ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ನ್ಯೂಸ್! – ಇನ್ಮುಂದೆ 8 ನಿಮಿಷಕ್ಕೊಮ್ಮೆ ರೈಲು ಸಂಚಾರ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ವೊಂದಿದೆ. ಇನ್ಮುಂದೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 8 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ.
ಇದನ್ನೂ ಓದಿ: 3 ಕೋಟಿ ಆಸೆಗಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಪಾಪಿ ಮಕ್ಕಳು! – ಸಿನಿಮಾವನ್ನೇ ಮೀರಿಸುತ್ತೆ ಈ ಖತರ್ನಾಕ್ ಪ್ಲ್ಯಾನ್!
ಆರ್.ವಿ ರಸ್ತೆ-ಬೊಮ್ಮಸಂದ್ರ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಹೊಸ ವರ್ಷಕ್ಕೆ ಗುಡ್ನ್ಯೂಸ್ ನೀಡಲು ಮುಂದಾಗಿದೆ. ಇದೀಗ 8ನೇ ರೈಲು ಆಗಮಿಸುವ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಈ ರೈಲು ಸಂಚಾರ ಆರಂಭವಾದ್ರೆ ಹಳದಿ ಮಾರ್ಗದಲ್ಲಿ 8 ನಿಮಿಷಕ್ಕೊಮ್ಮೆ ರೈಲು ಓಡಲಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸದ್ಯ 05 ಚಾಲಕ ರಹಿತ ಮೆಟ್ರೋ ರೈಲುಗಳು ಸಂಚಾರ ಸೇವೆ ನೀಡುತ್ತಿವೆ. ಮೊದಲು ಡ್ರೈವರ್ಲೆಸ್ 06ನೇ ರೈಲು ಈಗಾಗಲೇ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ನಿಂದ (TRSL) ನಗರಕ್ಕೆ ಬಂದಿದ್ದು, ವಿವಿಧ ಪರೀಕ್ಷೆಗಳಿಗೆ ಒಳಪಟ್ಟಿದೆ. ಪರೀಕ್ಷೆಗಳು ಮುಗಿಯುತ್ತಿದ್ದಂತೆ ಇದೇ ಡಿಸೆಂಬರ್ 22ರಂದು ಸೇವೆ ಆರಂಭಿಸಲಿದೆ. 7ನೇ ರೈಲು ಕೂಡ ನಗರದ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಆಗಮಿಸಿದೆ.
ಇದೀಗ 8ನೇ ಚಾಲಕ ರಹಿತ ಮೆಟ್ರೋ ಸೇವೆ ಇನ್ನೂ ಕೊಲ್ಕತ್ತಾದ ಮೆಟ್ರೋ ತಯಾರಿಕೆ ಕಂಪನಿ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (TRSL) ಚಾಲಕ ರಹಿತ ಮೆಟ್ರೋ ರೈಲನ್ನು ಡಿಸೆಂಬರ್ ಅಂತ್ಯದಲ್ಲಿ ರವಾನಿಸುವ ಭರವಸೆ ನೀಡಿದೆ. ಈ ರೈಲಿನ ಪರೀಕ್ಷೆಗಳು ಜನವರಿಯಲ್ಲಿ ಆರಂಭಗೊಂಡು ಅದೇ ತಿಂಗಳು ಪೂರ್ಣಗೊಳ್ಳಲಿದೆ. ಹೀಗಾಗಿ ಇದರ ಸೇವೆಯನ್ನು ಜನವರಿ ಅಂತ್ಯಕ್ಕೆ ನಿರೀಕ್ಷಿಸಬಹುದು. ಎಲ್ಲವು ಅಂದುಕೊಂಡಂತೆ ಆದರೆ ಹಳದಿ ಮೆಟ್ರೋ ಮಾರ್ಗದಲ್ಲಿ ಪೀಕ್ ಹವರ್ ರೈಲುಗಳ ಆವರ್ತನ ಸಮಯ 8-10 ನಿಮಿಷಕ್ಕೆ ಇಳಿಕೆ ಆಗಲಿದೆ. ಸದ್ಯ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ರೋಗಳಿಗೆ ಕಾಯುವ ಸಮಯ 15-17 ನಿಮಿಷ ಇದೆ. ಆರನೇ ರೈಲು ಸೇವಾರಂಭದ ಬಳಿಕ ಈ ಸಮಯ 12ನಿಮಿಷಕ್ಕೆ ಹಾಗೂ ಜನವರಿ ಅಂತ್ಯಕ್ಕೆ ಎಂಟೂ ರೈಲುಗಳು ಸೇವೆ ಆರಂಭವಾದಲ್ಲಿ ಪ್ರತಿ ಮೆಟ್ರೋಗಳು 8 ರಿಂದ 10 ನಿಮಿಷಕ್ಕೆ ಒಂದರಂತೆ ಸಂಚರಿಸಲಿವೆ.

ನೋಡಿರಿ

