ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ – ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಜಾಸ್ತಿ ಸ್ಕ್ರೀನ್ ಸ್ಪೇಸ್

ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸಿನಿಮಾ ‘ಕಲ್ಕಿ 2898 ಎಡಿ’ ಬಾಕ್ಸ್ ಆಫೀಸ್ನಲ್ಲಿ ಭಾರಿ ಹಿಟ್ ಆಗಿತ್ತು. ಆ ಸಿನಿಮಾ ನೋಡಿದ ಪ್ರಭಾಸ್ ಫ್ಯಾನ್ಸ್ ಸ್ವಲ್ಪ ಅಸಮಾಧಾನಗೊಂಡಿದ್ದರು. ಪ್ರಭಾಸ್ ಗೆ ಇನ್ನೂ ಜಾಸ್ತಿ ಸ್ಕ್ರೀನ್ ಸ್ಪೇಸ್ ಬೇಕಿತ್ತು ಅಂತಾ ಸಿನಿಮಾ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ಪ್ರಭಾಸ್ ವಿಚಾರವಾಗಿ ಫ್ಯಾನ್ಸ್‌ಗೆ ನಿರ್ದೇಶಕರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಸಿಹಿ ಉಡುಗೊರೆ ನೀನು.. ಮುದ್ದು ಮಗನ ಮುದ್ದಾದ ಫೋಟೋ ರಿವೀಲ್ ಮಾಡಿದ ಕವಿತಾ ಗೌಡ, ಚಂದನ್
‘ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರೂ ಕೂಡಾ ಹೆಚ್ಚು ಸ್ಕ್ರೀನ್ಸ್ಪೇಸ್ ಸಿಕ್ಕಿಲ್ಲ ಎಂದು ಕೆಲವರು ಟೀಕೆ ಮಾಡಿದ್ದು ಇದೆ. ಈಗ ಸೀಕ್ವೆಲ್ ಶೂಟ್ಗೆ ಸಿದ್ಧತೆ ನಡೆಯುತ್ತಿದೆ. ಈ ಪಾರ್ಟ್ನಲ್ಲಿ ಪ್ರಭಾಸ್ಗೆ ಹೆಚ್ಚಿನ ಸ್ಕ್ರೀನ್ಸ್ಪೇಸ್ ಕೊಡಲಾಗುವುದು ಎಂದು ನಿರ್ದೇಶಕ ನಾಗ್ ಅಶ್ವಿನ್ ಫ್ಯಾನ್ಸ್‌ಗೆ ಭರವಸೆ ಕೊಟ್ಟಿದ್ದಾರೆ. ಈ ವಿಚಾರ ಕೇಳಿ ಪ್ರಭಾಸ್ ಅಭಿಮಾನಿಗಳಂತೂ ಸಂತಸದಲ್ಲಿ ತೇಲಾಡಿದ್ದಾರೆ.
ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಗೂ ಕಲ್ಕಿ ಸಿನಿಮಾ ಸಖತ್ ಬ್ರೇಕ್ ನೀಡಿತ್ತು. ಈಗ ಎರಡನೇ ಪಾರ್ಟ್ನ ಕಥೆ ಪ್ರಭಾಸ್ ಮೇಲೆ ಹೆಚ್ಚು ಸಾಗಲಿದೆಯಂತೆ. ಮೊದಲ ಭಾಗದಲ್ಲಿ ಅಮಿತಾಭ್ ಬಚ್ಚನ್ ಅವರ ಪಾತ್ರ ಹೆಚ್ಚು ಹೈಲೈಟ್ ಆಗಿತ್ತು. ಭೈರವನಾಗಿ ಮಿಂಚಿದ್ದರು. ‘ಎರಡನೇ ಪಾರ್ಟ್ನಲ್ಲಿ ಪ್ರಭಾಸ್ ಪಾತ್ರ ಹೆಚ್ಚು ಹೈಲೈಟ್ ಆಗಲಿದೆ. ಅವರು ತೆರೆಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತಾರೆ. ಮೊದಲ ಭಾಗ ಕೇವಲ ಪಾತ್ರ ಪರಿಚಯ ಮಾಡೋದು ಆಗಿತ್ತು. ಅದು ಈಗ ಪೂರ್ಣಗೊಂಡಿದೆ. ಕರ್ಣ ಹಾಗೂ ಭೈರವನ ಆ್ಯಂಗಲ್ನಲ್ಲಿ ಎರಡನೇ ಪಾರ್ಟ್ ಸಾಗಲಿದೆ.