿಣ ಅಫ್ರಿಕಾ ಘೋಷಿಸಿರುವ 15 ಸದಸ್ಯರ ತಂಡದಲ್ಲಿ ಭಾಗವಾಗಿದ್ದಾರೆ. WTC ಫೈನಲ್ಗೂ ಮುನ್ನ ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧ ಜೂನ್ 3ರಿಂದ 6ರವರೆಗೆ 4 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಎಲ್ಲಾ ಆಟಗಾರರು ಹಾಜರಾಗಬೇಕು ಅಂತಾ ಕಂಪಲ್ಸರಿ ಮಾಡಿದ್ರೆ ಎಂಗಿಡಿ ಅನಿವಾರ್ಯವಾಗಿ ಪ್ಲೇ ಆಫ್ ಬಿಟ್ಟು ಹೋಗಬೇಕಾಗುತ್ತದೆ.
ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾದಲ್ಲಿದ್ದು ಭಾರತಕ್ಕೆ ವಾಪಸ್ ಬರ್ತಾರೋ ಇಲ್ವೋ ಅನ್ನೋದೇ ದೊಡ್ಡ ಡೌಟ್ ಆಗಿತ್ತು. ಬಟ್ ಹೇಜಲ್‌ವುಡ್ ಭಾರತಕ್ಕೆ ಮರಳಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಸೇರಿಕೊಳ್ತಾರೆ. ಹೇಜಲ್‌ವುಡ್ ಅವರ ಆಪ್ತ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ಈ ಬಗ್ಗೆ ದೃಢಪಡಿಸಿದ್ದು, ಬಲಗೈ ವೇಗಿ ಆರ್‌ಸಿಬಿಗೆ ರೀ ಜಾಯ್ನ್ ಆಗ್ತಾರೆ. ಈ ಸೀಸನ್ನಲ್ಲಿ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆಯುವ ಮೂಲಕ ಆರ್‌ಸಿಬಿಯ ಬೌಲಿಂಗ್ ಬ್ರಹ್ಮಾಸ್ತ್ರವಾಗಿದ್ದಾರೆ. ಬಟ್ ಭುಜದ ಗಾಯದಿಂದಾಗಿ ತಮ್ಮ ಕೊನೆಯ ಲೀಗ್ ಪಂದ್ಯವನ್ನು ತಪ್ಪಿಸಿಕೊಂಡಿದ್ರು. ಆದ್ರೆ ಈಗ ಭಾರತಕ್ಕೆ ಅವ್ರು ಯಾವಾಗ ವಾಪಸ್ ಆಗ್ತಾರೆ ಅನ್ನೋದು ಡೇಟ್ ಕನ್ಪರ್ಮ್ ಆಗದ ಕಾರಣ ಕೊಲ್ಕತ್ತಾ ವಿರುದ್ಧದ ಪಂದ್ಯ ಆಡ್ತಾರಾ ಅಥವಾ ಮಿಸ್ ಮಾಡಿಕೊಳ್ತಾರೋ ಅನ್ನೋ ಅನುಮಾನಗಳಿವೆ.
ಐಪಿಎಲ್ ಪೋಸ್ಟ್ಪೋನ್ನಿಂದಾಗಿ 9 ದಿನ ಟೂರ್ನಿ ವಿಸ್ತರಣೆ ಆಗಿದ್ರಿಂದ ಸಾಕಷ್ಟು ವಿದೇಶಿ ಪ್ಲೇಯರ್ಸ್ ಹೋಂ ಟೀಂ ಕಮಿಟ್ಮೆಂಟ್ಸ್ನಿಂದ ವಾಪಸ್ ಆಗ್ಬೇಕಾಗುತ್ತೆ. ಹೀಗಾಗಿ ಬದಲಿ ಆಟಗಾರರನ್ನ ಸೇರಿಸಿಕೊಳ್ಳೋಕೆ ಬಿಸಿಸಿಐ ತನ್ನ ನಿಯಮಗಳಲ್ಲಿ ಸಡಿಲಿಕೆ ನೀಡಿದೆ. ಪ್ರತೀ ತಂಡಕ್ಕೂ ವಿದೇಶಿ ಆಟಗಾರರನ್ನು ತಾತ್ಕಾಲಿಕವಾಗಿ ಬದಲಾಯಿಸಲು ಅವಕಾಶ ಸಿಗಲಿದೆ. ಐಪಿಎಲ್ ನಿಯಮಗಳ ಪ್ರಕಾರ ಲೀಗ್ ಹಂತದ 12 ಪಂದ್ಯಗಳು ಮುಗಿದ ನಂತರ, ಆಟಗಾರರು ಗಾಯ, ಅನಾರೋಗ್ಯ ಅಥವಾ ಇನ್ನಾವುದೇ ಕಾರಣದಿಂದಾಗಿ ಹೊರಗುಳಿದಿದ್ದರೆ ಯಾವುದೇ ತಂಡವು ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ ಅನ್ನೋದು ರೂಲ್ಸ್. ಈ ಸೀಸನ್ನಲ್ಲಿ ಹಲವು ತಂಡಗಳು 12 ಪಂದ್ಯಗಳನ್ನು ಆಡಿವೆ. ಬಟ್ ಈ ಸಿಚುಯೇಷನ್ ಬೇರೆ ಇರೋದ್ರಿಂದ ಬಿಸಿಸಿಐ, ನಿಯಮಗಳನ್ನು ಸಡಿಲಗೊಳಿಸಿದೆ. ಪ್ರತಿ ತಂಡಕ್ಕೂ ಹೊಸ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಿದೆ. ಬಟ್ ಪರ್ಮಿಷನ್ ಕೊಟ್ರೂ ಕಂಡೀಷನ್ಸ್ ಅಪ್ಲೈ ಎನ್ನುವಂತೆ ಷರತ್ತನ್ನೂ ವಿಧಿಸಿದೆ. ಬದಲಿ ಆಟಗಾರರನ್ನು ತಾತ್ಕಾಲಿಕವೆಂದು ಪರಿಗಣಿಸ್ಬೇಕು. ಈ ಸೀಸನ್ ಮುಗಿಯುವವರೆಗೆ ಮಾತ್ರ ತಂಡದಲ್ಲಿ ಇರ್ಬೋದು, ಆಡ್ಬೋದು. ಬಟ್ ನೆಕ್ಸ್ಟ್ ಸೀಸನ್ಗೆ ಅವ್ರನ್ನ ತಂಡದಲ್ಲಿ ಉಳಿಸಿಕೊಳ್ಳಂಗಿಲ್ಲ. ಅಂದ್ರೆ ಈ ಸೀಸನ್ಗೆ ಮಾತ್ರವೇ ಒಪ್ಪಂದ ಮಾಡಿಕೊಳ್ಬೇಕು.