ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ – ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ!

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ – ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ!

ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್‌ (IPL 2023) ಮಾರ್ಚ್ 31 ರಿಂದ ಆರಂಭವಾಗಿದೆ. ಇದೀಗ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಸುದ್ದಿ ಇದೆ. ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯಾವಳಿ ನಡೆಯುತ್ತಿದ್ದು, ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 1.30ವರೆಗೂ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ IPL ಕ್ರೇಜ್! – ಟಿಕೆಟ್ ಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದ RCB ಫ್ಯಾನ್ಸ್

ಏಪ್ರಿಲ್‌ 2, 10, 17 ಹಾಗೂ 26 ರಂದು ಮತ್ತು ಮೇ 21ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ರಾತ್ರಿ ವೇಳೆ ನಡೆಯುತ್ತವೆ. ಈ ದಿನದಂದು ನಮ್ಮ ಮೆಟ್ರೋ ರೈಲುಗಳ ಸೇವೆಯನ್ನು ರಾತ್ರಿ 1.30ವರೆಗೂ ವಿಸ್ತರಣೆ ಮಾಡಲಾಗಿದೆ. ಆ ದಿನ ರೈಲುಗಳು ಕೆಂಪೇಗೌಡ ನಿಲ್ದಾಣದಿಂದ ( ಮೆಜೆಸ್ಟಿಕ್‌) ನಾಲ್ಕು ದಿಕ್ಕುಗಳಲ್ಲಿ ರಾತ್ರಿ 1.30ಕ್ಕೆ ಹೊರಡಲಿವೆ. ಇದರಿಂದ ನಗರದ ವಿವಿಧೆಡೆಯಿಂದ ಬರುವ ಕ್ರಿಕೆಟ್‌ ಪ್ರಿಯರಿಗೆ ಪಂದ್ಯ ಮುಗಿದ ನಂತರ ಮನೆಗೆ ತೆರಳಲು ಅನುಕೂಲವಾಗಲಿದೆ. ಈ ಉದ್ದೇಶದಿಂದ ಹೆಚ್ಚುವರಿ ಸಮಯ ನಿಗದಿಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಯುವ ದಿನದಂದು  ಯಾವುದೇ ಮೆಟ್ರೋ ರೈಲು ನಿಲ್ದಾಣದಿಂದ ಕಬ್ಬನ್‌ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಟೋಕನ್, ಕ್ಯೂಆರ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ಉಪಯೋಗಿಸಿ ಪ್ರಯಾಣಿಸಬಹುದು. ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಮಧ್ಯಾಹ್ನ 3.00 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನೀಡಲಾಗುತ್ತದೆ ಅಂತಾ ಮೆಟ್ರೋ ನಿಗಮ ತಿಳಿಸಿದೆ.

ಇನ್ನು 50 ರೂ. ದರದ ಪೇಪರ್ ಟಿಕೆಟ್ ಗಳನ್ನು ನೀಡಲಾಗುತ್ತಿದ್ದು, ಆ ಟಿಕೆಟ್‌ ಬಳಸಿ ಕಬ್ಬನ್ ಪಾರ್ಕ್‌ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ (ಬೈಯಪ್ಪನಹಳ್ಳಿ- ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಸಂಸ್ಕೃ ಮಾರ್ಗದ) ಮೆಟ್ರೋ ನಿಲ್ದಾಣಕ್ಕೆ ತಲುಪಬಹುದು. ರಾತ್ರಿ 8 ಗಂಟೆ ನಂತರ ಈ ಪೇಪರ್ ಟಿಕೆಟ್ ಗಳನ್ನು ಮಾನ್ಯ ಮಾಡಲಾಗುವುದು. ಈ ಪೇಪರ್ ಟಿಕೆಟ್ ಜೊತೆಗೆ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಗಳನ್ನು ಬಳಸಿ ಸಾಮಾನ್ಯ ದರದಲ್ಲಿ ಪುಯಾಣಿಸಬಹುದು.

ಇನ್ನು ಒಂದು ವಾರಗಳ ಹಿಂದೆ ಆರಂಭವಾದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೈಲು ಸೇವೆಗಳನ್ನು ವಿಸ್ತರಿಸಲಾಗಿರುವುದಿಲ್ಲ ಎಂದು ಮೆಟ್ರೋ ರೈಲು ನಿಗಮ ತಿಳಿಸಿದೆ.

suddiyaana