ಕ್ರಿಕೆಟ್‌ ಪ್ರೇಮಿಗಳಿಗೆ ಗುಡ್‌ ನ್ಯೂಸ್!‌ – ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ!

ಕ್ರಿಕೆಟ್‌ ಪ್ರೇಮಿಗಳಿಗೆ ಗುಡ್‌ ನ್ಯೂಸ್!‌ – ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ!

ಬೆಂಗಳೂರು: ಕ್ರಿಕೆಟ್‌ ಪ್ರೇಮಿಗಳಿಗೆ ನಮ್ಮ ಮೆಟ್ರೋ ಬಂಪರ್‌ ಕೊಡುಗೆಯೊಂದನ್ನು ಘೋಷಿಸಿದೆ. ಚಿನ್ನಸ್ವಾಮಿ  ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿ ಪಂದ್ಯಗಳಿಗಾಗಿ ‘ನಮ್ಮ ಮೆಟ್ರೋ’ದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿ  ಕ್ರೀಡಾಂಗಣದಲ್ಲಿ ಇದೇ ಅಕ್ಟೋಬರ್ 20, 26 ಹಾಗೂ ನವೆಂಬರ್ 4, 9, 12 ರಂದು ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ದಿನದಂದು ರಿಟರ್ನ್ ಜರ್ನಿ ಟಿಕೆಟ್‌ಗಳನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ರಿಂದ ಪಡೆಯಬಹುದು. ಈ ರಿಟರ್ನ್ ಟಿಕೆಟ್ ಬೆಲೆ 50 ರೂ. ಇರಲಿದೆ. ಸಾಮಾನ್ಯ ದರದ 5% ರಿಯಾಯಿತಿ ಕೂಡ ಇರಲಿದೆ. ಈ ಟಿಕೆಟನ್ನು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆ ನಂತರ ಒಂದು ಪ್ರಯಾಣ ಮಾಡಬಹುದಾಗಿದೆ.

ಇದನ್ನೂ ಓದಿ: ದೀಪಾವಳಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ – ಸರ್ಕಾರಿ ನೌಕರರಿಗೆ ಸಿಗಲಿದೆ 7,000 ರೂಪಾಯಿ ಬೋನಸ್‌!

ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಿದರೆ, ಪಂದ್ಯಗಳು ನಡೆಯುವ ದಿನಗಳಂದು ಪ್ರಯಾಣಿಸಬಹುದು. ಕ್ಯೂಆರ್ ಕೋಡ್ ಟಿಕೆಟನ್ನು ವಾಟ್ಸಾಪ್, ನಮ್ಮ ಮೆಟ್ರೋ ಆ್ಯಪ್ ಅಥವಾ ಪೇಟಿಎಂ ಮೂಲಕ ಮುಂಗಡವಾಗಿ ಪಡೆಯಬಹುದು ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

Shwetha M