IT-BT ಕಂಪನಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ವಾರದಲ್ಲಿ 1 ದಿನ ವರ್ಕ್ ಫ್ರಮ್ ಹೋಮ್ ಜಾರಿ!

IT-BT ಕಂಪನಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ವಾರದಲ್ಲಿ 1 ದಿನ ವರ್ಕ್ ಫ್ರಮ್ ಹೋಮ್ ಜಾರಿ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಬೆಂಗಳೂರು ವಿಶ್ವದಲ್ಲೇ ನಂಬರ್‌ – 2 ಟ್ರಾಫಿಕ್‌ ಸಿಟಿ ಎಂಬ ಕುಖ್ಯಾತಿ ಪಡೆದಿದೆ. ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಡೆಯಲು ಪೊಲೀಸರು ಹೊಸ ಪ್ಲ್ಯಾನ್‌ ಮಾಡಿದ್ದಾರೆ.

ಇದನ್ನೂ ಓದಿ:  ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್!‌

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಯಾಗುವಂತೆ ಕಾಣುತ್ತಿಲ್ಲ. ಗಂಟೆಗಟ್ಟಲೆ ರಸ್ತೆಯಲ್ಲಿ ಸಮಯ ಕಳೆಯುವಂತೆ ಆಗಿದೆ. ಇತ್ತೀಚೆಗೆ ಉತ್ತರಪ್ರದೇಶದ ಸಂಸದರೊಬ್ಬರು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಸಮಯಕ್ಕೆ ಸರಿಯಾಗಿ ಏರ್‌ಪೋರ್ಟ್‌ ತಲುಪಲಾಗದೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಟ್ರಾಫಿಕ್‌ ಪೊಲೀಸರು ಹೊಸ ಪ್ಲ್ಯಾನ್‌ ಮಾಡಿದ್ದಾರೆ. ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಐಟಿ-ಬಿಟಿ ಕಂಪನಿಗಳಿಗೆ ಮನವಿ ಮಾಡಿ ವಾರದಲ್ಲಿ 1 ದಿನ ವರ್ಕ್ ಫ್ರಂ ಹೋಂ ಜಾರಿ ಮಾಡಲು ಮುಂದಾಗಿದೆ. ಹೀಗಾಗಿ ಐಟಿ-ಬಿಟಿ ಕಂಪನಿಗಳ ಜೊತೆ ಸಭೆ ಮಾಡುವುದಕ್ಕೆ ಸಂಚಾರಿ ವಿಭಾಗದ ಜಂಟಿ ಆಯುಕ್ತರು ನಿರ್ಧರಿಸಿದ್ದಾರೆ. ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತರು, ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಹಾಗೂ ಜಿಬಿಎ ಮುಖ್ಯ ಆಯುಕ್ತರು ಸೇರಿ ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ನಿಯಮಗಳನ್ನು ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಔಟರ್ ರಿಂಗ್ ರೋಡ್‌ನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿರುವ ಜಾಗಗಳನ್ನು ಗುರುತು ಮಾಡಲಾಗಿದೆ. ಹೀಗಾಗಿ ಔಟರ್ ರಿಂಗ್ ರೋಡ್ ಸೇರಿ ನಗರದ ಒಳಗೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಐಟಿ-ಬಿಟಿ ಕಂಪನಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ.

ಟ್ರಾಫಿಕ್ ನಿಯಂತ್ರಣಕ್ಕಿರುವ ಆಯ್ಕೆಗಳೇನು?

500ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ವಾಹನಗಳಿಗೆ ಕಡಿವಾಣ

ವೆಹಿಕಲ್ ಓಡಾಟ ಕಡಿಮೆಯಾದರೆ ಟ್ರಾಫಿಕ್ ನಿಯಂತ್ರಣ

ಐಟಿ-ಬಿಟಿ ಕಂಪನಿಗಳಿಗೆ ಮನವಿ ಮಾಡಿ ವಾರದಲ್ಲಿ 1 ದಿನ ವರ್ಕ್ ಫ್ರಂ ಹೋಂ ಜಾರಿ

ಒಂದು ದಿನ ಕಾರು ಫ್ರೀ ಡೇ, ಕಾರ್‌ ಪೂಲಿಂಗ್‌ ಆರಂಭಿಸುವಂತೆ ಮನವಿ

ಬಸ್ ಪೂಲಿಂಗ್ ಆರಂಭ ಮಾಡುವ ಬಗ್ಗೆ ಚಿಂತನೆ

10% ವಾಹನ ತಗ್ಗಿದರೆ 40% ಟ್ರಾಫಿಕ್ ಕಡಿಮೆ ನಿರೀಕ್ಷೆ

Shwetha M