ಗೃಹಿಣಿಯರಿಗೆ ಗುಡ್ ನ್ಯೂಸ್ – ಟೊಮ್ಯಾಟೊ ದರ ಭಾರಿ ಇಳಿಕೆ

ಗೃಹಿಣಿಯರಿಗೆ ಗುಡ್ ನ್ಯೂಸ್ – ಟೊಮ್ಯಾಟೊ ದರ ಭಾರಿ ಇಳಿಕೆ

ಇಷ್ಟು ದಿನ ಲೆಕ್ಕಾಚಾರದಲ್ಲಿ ಅಡುಗೆ ಮಾಡುತ್ತಿದ್ದ ಗೃಹಿಣಿಯರಿಗೆ ಗುಡ್ ನ್ಯೂಸ್​ ಸಿಕ್ಕಿದೆ. ಅಡುಗೆ ಮನೆಯ ಕೆಂಪು ಸುದಂರಿ ಟೊಮ್ಯಾಟೊ ದರ ಭಾರಿ ಇಳಿಕೆಯಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಟೊಮ್ಯಾಟೊ ಬೆಲೆ 200ರ ಗಡಿ ದಾಟಿತ್ತು. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಟೊಮ್ಯಾಟೊ ಬೆಲೆ ಹಂತ ಹಂತವಾಗಿ ಇಳಿಕೆಯತ್ತ ಸಾಗುತ್ತಿದೆ. ಸೋಮವಾರ ಲೂಡ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೊಂಚ ಇಳಿಕೆಯಾಗಿದೆ. ಒಂದು ಕೆಜಿ ಟೊಮ್ಯಾಟೊ ಬೆಲೆಯಲ್ಲಿ 10 ರಿಂದ 20 ರೂ.ಗಳವರೆಗೆ ಇಳಿಕೆ ಕಂಡಿದೆ. ಇದೀಗ ಮಾರುಕಟ್ಟೆಯಲ್ಲಿ 90 ರಿಂದ 100 ರೂಗೆ ಒಂದು ಕೆಜಿ ಟೊಮ್ಯಾಟೊ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – 24 ಮಂದಿ ಸಾವು, ಹಲವರಿಗೆ ಗಾಯ

ಇನ್ನು ಸರಾಸರಿ 15 ಕೆಜಿಯ ಟೊಮ್ಯಾಟೊ ಬಾಕ್ಸ್ ಬೆಲೆ ಕೇವಲ 1,500 ರೂಪಾಯಿಗೆ ಅಂದ್ರೆ ಅತಿ ಹೆಚ್ಚು ಗುಣಮಟ್ಟ ಇರುವ ಟೊಮ್ಯಾಟೊ  ಮಾರಾಟವಾಗಿದೆ. ಆ ಮೂಲಕ ಟೊಮ್ಯಾಟೊ ಬೆಳೆ ನಿನ್ನೆ-ಮೊನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 900 ರಿಂದ 1000 ರೂಪಾಯಿ ಕಡಿಮೆಯಾಗಿದೆ. ಸದ್ಯ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಟೊಮೆಟೋ ಬರುತ್ತಿದ್ದು, ಬೆಲೆ ಇಳಿಮುಖವಾಗುತ್ತಿದೆ.

ಬೆಲೆ ಇಳಿಕೆಗೆ ಕಾರಣ ಟೊಮ್ಯಾಟೊ ಖರೀದಿಗೆ ಹೊರ ರಾಜ್ಯದ ವ್ಯಾಪಾರಿಗಳು ಮುಂದಾಗುತ್ತಿಲ್ಲ. ಅಲ್ಲದೆ ಏಷ್ಯಾದಲ್ಲೆ ಅತಿ ದೊಡ್ಡ ಟೊಮ್ಯಾಟೊ ಮಾರುಕಟ್ಟೆ ನಾಸಿಕ್‍ನಲ್ಲೂ ಟೊಮ್ಯಾಟೊ ಹೆಚ್ಚಾಗಿ ಆವಕ ಬಂದಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ವ್ಯಾಪಾರಿಗಳು ಟೊಮ್ಯಾಟೊ ಖರೀದಿ ಮಾಡುತ್ತಿಲ್ಲ. ಪರಿಣಾಮ ಟೊಮ್ಯಾಟೊ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಇವೆಲ್ಲದರ ಮಧ್ಯೆ ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ.

suddiyaana