ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಗುಡ್‌ನ್ಯೂಸ್ – ಮಳೆಯನ್ನ ಹೊತ್ತು ತರುತ್ತಿವೆ ಭಾರೀ ಮೋಡಗಳು

ಭಾರತಕ್ಕೆ ಮಾನ್ಸೂನ್ ಮಳೆ ಗುಡ್ ನ್ಯೂಸ್ ಕೊಡಲಿದೆ. ತೀವ್ರ ಬರದ ಛಾಯೆ ಆವರಿಸಲಿದೆ ಎಂದು ಆತಂಕದಲ್ಲಿರುವಾಗಲೇ ಗುಡ್ ನ್ಯೂಸ್ ಸಿಕ್ಕಿದೆ. INSAT-3DS ಉಪಗ್ರಹ ಚಿತ್ರಗಳಲ್ಲಿ ಶೇಕಡಾ 95ರಷ್ಟು ಭೂ ಪ್ರದೇಶಗಳಲ್ಲಿ ಮೋಡಗಳು ಗೋಚರವಾಗಿವೆ.
ಇದನ್ನೂ ಓದಿ:ಸಸ್ಯಕಾಶಿಯಲ್ಲಿ ಗಂಗರ ಕಾಲದ ವೈಭವ – ಲಾಲ್‌ಭಾಗ್ ಫ್ಲವರ್ ಶೋನಲ್ಲಿ ಪಶ್ವಿಮ ಗಂಗರ ಇತಿಹಾಸ ಅನಾವರಣ
ಮಳೆಗಾಲ ಆರಂಭವಾಗಿ ತಿಂಗಳುಗಳೇ ಕಳೆದರೂ ದೇಶದ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯೇ ಇಲ್ಲ. ಅದರಲ್ಲೂ ಈ ಬಾರಿ ಮಡಿಕೇರಿಯಲ್ಲೂ ಕೂಡಾ ಮಳೆ ಕಡಿಮೆಯೇ. ಕನ್ನಡನಾಡಿನ ಜೀವನದಿ ಕಾವೇರಿ ಕೂಡಾ ಮೈದುಂಬಿ ಹರಿಯುತ್ತಿಲ್ಲ. ಮಳೆ ಬಂದರೆ ತಾನೆ ಕಾವೇರಿ ನದಿಗೂ ಜೀವಕಳೆ ತುಂಬುವುದು. ಈ ಬಾರಿ ಬರವೇ ಗತಿ ಎಂದು ರಾಜ್ಯದ ಜನತೆ ಆತಂಕದಲ್ಲಿಯೇ ಇದ್ದರು. ಇದೀಗ ಮಳೆಯ ವಿಚಾರದಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ.
ಎಲ್ ನಿನೋ ಪ್ರಭಾವದಿಂದ ಈ ಬಾರಿ ಕಡಿಮೆ ಮಳೆಯಾಗಲಿದೆ. ಆದರೆ ಈಗ ನಿಜವಾದ ಮಾನ್ಸೂನ್ ಮಳೆಯ ಲಕ್ಷಣಗಳು ಕಾಣಿಸುತ್ತಿದ್ದು, ಬರೋಬ್ಬರಿ 10 ಸಾವಿರ ಕಿಲೋ ಮೀಟರ್ ಉದ್ದದ ಮಾರುತಗಳು ನಿರ್ಮಾಣ ಆಗಿರುವುದು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದರ ನಡುವೆಯೇ ಭಾರತ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಅನ್ವಯ, ಇಸ್ರೋದ ಸುಧಾರಿತ INSAT-3DS ಹವಾಮಾನ ಉಪಗ್ರಹ ಸೆರೆಹಿಡಿದಿರುವ ಫೋಟೋ ಭಾರತಕ್ಕೆ ಬಿಗ್ ರಿಲೀಫ್ ನೀಡಿದ್ದು, ಭಾರತದ ಶೇಕಡಾ 95ರಷ್ಟು ಭೂಭಾಗವನ್ನು ಮಾನ್ಸೂನ್ ಮಾರುತಗಳು ಆವರಿಸಿರೋದು ಕಾಣಬಹುದಾಗಿದೆ. ಈ ಫೋಟೋವನ್ನು ಉಪಗ್ರಹ ಸೆರೆ ಹಿಡಿದಿದೆ. ಇದರೊಂದಿಗೆ ಭಾರತೀಯ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಮುಂದಿನ 3-4 ದಿನಕಾಲ ಭಾರತದ ವಾಯುವ್ಯ, ಮಧ್ಯ ಪೂರ್ವ, ಈಶಾನ್ಯ ಹಾಗೂ ಪರ್ಯಾಯ ದ್ವೀಪ ಭಾಗದಲ್ಲಿ ಮಾನ್ಸೂನ್ ಮಳೆಯು ಹೆಚ್ಚಾಗಲಿದೆ ಎಂದು ತಿಳಿಸಿದೆ. ಈ ಮಾರುತಗಳು ಒಡಿಶಾ, ಛತ್ತೀಸ್‌ಗಢ ಹಾಗೂ ಮಧ್ಯ ಪ್ರದೇಶದಾದ್ಯಂತ ಭಾರೀ ಮಳೆಯನ್ನು ಸುರಿಸಲಿದ್ದು, ಆ ಬಳಿಕ ಗುಜರಾತ್ ಮತ್ತು ಅರಬ್ಬೀ ಸಮುದ್ರದ ಕಡೆಗೆ ಮಳೆ ವಿಸ್ತರಣೆಯಾಗಲಿದೆ ಎಂದು ಹೇಳಿದೆ. ಮಾನ್ಸೂನ್ ಮಾರುತಗಳ ಬೃಹತ್ ಮೋಡಗಳ ಸಾಲು ಭಾರತದಲ್ಲಿ ಭಾರೀ ಮಳೆಯನ್ನು ಸುರಿಸುವ ನಿರೀಕ್ಷೆ ಇದೆ. ಇದಲ್ಲದೆ, ಸುಮಾರು 10 ಸಾವಿರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಈ ಬೃಹತ್ ಮೋಡಗಳು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆಯನ್ನು ತರುತ್ತವೆ ಎಂದು ಅಂದಾಜಿಸಲಾಗಿದೆ.

ನೋಡಿರಿ

