ಪಾನಿಪುರಿ ಪ್ರೀಯರೇ ಹುಷಾರ್‌! – ಪಾನಿಯನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಇಲಿ!

ಪಾನಿಪುರಿ ಪ್ರೀಯರೇ ಹುಷಾರ್‌! – ಪಾನಿಯನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಇಲಿ!

ಪಾನಿಪುರಿ ಅನೇಕರ ನೆಚ್ಚಿಮೆಚ್ಚಿನ ತಿಂಡಿ. ಹೆಣ್ಣುಮಕ್ಕಳಂತೂ ಇಷ್ಟಪಟ್ಟು ತಿಂತಾರೆ.  ಆದರೆ ಪಂಜಾಬ್‌ನ ಅಮೃತಸರದಲ್ಲಿ ಆಹಾರ ಪ್ರಿಯರಿಗೆ ಶಾಕ್‌ ಎದುರಾಗಿದೆ. ಪಾನಿಪುರಿ ತಿನ್ನಲು ಹೋದವರಿಗೆ ಇಲಿರಾಯನ ದರ್ಶನವಾಗಿದೆ. ಪಾನಿಪುರಿ ಮಾರಾಟ ಮಾಡುವ ಮಸಾಲೆ ನೀರು ತುಂಬಿದ್ದ ಪಾತ್ರೆಯಲ್ಲಿ ಜೀವಂತ ಇಲಿವೊಂದು ಕಂಡು ಬಂದಿದ್ದು ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಹಿಳೆ ಸರ ಕಿತ್ತು ಎಸ್ಕೇಪ್‌ ಆಗುತ್ತಿದ್ದ ಖದೀಮ! – 1 ಕಿಮೀ ಚೇಸ್ ಮಾಡಿ ಹಿಡಿದ ಪೊಲೀಸ್‌ ಕಾನ್ಸ್‌ಟೇಬಲ್!

ಪಾನಿಪುರಿಯನ್ನು ಹೆಚ್ಚಿನವರು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಪಂಜಾಬ್‌ನಲ್ಲಿ ಪಾನಿಪುರಿ ಸವಿಯಲು ಹೋದ ವ್ಲಾಗರ್ ಮತ್ತು ಸ್ನೇಹಿತರಿಬ್ಬರಿಗೆ ಶಾಕ್ ಕಾದಿತ್ತು. ಪಾನಿ ಪುರಿ ಮಿಶ್ರಣದ ಪಾತ್ರೆಯೊಳಗೆ ಜೀವಂತ ಇಲಿ ಕಾಣಿಸಿಕೊಂಡಿದ್ದು, ಹತ್ತಿರ ಹೋಗಿ ನೋಡಿದಾಗ ಮಸಾಲೆಯಲ್ಲಿ ಈಜುತ್ತಿತ್ತು. ವೈರಲ್ ವಿಡಿಯೋದಲ್ಲಿ ವ್ಯಾಪಾರಿಯು ಇಲಿಯನ್ನು ಪಾತ್ರೆಯಿಂದ ಹೊರತೆಗೆಯಲು ಪ್ರಯತ್ನಿಸುವುದನ್ನು ಕಾಣಬಹುದು.

ವಿಡಿಯೊದ ಪ್ರಕಾರ, ವ್ಲಾಗರ್ ಮತ್ತು ಆತನ ಸ್ನೇಹಿತ ಪಾನಿ ಪುರಿಯನ್ನು ಆನಂದಿಸುತ್ತಿದ್ದಾಗ ಮಸಾಲೆಯುಕ್ತ ನೀರು ಮತ್ತು ಮಸಾಲಾ ಮಿಶ್ರಣವನ್ನು ಹೊಂದಿರುವ ದೊಡ್ಡ ಪಾತ್ರೆಯೊಳಗೆ ಇಲಿಯ ಚಲನೆಯನ್ನು ಗಮನಿಸಿದ್ದಾರೆ. ಮಾರಾಟಗಾರನು ಮಿಶ್ರಣದಿಂದ ಇಲಿಯನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿರುವುದನ್ನು ಕ್ಲಿಪ್‌ನಲ್ಲಿ ಸೆರೆಯಗಿದೆ. ಕೆಲವೇ ಸೆಕೆಂಡುಗಳಲ್ಲಿ, ಇಲಿ ಪಾತ್ರೆಯಿಂದ ಜಿಗಿದು ಹತ್ತಿರದ ಚರಂಡಿಗೆ ಓಡಿದೆ.

ಸದ್ಯ ಈ ವೀಡಿಯೊವನ್ನು ವ್ಲಾಗರ್ ಶೇರ್ ಮಾಡಿಕೊಂಡಿದ್ದು “ಪಾನಿ ಪುರಿಯಲ್ಲಿ ಇಲಿ” ಎಂದು ಶಿರ್ಷಿಕೆ ನೀಡಿದ್ದಾರೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಬಳಕೆದಾರರು ರಸ್ತೆಬದಿಯ ಅಂಗಡಿಗಳಲ್ಲಿ ಇಂತಹ ಆಹಾರ ಕ್ರಮದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಆಹಾರ ಸುರಕ್ಷತಾ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ.

Shwetha M

Leave a Reply

Your email address will not be published. Required fields are marked *