ಸಿನಿ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್!‌ – ಇಂದಿನಿಂದ ಏಕರೂಪ ಟಿಕೆಟ್ ದರ ಜಾರಿ!

ಸಿನಿ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್!‌ – ಇಂದಿನಿಂದ ಏಕರೂಪ ಟಿಕೆಟ್ ದರ ಜಾರಿ!

ಸಿನಿ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಇಂದಿನಿಂದ ಏಕರೂಪದ ಟಿಕೆಟ್‌ ದರ ಜಾರಿಯಾಗಲಿದೆ. ಇನ್ನುಮುಂದೆ ಬಿಗ್‌ ಬಜೆಟ್‌ ಸಿನಿಮಾಗಳನ್ನ ಥಿಯೇಟರ್‌ಗಳಲ್ಲಿ 200 ರೂಪಾಯಿ ನೋಡಬಹುದಾಗಿದೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಮಗಳನ್ನ ಕೊಂದ ಅತ್ತೆ, ಮಾವ – ಶವ ಕಂಡು ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ!

ರಾಜ್ಯದಲ್ಲಿ ಬಿಗ್‌ ಬಜೆಟ್‌ ಸಿನಿಮಾಗಳಿಗೆ ಹೆಚ್ಚಿನ ದರ ನಿಗದಿ ಮಾಡಲಾಗ್ತಿತ್ತು. ಪರ ಭಾಷೆ ಸಿನಿಮಾಗಳಿಗೂ 500 ರೂಪಾಯಿಯಿಂದ 1000 ರೂಪಾಯಿ ವರೆಗೆ ದರ ವಿಧಿಸಲಾಗುತ್ತಿತ್ತು. ಇದರಿಂದ ಜನಸಾಮಾನ್ಯರು ಸಿನಿಮಾ ನೋಡೋದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಕಾರಣದಿಂದಲೇ ಜನರು ಥಿಯೇಟರ್​​ನತ್ತ ಮುಖ ಮಾಡುವುದಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದವು. ಇದಕ್ಕೆ ರಾಜ್ಯ ಸರ್ಕಾರ  ಕಡಿವಾಣ ಹಾಕಿದ್ದು, ಇಂದಿನಿಂದ ಏಕರೂಪ ಟಿಕೆಟ್ ದರ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.  ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್​ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಇದು ಪ್ರೇಕ್ಷಕ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇನ್ನು ಕೆಲವು ಷರತ್ತುಗಳನ್ನು ಕೂಡ ಸರ್ಕಾರ ಹೇರಿದೆ. ಅನೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತವೆ. ಇವುಗಳಿಗೆ 200 ರೂಪಾಯಿ ಟಿಕೆಟ್ ದರದ ಮಿತಿ ಇಲ್ಲ. ಆ ಆಸನಗಳಿಗೆ ಮಲ್ಟಿಪ್ಲೆಕ್ಸ್​ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು. ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ರಿಕ್ಲೈನ್ ಸೀಟ್​ಗಳು ಇರುತ್ತವೆ. ಅವುಗಳಿಗೂ 200 ರೂಪಾಯಿ ಟಿಕೆಟ್ ದರ ಅನ್ವಯ ಆಗುತ್ತದೆ ಎನ್ನಲಾಗಿದೆ. ಸದ್ಯ ಟಿಕೆಟ್ ಮಂದಿರಗಳಿಗೆ ಆದೇಶ ಪ್ರತಿ ತಲುಪಿಲ್ಲ. ಇದು ತಲುಪಿದ ಬಳಿಕ ನಿಯಮ ಜಾರಿಗೆ ಬರಲಿದೆ.

Shwetha M