ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ!

ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಿತ್ಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದೀಗ ಹಳದಿ ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿಯಿದೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮತ್ತೆ ಹೊಸ ಎರಡು ರೈಲುಗಳು ಬರಲಿವೆ.

ಇದನ್ನೂ ಓದಿ: RCBಗೆ ಬಾಸ್ ಬೇಬಿಯೇ ಟಾರ್ಗೆಟ್ – ಪವರ್ ಪ್ಲೇ ವಿಕೆಟ್ ಬಿದ್ರಷ್ಟೇ ಬಚಾವ್

ಆರ್‍‌ವಿ.ರಸ್ತೆ ಮತ್ತು ಬೊಮ್ಮಸಂದ್ರ ವರೆಗಿನ ಹಳದಿ ಮಾರ್ಗದಲ್ಲಿ ನಿತ್ಯ ಅಂದಾಜು ಒಂದು ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿ 8 ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಈ ರೈಲುಗಳು ಪೀಕ್ ಸಮಯದಲ್ಲಿ 9 ನಿಮಿಷಕ್ಕೆ ಒಂದರಂತೆ, ಸಂಚಾರ ದಟ್ಟಣೆ ಕಡಿಮೆ ಇರುವಾಗ ಸುಮಾರು 15 ನಿಮಿಷಗಳಿಗೆ ಒಂದರಂತೆ ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ಮೇ ತಿಂಗಳಿನಿಂದ ಪ್ರತಿ 5-6 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ನಡೆಸಲಿವೆ ಎಂದು BMRCL ಮೂಲಗಳು ತಿಳಿಸಿವೆ.

ಏಪ್ರಿಲ್ 2ರಂದು ಹಳದಿ ಮಾರ್ಗಕ್ಕಾಗಿ ಡ್ರೈವರ್‌ಲೆಸ್ 9ನೇ ರೈಲು ಸೆಟ್ ಪಶ್ಚಿಮ ಬಂಗಾಳದ ಟಿಟಾಗರ್ ಕಂಪಿಯಿಂದ ಹೊರಟಿದೆ. ಇದು ಏಪ್ರಿಲ್ ಮಧ್ಯಭಾಗಕ್ಕೆ ಬೆಂಗಳೂರು ಮೆಟ್ರೋ ಡಿಪೋಗೆ ಬರಲಿದೆ. ಆ ರೈಲನ್ನು ಹಳಿ ಮೇಲೆ ಇಳಿಸಿ ಜೋಡಿಸುತ್ತಿದ್ದಂತೆ ಪ್ರಾಯೋಗಿಕ ಸಂಚಾರ ಮತ್ತು ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಬಳಿಕ ಕೆಲವೇ ದಿನಗಳಲ್ಲಿ ಅಧಿಕೃವಾಗಿ ಕಾರ್ಯಚರಣೆಗೆ ನಿಯೋಜನೆಗೊಳ್ಳಲಿದೆ.

ಇನ್ನೂ ಆರು ಬೋಗಿಗಳ 10ನೇ ಡ್ರೈವರ್‌ಲೆಸ್ ರೈಲು ಸೆಟ್ ಸಹ ಟಿಟಾಗರ್‌ನಿಂದ ಇದೇ ಏಪ್ರಿಲ್‌ನಲ್ಲೇ ಪೂರೈಕೆ ಆಗುವ ಸಾಧ್ಯತೆ ಇದೆ. ಈ ರೈಲು ಹೊತ್ತ ಲಾರಿಗಳು ಇನ್ನೂ ಟಿಟಾಗರ್‌ನಿಂದ ಹೊರಟಿಲ್ಲ. ಶೀಗ್ರವೇ ರವಾನೆ ಆಗಲಿವೆ. ಈ ಎರಡು ರೈಲಗಳ ಪ್ರಯಾಣಿಕ ಕಾರ್ಯಾಚರಣೆಗೆ ಆರಂಭವಾದರೆ ಒಟ್ಟು 10 ರೈಲುಗಳು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಕಾರಿಡಾರ್‌ನಲ್ಲಿ ಸೇವೆ ನೀಡಿದಂತಾಗುತ್ತದೆ. ಆಗ ರೈಲುಗಳ ಆವರ್ತನ ಸಮಯ ಅಂದರೆ ಪ್ರಯಾಣಿಕರಿಗೆ ನಿಲ್ದಾಣದಲ್ಲಿ 5-6 ನಿಮಿಷಕ್ಕೆ ಒಂದರಂತೆ ರೈಲುಗಳು ಲಭ್ಯವಾಗುತ್ತವೆ.

Shwetha M