ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ – ಆದರೆ ಷರತ್ತು ಅನ್ವಯ!

ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ – ಆದರೆ ಷರತ್ತು ಅನ್ವಯ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಸಿಹಿಸುದ್ದಿಯೊಂದನ್ನು ನೀಡಿದೆ. ನವದಂಪತಿಗಳಿಗಾಗಿ ಟಿಟಿಡಿ ಹೊಸ ಯೋಜನೆಯೊಂದನ್ನು ಜಾರಿ ಮಾಡಿದೆ.

ಹೌದು, ಟಿಟಿಡಿ ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ನವದಂಪತಿ ವಿಶೇಷ ಟಿಕೆಟ್‌ ಅನ್ನು ಪಡೆದುಕೊಂಡು ಸುಲಭವಾಗಿ ದೇವರ ದರ್ಶನ ಪಡೆಯಬಹುದಾಗಿದೆ. ಇದರ ಜೊತೆಗೆ ಶ್ರೀವಾರಿ ಕಲ್ಯಾಣೋತ್ಸವದ ಮದುವೆ ಸಮಾರಂಭ ಹಾಗೂ ದೇವರ ವಿಶೇಷ ದರ್ಶನದಲ್ಲೂ ನವದಂಪತಿಗಳಿಗೆ ಪ್ರತಿನಿತ್ಯ 20 ಟಿಕೆಟ್‌ಗಳನ್ನು ಮೀಸಲಿಡಲಾಗುತ್ತಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌! – ವೈಕುಂಠ ದ್ವಾರ ದರ್ಶನ ಟಿಕೆಟ್ ಬಿಡುಗಡೆ!

ಟಿಟಿಡಿ ನವ ದಂಪತಿಗಳ ವಿಶೇಷ ದರ್ಶನಕ್ಕೆ ಕೆಲವೊಂದು ಷರತ್ತುಗಳನ್ನು ಕೂಡ ವಿಧಿಸಿದೆ. ವಿಶೇಷ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರೆ ನವದಂಪತಿಗಳು ಮದುವೆಯಾದ ಒಂದು ವಾರದೊಳಗೆ ದೇವರ ದರ್ಶನ ಪಡೆಯಬೇಕು. ನವದಂಪತಿಗಳು ಮದುವೆಯ ದಿರಿಸಿನಲ್ಲೇ ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಸೂಚಿಸಿದೆ..

ದರ್ಶನಕ್ಕೂ ಒಂದು ವಾರ ಹಿಂದೆ ಮದುವೆಯಾದ ನವದಂಪತಿಗಳು ಆರ್ಜಿತ ಸೇವಾ ಲಕ್ಕಿ ಡಿಪ್‌ ಕೌಂಟರ್‌ನಲ್ಲಿ 1000 ರೂ. ಶುಲ್ಕ ಪಾವತಿಸಿ ಅರ್ಜಿ ಹಾಕಿ ಸಲ್ಲಿಸಬೇಕು. ಟಿಕೆಟ್‌ ಖರೀದಿ ವೇಳೆ ಮದುವೆ ಫೋಟೋ, ಆಧಾರ್‌ ದಾಖಲೆ ನೀಡುವುದು ಕಡ್ಡಾಯವಾಗಿ ನೀಡಬೇಕು. ಇದರ ಜೊತೆಗೆ ದೇವರ ದರ್ಶನಕ್ಕೆ ವಿವಾಹದ ಉಡುಗೆಯಲ್ಲೇ ಹಾಜರಾಗಬೇಕು. ನಿತ್ಯ 20 ಜೋಡಿಗಳಿಗೆ ಮಾತ್ರವೇ ಈ ಅವಕಾಶ ನೀಡಲಾಗುವುದು ಅಂತಾ ಟಿಟಿಡಿ ಹೇಳಿದೆ.

Shwetha M