ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ಕೆಸಿಸಿ ಚಾಂಪಿಯನ್ – ಶಿವರಾಜ್ ಕುಮಾರ್ ಟೀಮ್ ರನ್ನರ್‌ ಅಪ್

ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ಕೆಸಿಸಿ ಚಾಂಪಿಯನ್ – ಶಿವರಾಜ್ ಕುಮಾರ್ ಟೀಮ್ ರನ್ನರ್‌ ಅಪ್

ಕನ್ನಡ ಚಲನಚಿತ್ರ ಕಪ್‌ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯ ಡಿಸೆಂಬರ್ 25ರಂದು ನಡೆದಿದೆ. ಅಂತಿಮ ಹಣಾಹಣೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಟೀಮ್ ಈ ವರ್ಷದ ಕ್ರಿಕೆಟ್ ಕಪ್ ಅನ್ನು ಗೆದ್ದು ಬೀಗಿದೆ. ಗಂಗ ವಾರಿಯರ್ಸ್ ತಂಡ ಶಿವರಾಜ್‌ ಕುಮಾರ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂತರ್ಸ್ ತಂಡವನ್ನು ನಾಲ್ಕು ರನ್‌ಗಳಿಂದ ಮಣಿಸಿ, ನಾಲ್ಕನೇ ಸೀಸನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ – ಅಮಿತ್ ನಾಯಕ್ ಜೊತೆ ವಿವಾಹ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಸಿಸಿ ಪಂದ್ಯಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಕಮಾಲ್ ಮಾಡಿದೆ. ಗಣೇಶ್ ತಂಡ ಲೀಗ್ ಮ್ಯಾಚ್‌ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ ಗೆದ್ದಿತ್ತು. ಫಿನಾಲೆ ತಲುಪಿ ಕಪ್ ಗೆದ್ದಿದೆ. ಶಿವಣ್ಣನ ನಾಯಕತ್ವದ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಂಗಾ ವಾರಿಯ್ಸ್ ತಂಡ 10 ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 111 ರನ್‌ಗಳನ್ನು ಕಲೆ ಹಾಕಿತು.

ರಾಷ್ಟ್ರಕೂಟ ತಂಡವು ಉತ್ತಮ ಆರಂಭ ಪಡೆದರೂ ಟಾರ್ಗೆಟ್ ರೀಚ್ ಆಗಲಿಲ್ಲ. ಗಣೇಶ್ ಅವರಿಗೆ ಕನ್ನಡ ಚಲನಚಿತ್ರ ಕಪ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದರು. ಈ ವೇಳೆ ಸುದೀಪ್, ದುನಿಯಾ ವಿಜಯ್, ಶಿವಣ್ಣ ಕೂಡ ಹಾಜರಿದ್ದರು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.

Sulekha