ಕೇಂದ್ರ ಸರ್ಕಾರಿ ನೌಕರರು  , ಪಿಂಚಣಿದಾರರಿಗೆ ಗುಡ್‌ನ್ಯೂಸ್ – ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರು  , ಪಿಂಚಣಿದಾರರಿಗೆ ಗುಡ್‌ನ್ಯೂಸ್ – ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರು  , ಪಿಂಚಣಿದಾರರ  ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಳ ಮಾಡಿದೆ. ವೇತನ ಹೆಚ್ಚಳಕ್ಕೆ ವ್ಯಾಪಕ ಬೇಡಿಕೆ ಕೇಳಿ ಬರುತ್ತಿರುವ ನಡುವೆ ಕೇಂದ್ರ ಸಚಿವ ಸಂಪುಟವು  ಶನಿವಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರ ನೌಕರರ ಸಂಬಳದಲ್ಲಿ ಕೊಂಚ ಹೆಚ್ಚಳವದಂತಾಗಿದೆ. 8ನೇ ವೇತನ ಆಯೋಗದ ಅಡಿಯಲ್ಲಿ ವ್ಯಾಪಕ ಬದಲಾವಣೆಗಳಿಗೆ ನೌಕರರ ಸಂಘಗಳು ಒತ್ತಾಯ ಹೇರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಮಂಡಳಿ-ಜಂಟಿ ಸಮಾಲೋಚನಾ ಯಂತ್ರೋಪಕರಣಗಳು (ಎನ್‌ಸಿ-ಜೆಸಿಎಂ) 3.83ರ ಹೆಚ್ಚಿನ ಫಿಟ್‌ಮೆಂಟ್ ಅಂಶಕ್ಕಾಗಿ ವಾದಿಸಿ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯು ಅಂಗೀಕರವಾದರೆ ಕನಿಷ್ಠ ಮೂಲ ವೇತನವನ್ನು 18,000 ರೂ.ಗಳಿಂದ ಸುಮಾರು 69,000 ರೂ.ಗಳಿಗೆ ಹೆಚ್ಚಾಗಲಿದೆ. ಇದು ವೇತನ ರಚನೆಯಲ್ಲಿ ಬಹುದೊಡ್ಡ ಪ್ರಮಾಣದ ಪರಿಷ್ಕರಣೆಯಾಗಲಿದೆ.

ಹಣದುಬ್ಬರದ ಪರಿಣಾಮವನ್ನು ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒದಗಿಸಲಾಗುವ ಜೀವನ ವೆಚ್ಚ ಹೊಂದಾಣಿಕೆಯೇ ತುಟ್ಟಿ ಭತ್ಯೆ. ಇದರಲ್ಲಿ ಮಾಡಿರುವ ಶೇ. 2ರಷ್ಟು ಹೆಚ್ಚಳದಿಂದ ನೌಕರರು ಮತ್ತು ಪಿಂಚಣಿದಾರರಿಗೆ ಮಾಸಿಕ ಪಾವತಿಗಳು ಹೆಚ್ಚಾಗಲಿದೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯನ್ನ ನೋಡಿ ಕಲಿಯಿರಿ – ರಾಹುಲ್‌ ಗಾಂಧಿ ವಿರುದ್ಧ ಅಮಿಶ್ ಶಾ ವಾಗ್ದಾಳಿ

ಪ್ರಸ್ತಾವಿತ 8 ನೇ ವೇತನ ಆಯೋಗವು ವೇತನ ಪರಿಷ್ಕರಣೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದು, ಈ ಸಂದರ್ಭದಲ್ಲಿ ತುಟ್ಟಿ ಭತ್ಯೆಯನ್ನು ಕೂಡ ಪರಿಷ್ಕರಣೆ ಮಾಡುವ ನಿರೀಕ್ಷೆಯಿದೆ. ಇದು ಹೆಚ್ಚುತ್ತಿರುವ ವೆಚ್ಚಗಳಿಗೆ ಅನುಗುಣವಾಗಿ ಗಳಿಕೆಯನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ೨೦೨೬ರ ಹೊಸ ವರ್ಷದ ಮೊದಲ ದಿನವೇ 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿತ್ತು. ವೇತನ ಆಯೋಗದ ಜಾರಿಯ ಬಳಿಕ ಕೇಂದ್ರ ಸರ್ಕಾರಿ ನೌಕಕರ ಸಂಬಳ, ಪಿಂಚಣಿ ಮತ್ತು ಭತ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಣ ದುಬ್ಬರವನ್ನು ಗಣನೆಗೆ ತೆಗೆದುಕೊಂಡು ಈಗ 8ನೇ ವೇತನ ಆಯೋಗವು ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ.

Kishor KV