ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ 12 ನಿಮಿಷಕ್ಕೊಮ್ಮೆ ರೈಲು ಸಂಚಾರ!

ಸಿಲಿಕಾನ್ ಸಿಟಿ ಜನರಿಗೆ ಸಂಚಾರಕ್ಕೆ ನಮ್ಮ ಮೆಟ್ರೋ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ ಮತ್ತೆ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಈ ಮಾರ್ಗದಲ್ಲಿ ಮತ್ತೊಂದು ರೈಲು ಸಂಚರಿಸಲಿದೆ.
ಇದನ್ನೂ ಓದಿ: ಫೇಸ್‌ಬುಕ್ ಸುಂದರಿಗೆ ಮರುಳಾಗಿ ಮಂಡ್ಯದಿಂದ ಮಡಿಕೇರಿಗೆ ಬಂದ! –ಅಯ್ಯಯ್ಯೋ.. ಯುವಕನ ಸ್ಥಿತಿ ಏನಾಯ್ತು ಗೊತ್ತಾ?
ನಮ್ಮ ಮೆಟ್ರೋ ಹಳದಿ ಮಾರ್ಗ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಆರಂಭವಾಗಿತ್ತು. ಈಗಾಗಲೇ ಹಳದಿ ಮಾರ್ಗದಲ್ಲಿ 5 ರೈಲುಗಳು ಸಂಚರಿಸುತ್ತಿವೆ. ಇದೀಗ ಮತ್ತೊಂದು ರೈಲು ಟ್ರ್ಯಾಕ್‌ಗೆ ಇಳಿಯಲು ಸಜ್ಜಾಗಿದೆ. ಡಿಸೆಂಬರ್ 22 ರಿಂದ ಹಳದಿ ಮಾರ್ಗ ಮೆಟ್ರೋದಲ್ಲಿ ಆರನೇ ರೈಲು ಸಂಚಾರ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಹಳದಿ ಮಾರ್ಗದಲ್ಲಿ ರೈಲುಗಳು ಪ್ರತಿ 12 ನಿಮಿಷಗಳಿಗೊಮ್ಮೆ ಸಂಚಾರ ಮಾಡಲಿವೆ.
ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ಆರನೇ ರೈಲನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿತ್ತು. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಜತೆಗಿನ ಒಪ್ಪಂದದ ಅಡಿಯಲ್ಲಿ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕೋಲ್ಕತ್ತಾ ಬಳಿ ಈ ಬೋಗಿಗಳನ್ನು ತಯಾರಿಸಿದೆ. ಒಪ್ಪಂದದ ಭಾಗವಾಗಿ ಟಿಆರ್‌ಎಸ್‌ಎಲ್ ಒಟ್ಟು 36 ರೈಲುಗಳನ್ನು 1,578 ಕೋಟಿ ರೂ.ಗಳಿಗೆ ಪೂರೈಸುತ್ತಿದೆ. ಆರನೇ ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಟೆಸ್ಟ್ಗಳ ಜೊತೆಗೆ 750 ಕಿಮೀ ಸಂಚಾರವನ್ನು ಪೂರ್ಣಗೊಳಿಸಬೇಕಾಗಿದೆ. ಕ್ರಿಸ್‌ಮಸ್‌ಗೆ ಮುಂಚಿತವಾಗಿ, ಡಿಸೆಂಬರ್ 22 ರಂದು ರೈಲು ಸಂಚಾರ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಕಡಿಮೆ ರೈಲುಗಳ ಸಂಚಾರ ಮತ್ತು ಬೆಳಗ್ಗೆ ತಡವಾಗಿ ಪ್ರಾರಂಭವಾಗುವ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಮೆಟ್ರೋ ಹಳದಿ ಲೈನ್ನಲ್ಲಿ ಪೀಕ್-ಅವರ್ನಲ್ಲಿ 15 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸುತ್ತವೆ. ಇದೀಗ ಪೀಕ್-ಅವರ್ ಸಂಚಾರವನ್ನು ಪ್ರತಿ 12 ನಿಮಿಷಕ್ಕೆ ಒಂದರಂತೆ ಮಾಡಿದರೂ ಬೆಳಗ್ಗೆ ಸಂಚಾರ ಶುರುವಾಗುವ ಸಮಯ ಯಥಾಪ್ರಕಾರ (ಬೆಳ್ಗೆ 6 ಗಂಟೆ) ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನಮ್ಮ ಮೆಟ್ರೋದ ಇತರ ಮಾರ್ಗಗಳಲ್ಲಿ ಬೆಳಗ್ಗೆ 5ಕ್ಕೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತದೆ.

ನೋಡಿರಿ

