ಅಗ್ನಿಸಾಕ್ಷಿ ಧಾರಾವಾಹಿ ಪ್ರಿಯರಿಗೆ ಗುಡ್‌ನ್ಯೂಸ್ – ಹೊಸ ಕಥೆ, ಹೊಸ ರೂಪದಲ್ಲಿ ಬರುತ್ತಿದೆ ಅಗ್ನಿಸಾಕ್ಷಿ ಸೀರಿಯಲ್

ಅಗ್ನಿಸಾಕ್ಷಿ ಧಾರಾವಾಹಿ ಪ್ರಿಯರಿಗೆ ಗುಡ್‌ನ್ಯೂಸ್ – ಹೊಸ ಕಥೆ, ಹೊಸ ರೂಪದಲ್ಲಿ ಬರುತ್ತಿದೆ ಅಗ್ನಿಸಾಕ್ಷಿ ಸೀರಿಯಲ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಅಗ್ನಿಸಾಕ್ಷಿ ಸೀರಿಯಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಅಗ್ನಿಸಾಕ್ಷಿಯಲ್ಲಿ ನಟ ವಿಜಯ್ ಸೂರ್ಯ ಮತ್ತು ನಟಿ ವೈಷ್ಣವಿ ವೀಕ್ಷಕರ ಅಚ್ಚುಮೆಚ್ಚಿನ ಜೋಡಿಯಾಗಿದ್ದರು. ಇದೀಗ ಅಗ್ನಿಸಾಕ್ಷಿ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ.

ಇದನ್ನೂ ಓದಿ:ಬಹುನಿರೀಕ್ಷಿತ ರಾಮಾಯಣದ ಟೀಸರ್  ರಿಲೀಸ್ – ರಾಮನ ಅವತಾರಕ್ಕೆ ಫ್ಯಾನ್ಸ್ ಫಿದಾ

ಅಗ್ನಿಸಾಕ್ಷಿ ಧಾರಾವಾಹಿ ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಿದ್ದ ಜನಪ್ರಿಯ ಧಾರಾವಾಹಿಯಾಗಿತ್ತು. ಕಲರ್ಸ್ ಕನ್ನಡದಲ್ಲಿ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಎಲ್ಲೆಡೆ ಮನೆಮಾತಾಗಿತ್ತು. ಸಿದ್ದಾರ್ಥ್ ಮತ್ತು ಸನ್ನಿಧಿ ಪಾತ್ರ ವೀಕ್ಷಕರಿಗೆ ಇಷ್ಟವಾಗಿದ್ದರು. ಅಷ್ಟೇ ಅಲ್ಲದೆ ಈ ಧಾರಾವಾಹಿ ಬರೋಬ್ಬರಿ 1,588 ಎಪಿಸೋಡ್ಸ್ ಗಳನ್ನು ಪೂರ್ಣಗೊಳಿಸಿತ್ತು. ಬರೋಬ್ಬರಿ 6 ವರ್ಷ ಪ್ರಸಾರ ಕಂಡಿದ್ದ ಅಗ್ನಿಸಾಕ್ಷಿ ಧಾರಾವಾಹಿ  ಮತ್ತೆ ವೀಕ್ಷಕರ ಮುಂದೆ ಬರಲಿದೆ.

ಈಗ ಅಗ್ನಿಸಾಕ್ಷಿ ಧಾರಾವಾಹಿ ಟೈಟಲ್‌ ಇಟ್ಟುಕೊಂಡು, ಹೊಸ ಕಥೆ ಬರುತ್ತಿದೆ. ಕಣ್ಮುಂದೆ ಬಂದ್ರೆ ಸಹಿಸೋಕಾಗಲ್ಲ. ಕಾಣದೇ ಹೋದ್ರೆ ಬದುಕೋಕೇ ಆಗಲ್ಲ! ಎಂಬ ಕ್ಯಾಪ್ಶನ್‌ ಅಡಿಯಲ್ಲಿ ಪ್ರೋಮೋ ಕೂಡ ರಿಲೀಸ್‌ ಆಗಿದೆ. ಈ ಹಿಂದೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ನಟಿಸಿದ ಶಮಂತ್ ಬ್ರೋ ಗೌಡ ನಾಯಕನಾಗಿ ನಟಿಸಲಿದ್ದಾರೆ. ನಾಯಕಿ ಪಾತ್ರದಲ್ಲಿ ವರ್ಷಿಣಿ ನಟಿಸುತ್ತಿದ್ದಾರೆ.

 

Sulekha